Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಮಗಳೂರಿನ 18 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Advertisement
ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಲೆಗ್​ ಬಾಲ್​ ಕ್ರಿಕೆಟ್​ ಕೂಡಾ ಜನಪ್ರಿಯತೆ ಪಡೆಯುತ್ತಿದ್ದು ಈ ಕ್ರೀಡೆಯಲ್ಲಿ ಚಿಕ್ಕಮಗಳೂರಿನ 18 ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿ ನಿಂತಿದ್ದಾರೆ.

ಲೆಗ್ ಬಾಲ್ ಕ್ರಿಕೆಟ್ ದಕ್ಷಿಣ ಏಷ್ಯಾ ದೇಶಗಳಾದ ಭಾರತ, ನೇಪಾಳ, ಭೂತನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಪ್ರತಿ ತಂಡದಲ್ಲಿ 11 ಜನರು ಆಟಗಾರರಿರುತ್ತಾರೆ. ವಿಕೆಟ್​ ಇರುತ್ತದೆ. ಬೌಲರ್​ ಫುಟ್ಬಾಲ್​ ಅನ್ನು ಅಂಡರ್​ ಆರ್ಮ್​ ಮೂಲಕ ಎಸೆಯುತ್ತಾರೆ.


ಎದುರಾಳಿ ಬ್ಯಾಟ್​ ಬದಲಾಗಿ ತನ್ನ ಕಾಲಿನಿಂದಲೇ ಬಾಲ್​ ಹೊಡೆಯಬೇಕು. ಈ ರೀತಿ ಬಲವಾಗಿ ಹೊಡೆದಾಗ ಆ ಬಾಲ್​ ಬೌಂಡರಿ ಲೈನ್‌ಗೆ ಹೋದರೆ ಫೋರ್, ಬೌಂಡರಿನಿಂದ ಆಚೆ ಬಿದ್ದರೆ ಸಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಕಾಲಿನಲ್ಲಿ ಆಡುವ ಈ ಗೇಮ್ ದೈಹಿಕ ಶಕ್ತಿಯನ್ನು ಹೆಚ್ಚು ಬೇಡುತ್ತದೆ.

ಭಾರತದಲ್ಲಿ 2011ರಿಂದಲೇ ಲೆಗ್​ ಕ್ರಿಕೆಟ್​ ಫೆಡರೇಷನ್​ ಇದ್ದು, ಮಹಿಳಾ ಮತ್ತು ಪುರುಷರ ತಂಡಗಳಿವೆ. ಈ ಕ್ರೀಡೆಯಲ್ಲಿ ಇದೀಗ ಕರ್ನಾಟಕವನ್ನು ಚಿಕ್ಕಮಗಳೂರಿನ ಬಾಲಕರು ಪ್ರತಿನಿಧಿಸುತ್ತಿದ್ದಾರೆ.

ಈ ಸಲ ರಾಷ್ಟ್ರ ಮಟ್ಟದ ಲೆಗ್​ ಬಾಲ್​ ಕ್ರಿಕೆಟ್​ ಟೂರ್ನಿ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆಯಲಿದೆ. ಕರ್ನಾಟಕದ ಜೂನಿಯರ್ ಹಾಗೂ ಸಬ್ ಜೂನಿಯರ್​ ತಂಡದಲ್ಲಿ ಕಡೂರು ತಾಲೂಕಿನ ಬೀರೂರು ಪಟ್ಟಣದ ದೇವರಹಳ್ಳಿಯಲ್ಲಿರುವ ಶ್ರೀ ಗುರು ಕ್ರೈಸ್ತ ಶರಣ ಶಾಲೆಯ ವಿದ್ಯಾರ್ಥಿಗಳಿದ್ದಾರೆ.

ಜೂನಿಯರ್ ವಿಭಾಗ:
12 ವರ್ಷದ ಬಾಲಕರ ತಂಡದಲ್ಲಿ ಹೇಮಂತ ಮಾರುತಿ, ಬೆಂಜೊಯ್, ಜ್ಞಾನೇಶ್,ತೇಜಸ್ ದ್ರುವ. (ನಾಯಕ) ತೇಜಸ್ ಎಚ್.ಎಲ್, ಚಿರಂಜೀವಿ ಷಣ್ಮುಖ ಸ್ಥಾನ ಪಡೆದಿದ್ದಾರೆ.


ಸಬ್​ ಜೂನಿಯರ್​ ವಿಭಾಗ:
14 ವರ್ಷದ ಬಾಲಕರ ತಂಡದಲ್ಲಿ ಭರತೇಶ್ (ನಾಯಕ), ಪ್ರೇಮಸಾಗರ್ಅಬೆಲ್ ಮಥಿಯಾಸ್, ಶಶಾಂಕ್, ಶ್ರೀಸ್ ಹೃತಿಕ್ ತೇಜಾ, ಜೀವನ್, ಜಶ್ವಂತ್ ಗಗನ್, ತರುಣ್ ಇದ್ದಾರೆ.

ಈ ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕುರಿತು ಕೋಚ್ ಗುರು ಪ್ರತಿಕ್ರಿಯಿಸಿ, "ನಾಸಿಕ್​ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಲೆಗ್​​ ಬಾಲ್​ ಟೂರ್ನಿಗೆ ನಮ್ಮ ಮಕ್ಕಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಜೂನಿಯರ್​ ಮತ್ತು ಸಬ್​ ಜೂನಿಯರ್​ ವಿಭಾಗದಲ್ಲಿ ನಮ್ಮ ಶಾಲೆಯ 18 ಮಕ್ಕಳು ಆಯ್ಕೆಯಾಗಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ" ಎಂದು ಹಾರೈಸಿದರು.

ಪ್ರಾಂಶುಪಾಲರಾದ ಸಿಸ್ಟರ್​ ತಾರಾ ಮಾತನಾಡಿ, "ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಇದು ಶಾಲೆಗೂ ಕೀರ್ತಿ ತರುವ ವಿಚಾರ" ಎಂದು ಸಂತಸ ವ್ಯಕ್ತಪಡಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ