ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿ ಉಳಿತಾಯ ಬಜೆಟ್ ಮಂಡಿಸಿದ ನಗರಸಭೆ

News Desk

ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
 ನಗರಸಭೆ 2025-26ನೇ ಸಾಲಿನಲ್ಲಿ 6.05 ಕೋಟಿ ಬಜೆಟ್ ಮಂಡಿಸಲಾಯಿತು. ಒಟ್ಟು ಖರ್ಚು 5.75 ಕೋಟಿ ಆದರೆ, 2.53 ಕೋಟಿ ಉಳಿತಾಯ ಬಜೆಟ್ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ಎಸ್ ಅನಿಲ್ ಕುಮಾರ್, ಸದಸ್ಯರುಗಳಿಂದ ಮೆಚ್ಚುಗೆ ಪಡೆದರಲ್ಲದೆ ಕರಡು ಆಯ-ವ್ಯಯ ಅಂಕಿ ಅಂಶಗಳನ್ನು ಸಭೆಗೆ ಸುದೀರ್ಘವಾಗಿ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧುವಾರ ಬಜೆಟ್ ಮಂಡನೆ ನಗರಸಭೆ ಅಧ್ಯಕ್ಷ ಜೆ.ಆರ್ ಅಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಾರ್ವಜನಿಕರ ಸಭೆ ಮತ್ತು ಕೌನ್ಸಿಲ್ ಪೂರ್ವಭಾವಿ ಸಭೆಗಳಲ್ಲಿ ಪಡೆದ ಸಲಹೆಗಳ ಪ್ರಕಾರ 202526ನೇ ಸಾಲಿಗೆ ನಗರಸಭೆಗೆ ಬರುವ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ನಗರಸಭೆಯ ಮುಖ್ಯ ಆದಾಯಗಳು:
ಸ್ವಯಂಘೋಷಿತ ಆಸ್ತಿ ತೆರಿಗೆ ಮತ್ತು ದಂಡ ವಸೂಲಾತಿ 
500 ಲಕ್ಷಗಳು, ನೀರಿನ ಶುಲ್ಕ ಸಂಪರ್ಕ ಮತ್ತು ದಂಡ ವಸೂಲಾತಿ 135 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ 35 ಲಕ್ಷ, ಉದ್ಯಮ ಪರವಾನಿಗೆ ಶುಲ್ಕ 25 ಲಕ್ಷ ಸೇರಿ ವಿವಿಧ ಬಾಬ್ತುಗಳ ವಾರ್ಷಿಕ ಹರಾಜು ಬಾಬ್ತು 35 ಲಕ್ಷಗಳು.
ಸಾರ್ವಜನಿಕ ಉದ್ದೇಶದ ನಿವೇಶನ ವಿಲೇವಾರಿಯಿಂದ ಬರುವ ಆದಾಯ 
100 ಲಕ್ಷ, ಹಕ್ಕು ವರ್ಗಾವಣೆ ಶುಲ್ಕ ಮತ್ತು ಹಕ್ಕು ನಕಲು ಶುಲ್ಕ 21 ಲಕ್ಷ ಇತರೆ ಮೂಲಗಳಿಂದ ಆದಾಯ 50 ಲಕ್ಷ ನಗರಸಭೆಗೆ ಬರುವ ನಿರೀಕ್ಷಿತ ಆದಾಯಗಳಾಗಿವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್.ಅನಿಲ್ ಕುಮಾರ್ ತಿಳಿಸಿದರು.

202526ನೇ ಸಾಲಿನ ನಗರ ಸಭೆಯ ಆದಾಯ ಮೂಲಗಳಾದ ಆಸ್ತಿ ತೆರಿಗೆ ನೀರಿನ ತೆರಿಗೆ ಉದ್ಯಮಿ ಪರವಾನಿಗೆ ಶುಲ್ಕ ಕಟ್ಟಡ ಪರವಾನಿಗೆ ಶುಲ್ಕ ಆದಾಯವನ್ನು ಹೆಚ್ಚಿಸಿಕೊಂಡು ಮಳಿಗೆ ಬಾಡಿಗೆ ಇತರೆ ಮೂಲಗಳಿಂದ ನಿರೀಕ್ಷಿಸಲಾದ ನಗರಸಭೆ ಆದಾಯದಿಂದ ಒಟ್ಟು  26 ಕೋಟಿ 36 ಲಕ್ಷ ಅಂದಾಜು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಸರಕಾರಿ ಅನುದಾನ:
ಎಸ್ಎಫ್ ಸಿ ಅನುದಾನ
250 ಲಕ್ಷ, ಎಸ್ಎಫ್ ಸಿ ವಿಶೇಷ ಅನುದಾನ 200 ಲಕ್ಷ, ಎಸ್ಎಫ್ ಸಿ ಕುಡಿಯುವ ನೀರಿನ ನಿಧಿ 10 ಲಕ್ಷ, 15ನೇ ಹಣಕಾಸು ಯೋಜನೆ ಅನುದಾನ 500 ಲಕ್ಷ ಸೇರಿ ಎಲ್ಲಾ ಆದಾಯ ಮೂಲಗಳಿಂದ ಬರುವ ಅನುದಾನಕ್ಕೆ ಅನುಗುಣವಾಗಿ ಹೊಸ ಯೋಜನೆ ಅಳವಡಿಸಿಕೊಳ್ಳಲು ಅಂದಾಜಿಸಲಾಗಿದೆ. ಕುಡಿವ ನೀರು, ಬೀದಿ ದೀಪ ಮತ್ತು ಸ್ವಚ್ಛತೆ ನಿವಾರಣೆಗೆ ಆದ್ಯತೆ ನೀಡಲಾಗಿದೆ ಎಂದು ಸ್ಥಾಯಿ ಅಧ್ಯಕ್ಷರು ತಿಳಿಸಿದರು.

ನೀರು ಸರಬರಾಜು ಯೋಜನೆ:
ನಾಗರಿಕರಿಗೆ ಪೈಪ್ ಲೈನ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು, ವಿವಿಧ ಕಡೆಗಳಲ್ಲಿ ಕೊಳವೆ ಬಾವಿ ಕೊರೆಸಿ ನೀರು ನೀಡಲು ನಗರಸಭೆ ಚಿಂತನೆ ಮಾಡಿದೆ.
ಹೊಸ ಪೈಪ್ ಲೈನ್ ಅಳವಡಿಸಿ ಯಂತ್ರೋಪಕರಣ ಖರೀದಿ ಮತ್ತು ದುರಸ್ತಿಗಾಗಿ ಖಾಸಗಿ ಅಥವಾ ನಗರಸಭೆ ವತಿಯಿಂದ ನಗರ ಸಭೆಯ ವ್ಯಾಪ್ತಿಯಲ್ಲಿ ನೀರು ಶುದ್ಧೀಕರಣ ಘಟಕಗಳ ಸ್ಥಾಪಿಸಿಸುವುದು ಒಟ್ಟು
113 ಲಕ್ಷಗಳನ್ನು ನಗರಸಭೆಯ ನೀರಿನ ನಿಧಿಯ ಅನುದಾನ ಮತ್ತು 15ನೆಯ ಹಣಕಾಸು ಅನುದಾನ ಮೀಸಲಿರಿಸಿ ನಗರದ ನಾಗರಿಕರಿಗೆ ಸಮರ್ಪಕ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ.

ಘನ ತ್ಯಾಜ್ಯ ನಿರ್ವಹಣೆ;
ಸಮಗ್ರ ಘನ ತ್ಯಾಜ್ಯ ನಿವಾರಣೆಗೆ
258 ಲಕ್ಷ ರೂ. ಕಾಯ್ದಿರಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಕೇಂದ್ರಗಳನ್ನ ತೆರೆದು ನಿರ್ವಹಣೆ ಮಾಡುವುದರ ಜೊತೆಯಲ್ಲಿ ಪರಿಸರ ಹಾಳು ಮಾಡುವ ಕೃತ್ಯಗಳಿಗೆ ದಂಡ ವಿಧಿಸಲು ನಗರಸಭೆ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚು ಕಸ ಉತ್ಪಾದನೆ ಮಾಡುವಂತಹ ಚಿಕನ್ ಮಟನ್ ಸೆಂಟರ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಬಾಳೆಕಾಯಿ ಅಂಗಡಿ, ಕಲ್ಯಾಣ ಮಂಟಪಗಳು, ಇತರೆ ಬಲ್ಕ್ ವೆಸ್ಟ್ ಉತ್ಪಾದಕರಿಂದ ತ್ಯಾಜ್ಯವನ್ನ ನೇರವಾಗಿ ನಗರ ಸಭೆಯ ವಾಹನದ ಮೂಲಕ ಸಂಗ್ರಹಿಸಿ ನಿರ್ವಹಣಾ ಶುಲ್ಕ ಪಡೆಯಲಾಗುವುದು ಎಂದು ಅವರು ಸಭೆಯಲ್ಲಿ ವಿವರಿಸಿದರು.

ನಗರದ ಸ್ವಚ್ಛತೆ ದೃಷ್ಠಿಯಿಂದ ಹೊರಗುತ್ತಿಗೆ ಆಧಾರದಲ್ಲಿ 78 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ.

ಬೀದಿ ದೀಪ: ನಗರಸಭೆ ನಿಧಿಯಿಂದ ನಗರದಲ್ಲಿ ಬೀದಿ ದೀಪಗಳ ಹೊರಗುತ್ತಿಗೆ ವಾರ್ಷಿಕ ನಿರ್ವಹಣೆ  65 ಲಕ್ಷ, ವಿದ್ಯುತ್ ಕಂಬ ಸ್ಥಳಾಂತರಕ್ಕಾಗಿ 10 ಲಕ್ಷ ಮತ್ತು ಎಸ್ಎಫ್ ಸಿ ವಿದ್ಯುತ್ ನಿಧಿಯಿಂದ ಬೀದಿ ದೀಪಗಳು ವಿದ್ಯುತ್ ಶುಲ್ಕ 500 ಲಕ್ಷ ಕಾಯ್ದಿರಿಸಲಾಗಿದೆಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ತಿಳಿಸಿದರು.

ಪಾದದಾಚಾರಿ ರಸ್ತೆ: 15ನೇ ಹಣಕಾಸು ಯೋಜನೆ ಅಡಿಯಲ್ಲಿ ಎಸ್ ಎಫ್ ಸಿ ಮುಕ್ತ ನಿಧಿ, ಎಸ್ಎಫ್ ಸಿ ವಿಶೇಷ ಅನುದಾನ ಮತ್ತು ಎಸ್ ಎಫ್ ಸಿ ಎಸ್ ಸಿ ಎಸ್ ಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು, ರಸ್ತೆಗಳ ನಿರ್ಮಾಣಕ್ಕೆ 350 ಲಕ್ಷ, ರಸ್ತೆ ಬುದ್ಧಿ ಚರಂಡಿ ನಿರ್ಮಾಣಕ್ಕೆ250 ಲಕ್ಷ, ಚರಂಡಿಗೆ 150 ಲಕ್ಷ, ಪಾದಚಾರಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ, ನಗರದ ಸಂಚಾರ ವ್ಯವಸ್ಥೆಗೆ ಅವಶ್ಯಕತೆ ಇರುವ ಕಾಮಗಾರಿ ಸಾಮಗ್ರಿಗಳು 10 ಲಕ್ಷ, ನಗರದ ವಿವಿಧ ವಾರ್ಡುಗಳಲ್ಲಿ ಬೀದಿ ದೀಪ ಸಂಚಾರಿ ದೀಪಗಳು ಇತ್ಯಾದಿಗಳಿಗೆ 25 ಲಕ್ಷ ಮೀಸಲಿಡಲಾಗಿದೆ.

ಉದ್ಯಾನವನ ಅಭಿವೃದ್ಧಿ:
ನಗರದ ವ್ಯಾಪ್ತಿಯಲ್ಲಿ ವಿವಿಧ ಬಡವಣೆಗಳಲ್ಲಿರುವ ಉದ್ಯಾನವನ ಜಾಗದಲ್ಲಿ ಉದ್ಯಾನವನ ಹಾಗೂ ಕೆರೆ ಅಭಿವೃದ್ಧಿ ಅಂದಾಜು
550 ಲಕ್ಷ ಅನುದಾನದಲ್ಲಿ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಒಳ ಚರಂಡಿ:
ನಗರದ ಒಳ ಚರಂಡಿ ಯೋಜನೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆ  ಮಂಜೂರಾಗಿದ್ದು ಸರ್ಕಾರದ ಹಂತದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ನಾಗರಿಕರ ಕಲ್ಯಾಣ ಅಭಿವೃದ್ಧಿ ಮತ್ತು ಸೌಲಭ್ಯಗಳು:
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇತರೆ ಸಾಮಾನ್ಯ ವರ್ಗದ ಅಂಗವಿಕಲರಿಗೆ ಕ್ರೀಡೆ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಸಾಲ ಸೌಲಭ್ಯಗಳು ವೈದ್ಯಕೀಯ ವೆಚ್ಚಗಳು ವಿದ್ಯಾಭ್ಯಾಸ ಪಕ್ಕಾ ಮನೆ ನಿರ್ಮಾಣ ಆಗೋ ಇನ್ನಿತರೆ ಸೌಲಭ್ಯಗಳಿಗೆ
24.10 ಶೇಕಡ 7.25 ಮತ್ತು ಶೇಕಡ 05 ರ ಯೋಜನೆಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯೋಜನೆಗಳ ವೆಚ್ಚ 79 ಲಕ್ಷ ವಿಂಗಡಿಸಲಾಗಿದೆ. ಶೇಕಡ 24.10 ಯೋಜನೆಯಲ್ಲಿ 48 ಲಕ್ಷ, ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗದವರ ಕಲ್ಯಾಣ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆ.

ಶೇಕಡ 7.25 ಯೋಜನೆಯಲ್ಲಿ 18 ಲಕ್ಷ, ಇತರೆ ಬಡ ವರ್ಗದವರಿಗೆ ಕಲ್ಯಾಣ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆ. ಅಂಗವಿಕಲರ ಕಲ್ಯಾಣ ಅಭಿವೃದ್ಧಿಗಾಗಿ 13 ಲಕ್ಷ ಕಾಯ್ದಿರಿಸಲಾಗಿದೆ. ಕಲೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಧನ 1 ಲಕ್ಷ ಕಾಯ್ದಿರಿಸಲಾಗಿದೆ.

ನಗರದ ಸರ್ವತೋಮುಖ ಅಭಿವೃದ್ಧಿ ಮಾಡಲು ಹಿರಿಯೂರು ನಗರ ಸಭೆಯ 202526 ನೇ ಸಾಲಿನ ಕರುಡು ಆಯ -ವ್ಯಯ ಪ್ರಾರಂಭಿಕ ಶುಲ್ಕ 20,54,54 ಜಮಾ 3951.25 ಒಟ್ಟು 6005.79 ಖರ್ಚು 5752.60 ಅಖೈರು ಶುಲ್ಕ253.19.

ನಗರಸಭೆ ಅಧ್ಯಕ್ಷ ಜೆ.ಆರ್.ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ,  ಪೌರಯುಕ್ತ ಎಂ ವಾಸಿಮ್, ಸದಸ್ಯರಾದ ಎಂ ಡಿ ಸಣ್ಣಪ್ಪ, ಶಿವರಂಜನಿ ಯಾದವ್, ಜಿ ಎಸ್ ತಿಪ್ಪೇಸ್ವಾಮಿ, ಈ ಮಂಜುನಾಥ್, ಬಿ ಎನ್ ಪ್ರಕಾಶ್, ಜಗದೀಶ್, ವಿಶಾಲಾಕ್ಷಮ್ಮ, ನಾಮ ನಿರ್ದೇಶಕ ಸದಸ್ಯರಾದ ವಿ ಶಿವಕುಮಾರ್, ಶಿವಕುಮಾರ್, ಪಲ್ಲವ, ಹೆಚ್ ಎಂ ಗುಂಡೇಶ್ ಕುಮಾರ್, ರತ್ನ ಮ್ಮ, ಚಿತ್ರಜೀತ್ ಯಾದವ್, ಮೊದಲ ಮರಿಯಾ, ಸಮೀವುಲ್ಲಾ, ಸುರೇಖಾ, ರಮೇಶ್ ಬಾಬು, ಶಂಷುನ್ನೀಸಾ, ವಿಶಾಲಾಕ್ಷಮ್ಮ ಸೇರಿದಂತೆ ಮತ್ತಿತರರು ಇದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";