ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ 68ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ (SHLCC) ಸಭೆಯಲ್ಲಿ ಒಟ್ಟು ₹29,679 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ 66,000ಕ್ಕೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಹೀಂದ್ರಾ ಏರೋಸ್ಪೇಸ್ (ಕೋಲಾರ): ಕೋಲಾರದಲ್ಲಿ ಏರೋಸ್ಪೇಸ್ ಬಿಡಿಭಾಗಗಳು ಮತ್ತು ಜೋಡಣೆ ಘಟಕ ಸ್ಥಾಪಿಸಲು ಮಹೀಂದ್ರಾ ಏರೋಸ್ಟ್ರಕ್ಚರ್ಸ್ 2,300 ಕೋಟಿ ಹೂಡಿಕೆ ಮಾಡಲಿದೆ.
ಏಕ್ವಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (ಧಾರವಾಡ): ಧಾರವಾಡದಲ್ಲಿ ಎಲೆಕ್ಟ್ರಾನಿಕ್ಸ್ ವಲಯದ ಬಿಡಿಭಾಗಗಳ ತಯಾರಿಕಾ ಘಟಕದ ವಿಸ್ತರಣೆಗಾಗಿ ಏಕ್ವಸ್ ಕಂಪನಿಯು ₹1,104 ಕೋಟಿ ಹೂಡಿಕೆ ಮಾಡಲಿದೆ.
ವೈಬ್ರನ್ಸಿ ರಿಯಲ್ ಎಸ್ಟೇಟ್ (ಬೆಂಗಳೂರು): ಬೆಂಗಳೂರಿನಲ್ಲಿ ಐಟಿ ಮತ್ತು ಐಟಿಇಎಸ್ ಆಫೀಸ್ ಸ್ಪೇಸ್ ಅಭಿವೃದ್ಧಿಗಾಗಿ ವೈಬ್ರನ್ಸಿ ರಿಯಲ್ ಎಸ್ಟೇಟ್ ಸಂಸ್ಥೆಯು 2,195 ಕೋಟಿ ಹೂಡಿಕೆ ಮಾಡಲಿದೆ.
ಟೊಯೋಟಾ ಕಿರ್ಲೋಸ್ಕರ್ (ಬೆಂಗಳೂರು): ಬೆಂಗಳೂರಿನ ಸಮೀಪ 'ಬಿಸಿನೆಸ್ ಇಂಟೆಲಿಜೆನ್ಸ್ ಹಬ್' ಸ್ಥಾಪಿಸಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ₹1,200 ಕೋಟಿ ಹೂಡಿಕೆ ಮಾಡಲಿದೆ.
ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ ಹಾಗೂ ಬಿಸಿನೆಸ್ ಇಂಟೆಲಿಜೆನ್ಸ್ ವಲಯಗಳಲ್ಲಿ ಈ ಭಾರಿ ಪ್ರಮಾಣದ ಹೂಡಿಕೆಗಳು ಹರಿದುಬರುತ್ತಿದ್ದು, ಕರ್ನಾಟಕವು ಭಾರತದಲ್ಲೇ ಉದ್ಯಮ ಮತ್ತು ಹೂಡಿಕೆಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ನೆಚ್ಚಿನ ತಾಣವಾಗಿ ಮುಂದುವರಿದಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.




