ಚಂದ್ರವಳ್ಳಿ ನ್ಯೂಸ್, ಕಟಪಾಡಿ:
ಲೋoಬಾಡ್೯ ಮೆಮೊರಿಯಲ್ ಆಸ್ಪತ್ರೆ (ಮಿಷನ್ ) ವೈದ್ಯಕೀಯ ಪ್ರತಿನಿಧಿಗಳ ಸಂಘ ಜೆಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಇವರ ಆಶ್ರಯದಲ್ಲಿ ಸೈಂಟ್ ಝೆವಿಯರ್ ಫ್ರಾನ್ಸಿಸ್ ಚರ್ಚಿನಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಚರ್ಚಿನ ಸಭಾಂಗಣದಲ್ಲಿ ನಡೆಯಿತು.
ಸೈಂಟ್ ಫ್ರಾನ್ಸಿಸ್ ಝೆವಿಯರ್ ಚರ್ಚಿನ ಧರ್ಮ ಗುರು ಅನಿಲ್ ಡಿಸೋಜಾ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಯಾಥೋಲಿಕ್ ಸಭಾದ ಒಂಬತ್ತು ವರಾಡೋ ದ ಅಧ್ಯಕ್ಷರಾದ ಕಿರಣ್ ಲೂಯಿಸ್, ಬ್ರದರ್ ಕೆವಿನ್ ಡಿಸೋಜಾ, ಮಿಷನ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್,ಸಾಮಾನ್ಯ ರೋಗ ತಜ್ಞರಾದ ಡಾ. ವೈಭವ್ ಎಸ್, ಡಾ. ಕೆವಿನ್ ಪಾಂಡ್ಯನ್, ಈ ಎನ್ ಟಿ ತಜ್ಞರಾದ ಡಾ. ರೆಬೆಕ್ಕಾ
ವೈದ್ಯಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ಮಿಷನ್ ಆಸ್ಪತ್ರೆ, ಪಿಆರ್ ಓ ರೋಹಿ ರತ್ನಾಕರ್, ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲೂವಿಸ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಿಂಥಿಯಾ ಡಿಸಿಲ್ವ, ಸ್ತ್ರೀ ಶಕ್ತಿಕರಣದ ಮುಂದಿನ ಅಧ್ಯಕ್ಷ ಹಿಲ್ದಾ ಬಾರ್ನಸ್ ಕಾರ್ಯಕ್ರಮ ನಿರೂಪಿಸಿದರು.
ಸ್ತ್ರೀ ಶಕ್ತಿ ಕರಣದ ಹಿಂದಿನ ಸಂಚಾಲಕಿ ಅನಿತಾ ಡಿಸೋಜ ವಂದಿಸಿದರು.


