ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇಹಳ್ಳಿ ಗ್ರಾಮದ ಆನಂದಪ್ಪ ಬಿನ್ ಮೋರಪ್ಪ (ವಯಸ್ಸು 68) ಕಾಣೆಯಾದ ಕಾಣೆಯಾದ ಕುರಿತು ಮೇ 1 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಆನಂದಪ್ಪ 6.2 ಅಡಿ ಎತ್ತರವಿದ್ದು, ಕೋಲು ಮುಖ ಎಣ್ಣೆಗೆಂಪು ಮೈ ಬಣ್ಣ, ದೃಢಕಾಯ ಮೈ ಕಟ್ಟು ಹೊಂದಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಪಂಚೆ ಧರಿಸುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಗುರುತು ಪತ್ತೆಯಾದವರು, ಚಿತ್ರಹಳ್ಳಿ ಪೊಲೀಸ್ ಠಾಣೆ ಸಂಖ್ಯೆ 08191-277277, 9480803165, ಹೊಳಲ್ಕೆರೆ ವೃತ್ತ ನಿರೀಕ್ಷಕರ ಕಚೇರಿ 08191-275376, 9480803135 ಚಿತ್ರದುರ್ಗ ಪೊಲೀಸ್ ಉಪಧೀಕ್ಷಕ ಕಛೇರಿ ಸಂಖ್ಯೆ 08194-222430, 9480803120 ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.




