Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಣದ ಹಿಂದೆ ಓಡುವ ಸಮಾಜ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಣದ ಹಡವೆಯಲ್ಲಿ ಓಡುವ ಸಮಾಜಕ್ಕೆ ಎಚ್ಚರಿಕೆ ರೈತನನ್ನು ಮರೆತರೆ ಹಸಿವಿನ ಭವಿಷ್ಯ!. ಇಂದು ಜನರ ಓಟ ಒಂದೇ ದಿಕ್ಕಿನಲ್ಲಿ ಇದೆ. ಹಣ, ಹಣ ಮತ್ತು ಇನ್ನೂ ಹೆಚ್ಚು ಹಣ!. ಮಾನವೀಯತೆ, ಮೌಲ್ಯಗಳು, ಕೃಷಿ, ಅನ್ನದ ಮಹತ್ವ ಇವೆಲ್ಲ ಹಿಂಬದಿಗೆ ಸರಿದಿವೆ.

ಈ ಹಡವೆ ಒಂದಲ್ಲೊಂದು ದಿನ ಮಾನವನ ಬದುಕಿಗೇ ಮಾರಕವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಹಣವೇ ಜೀವನವಲ್ಲಅನ್ನವೇ ಜೀವನ-
ರೈತನನ್ನು ಕಡೆಗಣಿಸಿದರೆ ಏನಾಗುತ್ತದೆ
?. ಹೊಲದಲ್ಲಿ ಬೆವರು ಸುರಿಸುವ ರೈತನನ್ನು ನಾವು ಕೇವಲ ಮತದಾರನಾಗಿ ನೋಡುತ್ತಿದ್ದೇವೆ.

ಅವನ ಬೆಳೆಗಳಿಗೆ ನ್ಯಾಯಬೆಲೆ ಇಲ್ಲ. ಅವನ ಕಷ್ಟಕ್ಕೆ ಭದ್ರತೆ ಇಲ್ಲ. ಅವನ ಭವಿಷ್ಯಕ್ಕೆ ಖಾತ್ರಿ ಇಲ್ಲ. ಇದರಿಂದ ಏನಾಗುತ್ತದೆ?. ಕೃಷಿಯಿಂದ ಯುವಕರು ದೂರವಾಗುತ್ತಾರೆ. ಭೂಮಿಗಳು ಬತ್ತಲಾಗುತ್ತವೆ. ಉತ್ಪಾದನೆ ಕುಸಿಯುತ್ತದೆ. ಮಾರುಕಟ್ಟೆಯಲ್ಲಿ ಕೊರತೆ ಉಂಟಾಗುತ್ತದೆ. ಕೊರತೆ ಉಂಟಾದಾಗ ಹಣದುಬ್ಬರ ಹೆಚ್ಚುತ್ತದೆ.

ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಾಗದದಷ್ಟೇ ಆಗುತ್ತದೆ. ಇತಿಹಾಸದ ಎಚ್ಚರಿಕೆ. Zimbabwe ದೇಶದಲ್ಲಿ ಹಣದುಬ್ಬರ ಆಕಾಶಕ್ಕೇರಿದಾಗ ಜನರು ಚೀಲ ತುಂಬ ನೋಟು ಹಿಡಿದು ಹೋಗಿ ಒಂದು ರೊಟ್ಟಿ ತರುವ ಸ್ಥಿತಿ ಎದುರಿಸಿದರು.

ಇತ್ತೀಚೆಗೆ ಶ್ರೀಲಂಕ ದೇಶ ಆರ್ಥಿಕ ಸಂಕಷ್ಟದಲ್ಲಿ ಹಣ ಇದ್ದರೂ ಜನರು ಆಹಾರ ಮತ್ತು ಇಂಧನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಯಿತು. ಹಣ ಇದ್ದರೂ ವಸ್ತು ಇಲ್ಲದ ಸ್ಥಿತಿ. ಹಣ ತಿನ್ನಲಾಗುವುದಿಲ್ಲ. ಹಣವನ್ನು ಬೇಯಿಸಿ ಊಟ ಮಾಡಲಾಗುವುದಿಲ್ಲ. ಹಣದ ಹಡವೆಯಲ್ಲಿ ಓಡುತ್ತಾ ರೈತನನ್ನು ಮರೆತರೆ, ನಾಳೆ ಬೀದಿಯಲ್ಲಿ ಹಣ ಬಿದ್ದಿರಬಹುದು ಆದರೆ ಅನ್ನದ ಒಂದು ಮುಷ್ಟಿಗೂ ತತ್ತರಿಸಬೇಕಾದ ಸ್ಥಿತಿ ಬರಬಹುದು!
ಅಂತಿಮ ಎಚ್ಚರಿಕೆ- ರೈತ ದೇಶದ ಹೊಟ್ಟೆ ತುಂಬಿಸುವವನು. ಕೃಷಿ ದೇಶದ ಜೀವನಾಡಿ. ಹಣದ ಮೇಲೆ ಮಾತ್ರ ನಂಬಿಕೆ ಇಟ್ಟ ಸಮಾಜಗಳು ಕುಸಿದ  ಸಾಕಷ್ಟು ಉದಾಹರಣೆಗಳು ಇವೆ.....




ಅನ್ನದ ಮೇಲೆ ನಿಂತ ಸಮಾಜಗಳು ಮಾತ್ರ ಉಳಿದಿವೆ......ಹಣದ ದಾಸರಾಗಬೇಡಿಅನ್ನದ ಮೌಲ್ಯ ಅರಿತು ರೈತನನ್ನು ಉಳಿಸಿ!.....
ಲೇಖನ-ಶ್ರೀನಿವಾಸ್ ಕೆ ಟಿ, ಬೆಂಗಳೂರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ