ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೊಡ್ಡಬಳ್ಳಾಪುರ ತಾಲೂಕು ಕ್ಷೇಮಾವನ ಟ್ರಸ್ಟ್ ಬೆಂಗಳೂರು ಗ್ರಾಮಾಂತರ ಇವರ ಸಂಯುಕ್ತಾಶ್ರಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು, ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷ ನಾಗೇಶ, ಜಿಲ್ಲಾ ನಿರ್ದೇಶಕ ಉಮಾರಬ್ಬ ,ಘಾಟಿ ಪ್ರಾಧಿಕಾರ ಸದಸ್ಯ ರಂಗಪ್ಪ, ಲಕ್ಷ್ಮಿ ನಾಯ್ಕ್, ನಾಗಭೂಷಣ್ ಪ್ರಾದೇಶಿಕ ಕಛೇರಿಯ ಕೆರೆ ಅಭಿಯಂತರರಾದ ಭರತ್ , ತಾಲ್ಲೂಕು ಯೋಜನಾಧಿಕಾರಿ ದಿನೇಶ್ , ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ನಾಯ್ಕ್, ಜಿಲ್ಲಾಧಿಕಾರಿ ಕಚೇರಿ ಇಂಜಿನಿಯರ್ ರವಿಚಂದ್ರ,ಕೆರೆ ನೋಡೆಲ್ ಅಧಿಕಾರಿ ಹಾಗೂ ತಾಲೂಕು ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ,ವಲಯದ ಮೇಲ್ವಿಚಾರಕ ಈರಣ್ಣ ಒಕ್ಕೂಟದ ಅಧ್ಯಕ್ಷ ಧನಂಜಯ್, ಮುನಿರಾಜ್ ಸೇವಾಪ್ರತಿನಿದಿ ರಿಜ್ವಾನಾ, ಶೈಲಜಾ,ಶೃತಿ ಉಪಸ್ಥಿತರಿದ್ದರು.

