Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಕ್ಕುಂಡಿಯಲ್ಲಿ ಅಪರೂಪದ ನಾಗಶಿಲೆ ಪತ್ತೆ

Advertisement
ಚಂದ್ರವಳ್ಳಿ ನ್ಯೂಸ್, ಗದಗ:
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಅಪರೂಪದ ನಾಗಶಿಲೆ ಪತ್ತೆಯಾಗಿದೆ.


ಪುರಾತತ್ವ ತಜ್ಞರು ಹಾಗೂ ಸ್ಥಳೀಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೂ ಎರಡು ದಿನಗಳ ಹಿಂದಷ್ಟೇ ನಾಗಮಣಿ ಇರುವ ನಾಗರ ಕಲ್ಲೊಂದು ಪತ್ತೆಯಾಗಿತ್ತು. ಈಗ ನಾಗರ ಹಾವಿನ ಚಿತ್ರವಿರುವ ಹಸಿರು ಬಣ್ಣದ ಶಿಲೆ ಪತ್ತೆಯಾಗಿರುವುದು ಉತ್ಖನನದ ಮಹತ್ವ ಹೆಚ್ಚಿಸಿದೆ.


ನಾಗರ ಶಿಲೆ-
ಉತ್ಖನನ ಸ್ಥಳದಲ್ಲಿ ಪತ್ತೆಯಾದ ಶಿಲೆಯ ಮೇಲೆ ಹೆಡೆ ಎತ್ತಿ ನಿಂತಿರುವ ನಾಗರ ಹಾವಿನ ಸುಂದರ ಹಾಗೂ ಸ್ಪಷ್ಟ ಕೆತ್ತನೆ ಕಂಡುಬಂದಿದೆ.
ಹಸಿರು ಬಣ್ಣದ ಶಿಲೆಯಲ್ಲಿ ಮಾಡಿರುವ ಈ ಶಿಲ್ಪವು ನೈಜವಾಗಿ ಜೀವಂತ ನಾಗರ ಹಾವಿನ ರೂಪದಂತಿದೆ. ಶಿಲ್ಪಕಲೆಯ ಉನ್ನತ ಮಟ್ಟವನ್ನು ತೋರಿಸುತ್ತದೆ.


ಎರಡನೇ ನಾಗಶಿಲೆ-
ಉತ್ಖನನದ ವೇಳೆ ಹಲವು ಮಹತ್ವದ ಶಿಲೆಗಳು ಲಭ್ಯವಾಗುತ್ತಿದ್ದು ಕಳೆದ ಎರಡು ದಿನಗಳ ಹಿಂದೆ
ನಾಗಮಣಿ ಇರುವ ಕಲ್ಲೊಂದು ಇದೇ ಉತ್ಖನನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈಗ ಎರಡನೇ ನಾಗಶಿಲೆ ಸಿಕ್ಕಿರುವುದು, ಲಕ್ಕುಂಡಿ ಪ್ರದೇಶದಲ್ಲಿ ನಾಗಾರಾಧನೆಯ ಪರಂಪರೆ ಬಲವಾಗಿದ್ದಿರಬಹುದು ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.
ಇದರಿಂದಾಗಿ ಲಕ್ಕುಂಡಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಈ ಶಿಲೆಯ ಹಿನ್ನೆಲೆ
, ಅದರ ಉಪಯೋಗ ಹಾಗೂ ಕಾಲಘಟ್ಟದ ಕುರಿತು ವಿವಿಧ ಚರ್ಚೆಗಳು ನಡೆಯುತ್ತಿವೆ. ನಾಗಾರಾಧನೆ, ಭೂಸಂಸ್ಕಾರ ಅಥವಾ ಧಾರ್ಮಿಕ ಸಂಕೇತವಾಗಿ ಇದನ್ನು ಬಳಸಲಾಗುತ್ತಿದ್ದು ಸ್ಪಷ್ಟವಾಗಿದೆ.

ಮಣ್ಣಿನ ಬಿಲ್ಲೆ ಪತ್ತೆ-
ಉತ್ಖನನ ಪ್ರದೇಶದಲ್ಲೇ ನಾಗಶಿಲೆಯ ಜೊತೆಗೆ
ಸುಟ್ಟ ಮಣ್ಣಿನಿಂದ ಸಿದ್ಧವಾಗಿರುವ ಒಂದು ಬಿಲ್ಲೆಯೂ ಪತ್ತೆಯಾಗಿದೆ. ಈ ಬಿಲ್ಲೆ ಎರಡು ರೂಪಾಯಿ ನಾಣ್ಯದ ಗಾತ್ರಕ್ಕೆ ಸಮಾನವಾಗಿದ್ದು, ವೃತ್ತಾಕಾರದ ಆಕಾರದಲ್ಲಿದೆ. ಈ ಮಣ್ಣಿನ ಬಿಲ್ಲೆ ಯಾವ ಕಾಲದದ್ದು? ಇದನ್ನು ಆಟದ ಬಿಲ್ಲೆಯಾಗಿ ಬಳಸಲಾಗಿತ್ತೋ ಅಥವಾ ವಾಣಿಜ್ಯ, ಲೆಕ್ಕಪತ್ರ ಅಥವಾ ಧಾರ್ಮಿಕ ಉದ್ದೇಶಕ್ಕಾಗಿ ಉಪಯೋಗಿಸಲಾಗಿತ್ತೋ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಅಧ್ಯಯನ ಅಗತ್ಯ-
ಪುರಾತತ್ವ ಇಲಾಖೆಯ ತಜ್ಞರ ಅಭಿಪ್ರಾಯದಂತೆ
, ಪತ್ತೆಯಾದ ನಾಗಶಿಲೆ ಮತ್ತು ಮಣ್ಣಿನ ಬಿಲ್ಲೆಗಳ ಸಮಗ್ರ ಅಧ್ಯಯನ ನಡೆಯಬೇಕಿದೆ. ವೈಜ್ಞಾನಿಕ ಪರೀಕ್ಷೆ ಮತ್ತು ಶಿಲ್ಪಶಾಸ್ತ್ರೀಯ ವಿಶ್ಲೇಷಣೆಯಿಂದ ಮಾತ್ರ ಅವುಗಳ ಕಾಲಘಟ್ಟ ಹಾಗೂ ಬಳಕೆಯ ಉದ್ದೇಶ ಸ್ಪಷ್ಟವಾಗಲಿದೆ. ಲಕ್ಕುಂಡಿಯ ಉತ್ಖನನ ಮುಂದುವರಿದಂತೆ ಮತ್ತಷ್ಟು ಅಪರೂಪದ ಅವಶೇಷಗಳು ಪತ್ತೆಯಾಗುವ ಭರವಸೆ ಇದೆ.

ಹೊಸ ಸೇರ್ಪಡೆ-
ಲಕ್ಕುಂಡಿ ಉತ್ಖನನ ಪ್ರದೇಶದಲ್ಲಿ ಪತ್ತೆಯಾಗುತ್ತಿರುವ ನಾಗಶಿಲೆಗಳು ಮತ್ತು ಮಣ್ಣಿನ ಬಿಲ್ಲೆಗಳು ಈ ಪ್ರದೇಶದ ಶ್ರೀಮಂತ ಇತಿಹಾಸ
, ಧಾರ್ಮಿಕ ಆಚರಣೆಗಳು ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿವೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ