ಹಲೋ…ಹಲೋ.. ಹಲೋ ಯಾರು?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲೋ…ಹಲೋ..

- Advertisement - 

ಹಲೋ ಯಾರು?
ಯಾರೆಳಿ ನೋಡೋಣ?
ಗೊತ್ತಾಗ್ಲಿಲ್ಲ!!
ಏನ್ರೀ ಆಗ್ಲೇ ಮರೆತುಬಿಟ್ರಾ. ?
ನಿಮ್ಮ ವಾಯ್ಸ್ ಎಲ್ಲೋ
ಕೇಳ್ದಂಗೆ ಇದೆಯಲ್ಲ

- Advertisement - 

ಹಲೋ… ಹಲೋ
ಓ..ಮತ್ತೆ ಕೇಳ್ತಾ ಇಲ್ವಾ,,?
ಈಗ ಕೇಳುಸ್ತ ಇದೆಯಾ ?
ಹಾo.. ಕೇಳುಸ್ತಾ ಇದೆ
ಸ್ವಲ್ಪ ಜೋರಾಗಿ ಮಾತಾಡಿ

ನೀವ್ ಕಟ್ ಮಾಡಿ
ನಾನೇ ಕಾಲ್ ಮಾಡ್ತೀನಿ
ಈ ಹಳೇ ಪೋನೋ!!!
ಒನ್ ವೇ ಆದ್ರೆ ದೇವ್ರೆ ಗತಿ

- Advertisement - 

ಹಲೋ…ಹಲೋ..
ಈಗ ಕೇಳಿಸ್ತಾ ಇದೆಯಾ
ಓಕೆ… ಹೇಳಿ ನಾನ್ಯಾರು
ಸಾರಿ ಸರ್ ಗೊತ್ತಾಗ್ತಾ ಇಲ್ಲ
ನಾನ್ರೀ …ಅಲೆಕ್ಸಾಂಡರ್
ಅಲೆಗ್ಸಾಂಡರ್ ಗ್ರಹಾಂ ಬೆಲ್
ಸಾರ್ ..ನೀವು. ..ಸಾರಿ ಸರ್
ನಾನು ಗೊತ್ತಿಡಿಲೇ ಇಲ್ಲ ..
ಇವತ್ತು ನನ್ನ ಹುಟ್ಟಿದ ಹಬ್ಬ
ಯಾರು ವಿಶ್ ಮಾಡ್ಳೆ ಇಲ್ಲ
ಅದಕ್ಕೆ ಪೋನ್ ಮಾಡ್ದೆ

ಹಲೋ… ಹಲೋ..
ಈಗ ಕೇಳುಸ್ತಾ ಇದೆಯಾ?
ಚೆನ್ನಾಗಿ ಕೇಳುಸ್ತಾ ಇದೆ ಸರ್,
ನಿಮ್ಮನ್ನ ಮರೆಯೋಕಾಗುತ್ತಾ????

ದೂರವಾಣಿ ಕಂಡು
ಹಿಡಿದ ವಿಜ್ಞಾನಿ
ಅಲೆಗ್ಸಾಂಡರ್ ಗ್ರಹಾಂ
ಬೆಲ್ ಇವರ ಹುಟ್ಟು
ಹಬ್ಬ 1847 ಮಾರ್ಚ್ 3
ಅವರ ನೆನಪಿಸಿ ಈ
ಕವನ
ಕವಿತೆ-ಗುಜ್ಜರ್, ದಾವಣಗೆರೆ.

 

Share This Article
error: Content is protected !!
";