Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

200 ಯೂನಿಟ್ ಉಚಿತ ವಿದ್ಯುತ್‌ ಬದಲಿಗೆ 58 ಯೂನಿಟ್ 

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಹೇಗಾದರೂ ಮಾಡಿ ಅಧಿಕಾರಕ್ಕೆ ಏರಬೇಕೆಂದು ಚುನಾವಣೆಗೂ ಮೊದಲು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದ ಕರ್ನಾಟಕ ಕಾಂಗ್ರೆಸ್, ಗ್ಯಾರಂಟಿ ಬಲದಿಂದ ಅಧಿಕಾರಕ್ಕೆ ಬಂದ ಬಳಿಕ ಷರತ್ತುಗಳ ಅನ್ವಯ ಎಂಬ ನಿಯಮದಡಿ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಚುನಾವಣಾ ಪೂರ್ವದಲ್ಲಿ ಗೃಹಜ್ಯೋತಿ ಹೆಸರಿನಲ್ಲಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್‌ಎಂದು‌ಘೋಷಿಸಿದ್ದ ಕಾಂಗ್ರೆಸ್‌ಅಧಿಕಾರಕ್ಕೆ ಬಳಿಕ, ಗ್ರಾಹಕರ ವಾರ್ಷಿಕ ಸರಾಸರಿ ವಿದ್ಯುತ್‌ಬಳಕೆ ಲೆಕ್ಕ ಹಾಕಿ ಅದನ್ನೇ ಉಚಿತ ವಿದ್ಯುತ್‌ಎಂದು ನೀಡತೊಡಗಿತು, ಅಲ್ಲದೆ ಸರಾಸರಿಗಿಂತ ಹೆಚ್ಚುವರಿ ವಿದ್ಯುತ್‌ಬಳಕೆಗೆ ದುಪ್ಪಟ್ಟು ದರ ವಿಧಿಸಿ ಜನರನ್ನು ಕೊಳ್ಳೆ ಹೊಡೆಯ ತೊಡಗಿತು ಎಂದು ಬಿಜೆಪಿ ದೂರಿದೆ.

ಇದೀಗ ಹೊಸ ಸಂಪರ್ಕಗಳಿಗೆ ಕೇವಲ 58 ಯೂನಿಟ್‌ಉಚಿತ ಎಂದು ಘೊಷಿಸುವ ಮೂಲಕ ಜನರನ್ನು ಸುಲಿಗೆ ಮಾಡತೊಡಗಿದೆ. ವಾಸ್ತವದಲ್ಲಿ ಕಾಂಗ್ರೆಸ್‌ಸರ್ಕಾರದ ಉಚಿತ ಯೂನಿಟ್ ಮೀರಿ ಬಳಸುವ ವಿದ್ಯುತ್ತಿಗೆ ದುಪ್ಪಟ್ಟು ದರ ವಿಧಿಸುವುದರಿಂದ ಗೃಹ ಜ್ಯೋತಿ ಇಲ್ಲದೇ ಇರುತ್ತಿದ್ದರೂ ದುಬಾರಿ ಬಿಲ್‌ಬರುತ್ತಿರಲಿಲ್ಲ.

ಒಂದು ಕಡೆ ಉಚಿತ ಎನ್ನುತ್ತಲೇ ಜನಸಾಮಾನ್ಯರ ಕಿಸೆಗೆ ಕಾಂಗ್ರೆಸ್‌ಸರ್ಕಾರ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ. ಎಲ್ಲರಿಗೂ ಉಚಿತ ವಿದ್ಯುತ್‌ನೀಡುತ್ತೇವೆ ಎಂದು ಕಾಂಗ್ರೆಸ್‌ಪಕ್ಷ ಭರವಸೆ ನೀಡಿಲ್ಲ ಎಂಬ ಇಂಧನ ಸಚಿವರ ಹೇಳಿಕೆಯಂತೂ ಕಾಂಗ್ರೆಸ್‌ಸರ್ಕಾರದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ