Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸ್ನೇಹದ ಪಯಣ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ನೇಹದ ಪಯಣ
ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ
, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು.

ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು.

Advertisement

ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು.

ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.

ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು.

ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲುಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು.

ನೀತಿ: ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು.
ನೀತಿ ಪಾಠ
:ಅರ್ಷಿಯಾ, 8ನೇ ತರಗತಿ, ಅನೇಕಾಮ್ ಶಾಲೆ, ಬೆಂಗಳೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು