Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರೈತರಿಗೆ ತಕ್ಷಣವೇ ₹2,500 ಇನ್‌ಪುಟ್ ಸಬ್ಸಿಡಿ - ಡಿಸಿಎಂ ಜಿ.ಪರಮೇಶ್ವರ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ತೀವ್ರ ಬರಗಾಲದಿಂದ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ
₹40,000 ಕೋಟಿಗೂ ಅಧಿಕವಾಗುವ ಸಾಧ್ಯತೆಯಿದ್ದು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರವು ಮೊದಲ ಹಂತವಾಗಿ ಪ್ರತಿ ರೈತರಿಗೆ ₹2,500 ರಂತೆ ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಹಾಗೂ ರೈತರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ಬೃಹತ್ ನಷ್ಟ ಹಾಗೂ ಮೆಮೊರಾಂಡಂ: ಬರದಿಂದ ರಾಜ್ಯದಲ್ಲಿ ಅಂದಾಜು ₹40,000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಈಗಾಗಲೇ ಮೊದಲ ಹಂತದ ಮೆಮೊರಾಂಡಂ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮೆಮೊರಾಂಡಂಗಳನ್ನು ಸಲ್ಲಿಸಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಅಂತಿಮ ಪರಿಹಾರ ಕೋರಲಾಗುವುದು.

ರೈತರಿಗೆ ತಕ್ಷಣದ ನೆರವು (ಇನ್‌ಪುಟ್ ಸಬ್ಸಿಡಿ): ಕೇಂದ್ರದ ನೆರವಿಗಾಗಿ ಕಾಯದೆ, ರೈತರ ತಕ್ಷಣದ ಸಂಕಷ್ಟವನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ಮುನ್ಮೂಲವಾಗಿ ಸುಮಾರು 45 ರಿಂದ 50 ಲಕ್ಷ ರೈತರಿಗೆ ತಲಾ ₹2,500 ರಂತೆ ಇನ್‌ಪುಟ್ ಸಬ್ಸಿಡಿ ನೀಡಲಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು ₹1,250 ಕೋಟಿ ವೆಚ್ಚವಾಗಲಿದೆ.

ಕೃಷಿಗೆ ಭಾರಿ ವಿದ್ಯುತ್ ಸಬ್ಸಿಡಿ: ರೈತರಿಗೆ ಸರ್ಕಾರದ ಇತರೆ ನೆರೆವಿನ ಭಾಗವಾಗಿ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಸುಮಾರು ₹22,000 ಕೋಟಿ ವಿದ್ಯುತ್ ಸಬ್ಸಿಡಿ ನೀಡುತ್ತಿದೆ ಎಂದು ಅವರು ವಿವರಿಸಿದರು.

ಕೇಂದ್ರ ತಂಡದ ಭೇಟಿ ಹಾಗೂ ಸರ್ವಪಕ್ಷ ನಿಯೋಗ: ಬರ ಪರಿಸ್ಥಿತಿ ಅಧ್ಯಯನಕ್ಕೆ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಲಿದ್ದು, ಮಾರ್ಗಸೂಚಿಯಂತೆ ನಷ್ಟ ಮೌಲ್ಯಮಾಪನ ಮಾಡಲಿದೆ. ಇದರ ಬೆನ್ನಲ್ಲೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಪಕ್ಷ ಸಭೆ ನಡೆಸಿ, ವಿರೋಧ ಪಕ್ಷದವರನ್ನೂ ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಿ, ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ವಾಸ್ತವಿಕ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು.

ವಿಶೇಷಚೇತನರ ಗೌರವಧನ ಹೆಚ್ಚಳದ ಬೇಡಿಕೆ: ರಾಮನಗರದಲ್ಲಿ ವಿಶೇಷಚೇತನರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಸಂಬಂಧಪಟ್ಟ ಇಲಾಖೆಯು ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ತರಬೇಕು. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಪ್ರಸ್ತಾವನೆ ಮಂಡಿಸಿದರೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಸ್ಪೀಟ್ ಅಡ್ಡೆ ಮೇಲೆ ಪೋಲೀಸರ ದಾಳಿ ಐದು ಜನರ ಬಂಧನಕೆವಿಕೆ ವತಿಯಿಂದ ರಾಸುಗಳ ಉಚಿತ ಆರೋಗ್ಯ ಶಿಬಿರರಸ್ತೆ ಒತ್ತುವರಿ ಯತ್ನ: ಗ್ರಾಮಸ್ಥರ ಆಕ್ರೋಶದ ಬಳಿಕ ಕಾಮಗಾರಿ ಸ್ಥಗಿತ40 ಲಕ್ಷ ರೈತರ ಖಾತೆಗೆ ತಲಾ 2,500 ರೂಪಾಯಿ ಪರಿಹಾರ ಜಮಾ ಮಾಡಲು ಸರ್ಕಾರದ ತೀರ್ಮಾನ!ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL ಸಲ್ಲಿಕೆಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಹುನ್ನಾರ: ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಪ್ರಕಾಶ್ ರೈ ಆಗ್ರಹರೈತರಿಗೆ ತಕ್ಷಣವೇ ₹2,500 ಇನ್‌ಪುಟ್ ಸಬ್ಸಿಡಿ - ಡಿಸಿಎಂ ಜಿ.ಪರಮೇಶ್ವರ್ಅನುಕಂಪದ ನೇಮಕಾತಿ ನಿರಂತರ ಸೌಲಭ್ಯ ಪಡೆಯುವ ಹಕ್ಕಲ್ಲ: ಹೈಕೋರ್ಟ್ ಮಹತ್ವದ ತೀರ್ಪುಕೂಡಲೇ ರೈತರ ಸಾಲ ಮನ್ನಾ ಮಾಡಲಿ: ವಿಪಕ್ಷ ನಾಯಕ ಅಶೋಕ್ ಆಗ್ರಹನಂದಿನಿ ಹಾಲಿನ ದರ ಶೀಘ್ರದಲ್ಲೇ ಏರಿಕೆ ಸಾಧ್ಯತೆ: ಪ್ರಸ್ತಾವನೆ ಸಲ್ಲಿಸುವಂತೆ ಕೆಎಂಎಫ್‌ಗೆ ಡಿಕೆ ಶಿವಕುಮಾರ್ ಸೂಚನೆ!