Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ..

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ.....ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ.....

 ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು * ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು - ಶಾಸಕರು - ಮಹಾನಗರ ಪಾಲಿಕೆ - ಜಿಲ್ಲಾ ಪಂಚಾಯತ್ - ನಗರಸಭೆ - ತಾಲ್ಲೂಕು ಪಂಚಾಯತ್ -  ಪುರಸಭೆ - ಗ್ರಾಮ ಪಂಚಾಯತ್ *..........

 ಕೇಂದ್ರ ಸಂಪುಟ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿಗಳು - ಆಯುಕ್ತರು - ರಾಜ್ಯದ ಮುಖ್ಯ ಕಾರ್ಯದರ್ಶಿ - ವಿವಿಧ ಇಲಾಖೆಗಳ ಕಾರ್ಯದರ್ಶಿಗಳು - ಆಯುಕ್ತರು - ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕರು - ತಹಸೀಲ್ದಾರ್ - ಕಂದಾಯ ಅಧಿಕಾರಿ - ಪಿಡಿಓ *..........

 ಇನ್ನೂ ಇನ್ನೂ ಇವರಿಗೆ ಸಹಾಯಕ ಅಧಿಕಾರಿಗಳು, ಲೆಕ್ಕಪರಿಶೋಧಕರು, ಪೋಲೀಸರು, ವಾಹನಗಳು ಮತ್ತು ಅದರ ಚಾಲಕರು, ಹೇಳುತ್ತಾ ಹೋದರೆ ಇದೇ ಒಂದು ದೊಡ್ಡ ಪಟ್ಟಿ......

 ಸಾರ್ವಜನಿಕ ಹಣದಲ್ಲಿ ಇವರೆಲ್ಲರೂ ಸೇರಿ ಒಂದು ಅಂದಾಜಿನಂತೆ ದೇಶದಲ್ಲಿ ಇರುವ ಆದಾಯದ ಶೇಕಡಾ 50/60 ಕ್ಕೂ ಹೆಚ್ಚು  ಇವರ ಸಂಬಳ, ಖರ್ಚು, ವಿವಿಧ ಭತ್ಯೆಗಳು ಮತ್ತು ಇವರ ಪ್ರವಾಸ ಕಚೇರಿಗಳ ನಿರ್ವಹಣೆಗೇ ಖರ್ಚಾಗುತ್ತದೆ. ಇದರಲ್ಲಿ ಇವರು ಪಡೆಯುವ ಲಂಚದ ಹಣ ಸೇರಿಲ್ಲ.

 ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಪಾಸಾಗುವ ಪ್ರತಿ ಅಭ್ಯರ್ಥಿ ಪ್ರಾರಂಭದ ಸಂದರ್ಶನದಲ್ಲಿ ಹೇಳುವುದು ನಾವು ಬಡವರಿಗೆ ಪ್ರಾಮಾಣಿಕ ಸೇವೆ ಮಾಡಲು  ಬದ್ದರಾಗಿದ್ದೇವೆ. ಇದೇ ಏನು ಇವರ ಸೇವೆ.....

 ಇವರು ಪಡೆಯುವ ಕೂಲಿ ಸಾರ್ವಜನಿಕ ಹಣ ಎಂಬ ಪ್ರಜ್ಞೆ ಇವರಿಗೆ ಇರುವುದಿಲ್ಲವೇ. ಅದರ ಋಣ ತೀರಿಸಬೇಕು ಎಂಬ ಕನಿಷ್ಠ ಆತ್ಮಸಾಕ್ಷಿ ಸತ್ತು ಹೋಗಿದೆಯೇ ?

 ಒಂದು ತಿಂಗಳ ಸಂಬಳ ಒಂದು ದಿನ ತಡವಾದರೂ ಸರ್ಕಾರಿ ಅಧಿಕಾರಿಗಳು ಗಾಬರಿಗೊಳಗಾಗುತ್ತಾರೆ. ಬಹಳಷ್ಟು ಅಧಿಕಾರಿಗಳು ಲಂಚ ಕೊಡದಿದ್ದರೆ ಕೆಲಸವನ್ನೇ ಮಾಡಿಕೊಡುವುದಿಲ್ಲ.

 ನಿಜವಾಗಿಯೂ ದೇಶ ಅಭಿವೃದ್ಧಿಯಾಗಬೇಕು, ಜನರ ಜೀವನಮಟ್ಟ ಉತ್ತಮವಾಗಬೇಕು ಎಂಬ ಕನಸು ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಇದ್ದರೆ ಅವರು ಮೊದಲು ಮಾಡಬೇಕಾದ ಕೆಲಸ ಸರ್ಕಾರಿ ಯಂತ್ರವನ್ನು  ಶುದ್ದೀಕರಣ ಮಾಡಬೇಕು. ಹುಟ್ಟಿನಿಂದ ಸಾವಿನವರೆಗೂ ಬಡವರಿಗೆ ಸಹಾಯವಾಗುವ ಸಾಕಷ್ಟು ಯೋಜನೆಗಳು ಸರ್ಕಾರದ ಬಳಿ ಇದೆ. ಆದರೆ ಅದರ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲ.

 ಒಂದು ದಿನದಲ್ಲಿ ಔಪಚಾರಿಕವಾಗಿ 8 ಗಂಟೆಗಳ ಕೆಲಸ ಇರುತ್ತದೆ. ಅದರಲ್ಲಿ ಕನಿಷ್ಠ 4 ಗಂಟೆಗಳಷ್ಟು ಸರಿಯಾಗಿ ಕೆಲಸ ಮಾಡಿದರೆ ಅನೇಕ ಸಾಮಾನ್ಯ ಜನರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದರೆ ಅನೇಕ ಹಿರಿಯ ಅಧಿಕಾರಿಗಳು ಮನೆಯಲ್ಲಿ ಮಲಗಿಕೊಂಡು ಆಫೀಸಿನಲ್ಲಿ ಇರುವವರಿಗೆ ದೂರದ ಅಧಿಕೃತ ಪ್ರವಾಸ ಅಥವಾ ವಿಧಾನಸೌಧದಲ್ಲಿ ಮೀಟಿಂಗ್ ನಲ್ಲಿ ಇರುವುದಾಗಿ ಸದಾ ಸುಳ್ಳು ಹೇಳುವುದು ಒಂದು ಹವ್ಯಾಸವಾಗಿದೆ.

 " ಸರ್ಕಾರದ ಕೆಲಸ ದೇವರ ಕೆಲಸ " ಎಂದು ಹೇಳುವವರು  ದೇವರಿಗೂ ವಂಚಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅದಕ್ಕಾಗಿಯೇ ಹೇಳಿದ್ದು ನಾಚಿಕೆಯಾಗುತ್ತಿದೆ ಎಂದು........

 ನಾವು ಪ್ರಾಮಾಣಿಕರಾಗುವವರೆಗೂ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವ ನಮ್ಮ ಪರಿಚಿತರಿಗೆ ನಾವುಗಳು ಕನಿಷ್ಠ ಅವರ ಕರ್ತವ್ಯ ಪ್ರಜ್ಞೆ ನೆನಪಿಸುವ ಮೂಲಕ ಅಳಿಲು‌ ಸೇವೆ ಸಲ್ಲಿಸಲು‌ ಪ್ರಯತ್ನಿಸೋಣ......

 ಏಕೆಂದರೆ......ದೇಶಾಭಿಮಾನ ಕೇವಲ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿಸಿ ರಾಷ್ಟ್ರದ ಏಕತೆ - ಸಮಗ್ರತೆ - ಅಖಂಡತೆ - ಭಾವೈಕ್ಯತೆ - ಸಮೃಧ್ಧಿ - ಅಭಿವೃದ್ಧಿ ಬಗ್ಗೆ ಕಂಚಿನ ಕಂಠದ ಘೋಷಣೆಗಳುದೇಶದ ಹೆಮ್ಮೆಯ ಸಂವಿಧಾನ - ಅದರ ಆಶಯಗಳು - ಸಮಾನತೆ - ಸ್ವಾತಂತ್ರ್ಯ - ನ್ಯಾಯದ ಬಗ್ಗೆ ಪುಂಖಾನುಪುಂಖ ಭಾಷಣಗಳುಪತ್ರಿಕೆ ಟಿವಿಗಳಲ್ಲಿ ಅತ್ಯದ್ಭುತ ಲೇಖನ ಕಾರ್ಯಕ್ರಮಗಳು, ಕೆಲವೆಡೆ ಔತಣಕೂಟಗಳು ಹಲವೆಡೆ ಸಿಹಿ ಹಂಚಿಕೆ ಮಾತ್ರವಲ್ಲ....

 ನಮ್ಮ ದೇಶದಲ್ಲಿ ಸುಮಾರು ಶೇಕಡಾ 50/60  ರೈತ - ಕಾರ್ಮಿಕರಿದ್ದಾರೆ. ಅಂದರೆ ಸರಿಸುಮಾರು 70/80 ಕೋಟಿ ಜನರು ಕೃಷಿ ಮತ್ತು ಅದಕ್ಕೆ ಪೂರಕ ಕಾರ್ಮಿಕ ಕೆಲಸಗಳ ಮೇಲೆ ಅವಲಂಬಿತರು. ಅವರ ಪರಿಸ್ಥಿತಿ ಹೇಗಿದೆ ಗೊತ್ತೆ.

ದಯವಿಟ್ಡು ನಗಬೇಡಿ .....
 4 ನಿಂಬೆಹಣ್ಣಿನ ಬೆಲೆ ಕೇವಲ 10 ರೂಪಾಯಿ. 1 KG ತೂಗುವ 15  ಟಮ್ಯಾಟೋ  ಬೆಲೆ ಸುಮಾರು 10/15 ರೂಪಾಯಿಸಾವಿರಾರು ಕಾಳು ಸೇರಿಸಿ 1 KG ಆಗುವ ಅಕ್ಕಿ ರಾಗಿ ಗೋದಿ ಜೋಳ ಬೇಳೆ ಕಾಳುಗಳ ಬೆಲೆ 30 ರಿಂದ 100/150 ರೂಪಾಯಿಗಳು.

ನೂರಾರು ಗಿಡ ಬಳ್ಳಿಗಳು ಸೇರಿ ಕಟ್ಟುವ ಒಂದು ದೊಡ್ಡ ಸೊಪ್ಪಿನ  ಕಟ್ಟಿಗೆ 10/20/30 ರೂಪಾಯಿಗಳು. ಒಂದು ಲೀಟರ್ ನಷ್ಟು ಹಾಲಿಗೆ 40/45 ರೂಪಾಯಿಗಳು. ಇನ್ನೂ ಇನ್ನೂ ಅನೇಕ ...........

 ಮನುಷ್ಯ ಬದುಕಿರುವುದೇ ಈ ಪದಾರ್ಥಗಳಿಂದ. ಅವನ ಆರೋಗ್ಯ - ನೆಮ್ಮದಿ - ಉತ್ಸಾಹ - ವಂಶಾಭಿವೃದ್ಧಿ ಎಲ್ಲಕ್ಕೂ ಈ ಆಹಾರಗಳೇ ಕಾರಣ. ಇದನ್ನು ಬೆಳೆಸಲು ರೈತರು ಪಡುವ ಕಷ್ಟದ ಅಂದಾಜಿದೆಯೇ. ಅವನ ಶ್ರಮ, ಸಮಯಸವೆಸುವ ಬದುಕುಅನುಭವಿಸುವ ಯಾತನೆ ಯಾವ ಸಾಹಿತಿ ಕಲಾವಿದನಿಗೂ ವರ್ಣಿಸಲು ಸಾಧ್ಯವಾಗುವುದಿಲ್ಲ.......

 ಮಾಲ್ ಗಳಲ್ಲಿ ಕಾರ್ ಪಾರ್ಕಿ೦ಗ್ ಗೆ ಗಂಟೆಗೆ 50/100 ಇದೆ. ರೊಟ್ಟಿಯಂತ Pizza ಗೆ 400/500 ಬೆಲೆ ಇದೆ. ಸಾಧಾರಣ ದರ್ಜೆಯ ಷೂ ಮತ್ತು ಬಟ್ಟೆಗೆ ಸಾವಿರಾರು ರೂಪಾಯಿ, ಲಿಪ್ ಸ್ಟಿಕ್, ಫರ್ಪ್ಯೂಂ ಬೆಲೆಗೆ ಮಿತಿಯೇ ಇಲ್ಲ. ಮೊಬೈಲ್ ಕಂಪ್ಯೂಟರ್ ಗಳ ಬೆಲೆಯಂತೂ ನಿಮ್ಮ ಹಣದ ತಾಕತ್ತನ್ನು ಅವಲಂಬಿಸಿದೆ.

  ಏಕೆ ಈ ಅಸಮಾನತೆ. ರೈತರೇನು ಶಾಪಗ್ರಸ್ತರೇ... ಅವರು ಬೆಳೆದ ಫಸಲಿಗೆ ಒಂದು ವೈಜ್ಞಾನಿಕ ಬೆಲೆ ಬೇಡವೇ. ಒಂದು ಒಳ್ಳೆಯ ಮಾರುಕಟ್ಟೆ ಬೇಡವೇ. ಅವರು ಬೆಳೆಯುವುದೇನು ಕಸ ಕಡ್ಡಿಯೇ.......

 ರಾಜಕಾರಣಿಗಳೇ - ಅಧಿಕಾರಿಗಳೇ - ಪತ್ರಕರ್ತರೇ - ನೆನಪಿಡಿ. ಭಾರತವಿನ್ನೂ ಅಭಿವೃದ್ಧಿ ಹೊಂದಿಲ್ಲ. ಮೇಲ್ನೋಟದ ಭ್ರಮೆಗೆ ಒಳಗಾಗದಿರಿ. ನಿಲ್ಲಿಸಿ ನಿಮ್ಮ ನಾಟಕ.......

 ಎಲ್ಲಿಯವರೆಗೆ ರೈತ ಕಾರ್ಮಿಕರೆಲ್ಲಾ ಸೇರಿದಂತೆ ಎಲ್ಲಾ ಭಾರತೀಯರ ಮುಖದಲ್ಲಿ ನಗು ಕಾಣುವುದಿಲ್ಲವೋ, ಎಲ್ಲಿಯವರೆಗೆ ಅವರ ದಿನನಿತ್ಯದ ಬವಣೆಗಳು ಕಡಿಮೆಯಾಗಿ ನೆಮ್ಮದಿ ಮೂಡುವುದಿಲ್ಲವೋ ಅಲ್ಲಿಯವರಗೆ ಭಾರತ ಮುಂದುವರಿಯಲು ಪ್ರಯತ್ನಿಸುತ್ತಿರುವ ಹಿಂದುಳಿದ ದೇಶ. ನಾವಿನ್ನೂ ಅಭಿವೃದ್ಧಿಯ ಮೊದಲ ಮೆಟ್ಟಿಲ ಹತ್ತಿರದಲ್ಲಿದ್ದೇವೆ ಅಷ್ಟೆ...........

 ಭ್ರಮೆಗಳಿಂದ ಹೊರಬಂದು ನಿಜವಾದ ಸರ್ವತೋಮುಖವಾದ ಅಭಿವೃದ್ಧಿ ಸಾಧಿಸೋಣ. ಆಗ ಮಾತ್ರ  ನಮ್ಮ ಸಂಭ್ರಮಕ್ಕೆ ಒಂದು ಅರ್ಥ ಸಿಗುತ್ತದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ......

ಲೇಖನ:ವಿವೇಕಾನಂದ. ಎಚ್.ಕೆ.

9844013068........

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ