ಕರ್ನಾಟಕ ರಾಜ್ಯೋತ್ಸವ ಹಾಗೂ ಶಂಕರ್ ನಾಗ್ ಜನ್ಮದಿನಾಚರಣೆ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಬನಶಂಕರಿಯ ಪದ್ಮನಾಭ ನಗರದ 15ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರು 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡದ ಹೆಸರಾಂತ ನಟ ದಿ. ಶಂಕರನಾಗ್ ರವರ 70 ನೇ ಜನ್ಮದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಿದರು.

 ಬೆಳಿಗ್ಗೆ 11 ಗಂಟೆಗೆ ತಾಯಿ ಭುವನೇಶ್ವರಿ ಮತ್ತು ಆಟೋ ರಾಜ ದಿ.ಶಂಕರ್ ನಾಗ್ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಹಚ್ಚಿ ಸಂಭ್ರಮಿಸುದರು, ಈ ಸಂದರ್ಭದಲ್ಲಿ ಉಚಿತ ಅನ್ನ ಪ್ರಸಾದ ಸಂತರ್ಪಣೆ ಏರ್ಪಡಿಸಿದ್ದರು.

ಅನೇಕ ಆಟೋ ಚಾಲಕರು ಮತ್ತು ಬಡಾವಣೆಯ ಅನೇಕ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";