ಚಂದ್ರವಳ್ಳಿ ನ್ಯೂಸ್, ಕಂಪ್ಲಿ:
ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಮಾವಿನಹಳ್ಳಿ ಈ ಕಲಾ ತಂಡವು “ಹಂಪಿ ಉತ್ಸವ-2025″ ರಲ್ಲಿ “ಸಾಸಿವೆಕಾಳು ಗಣಪ” ವೇದಿಕೆಯಲ್ಲಿ “ಶ್ರೀ ರೇಣುಕಾ ಜಮದಗ್ನಿಯರ ಕಲ್ಯಾಣ ಅರ್ಥಾತ್ ಕಾರ್ತಿವೀರಾರ್ಜುನ ವಧೆಯಲ್ಲಿ” “ಕೃತವೀರ್ಯ ಪುತ್ರ ಕಾರ್ತಿವೀರಾರ್ಜುನ ಪಟ್ಟಾಭಿಷೇಕ” ಸನ್ನಿವೇಶ ಬಯಲಾಟ ಪ್ರದರ್ಶನವನ್ನು ಮಾಡಿದರು.
ಮಾರ್ಚ್-2ರಂದು ಭಾನುವಾರ ರಾತ್ರಿ 09:20 ರಿಂದ 10 ಗಂಟೆಯವರೆಗೆ ಬಯಲಾಟ ಪ್ರದರ್ಶನ ನಡೆಯಿತು. ಕೃತವೀರ್ಯ ಪಾತ್ರವನ್ನು ಕುರುಬರ ಹೇಮೇಶ್ವರ, ಕಾರ್ತಿವೀರಾರ್ಜುನ ಪಾತ್ರವನ್ನು ಕೆ.ತಿಪ್ಪೇಸ್ವಾಮಿ ಕಂದಾರ ಮತ್ತು ಶ್ರೀ ರೇಣುಕಾ ರಾಜ ಪಾತ್ರವನ್ನು ಬಿ.ಕೆ ಸಿದ್ದಪ್ಪ ಧರ್ಮಪ್ಪ ಹಾಗೂ ಸಾರಥಿ ಪಾತ್ರದಲ್ಲಿ ಪಾಂಡುರಂಗ ಗುಡುದೂರು ನಿರ್ವಹಿಸಿದರು.
ವರ್ಣಾಲಂಕಾರ: ಬಿ.ಕರ್ಣಪ್ಪಾಚಾರಿ ಕಲ್ಲುಕಂಭ, ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಬಿ.ಗುರು ಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ ಹಾಗೂ ಸರ್ವ ಸದಸ್ಯರು ಬಯಲಾಟ ಕಲಾವಿದರು ಮತ್ತು ಸಂಘಟಕ ಬಿ.ಕೆ.ಸಿದ್ದಪ್ಪ ಧರ್ಮಪ್ಪ, ಧರ್ಮಣ್ಣ ಮತ್ತು ಪ್ರಕಾಶ್ ಎಂ, ತಂಬ್ರಹಳ್ಳಿ ಶಶಿಕುಮಾರ್, ತಿಮ್ಮಪ್ಪ, ಶಿವು, ಜಗದೀಶ್, ಗುರುಪಾದ, ಕೆ.ಲೋಕೇಶ್, ಊರಿನ ರೈತ ಬಾಂಧವರು ಗುರು ಹಿರಿಯರು ಮತ್ತು ಸಾರ್ವಜನಿಕರು ಮತ್ತು ಕಲಾ ಪೋಷಕರು ಪ್ರೋತ್ಸಾಹಿಸಿದರು.