Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ ಮಾಧ್ಯಮ ಸಂಶೋಧನೆಗೆ ವಿದೇಶದಲ್ಲಿ ವಿಫುಲ ಅವಕಾಶ

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
ಡಿಜಿಟಲ್ ಮಾಧ್ಯಮ ಕ್ರಾಂತಿಯ ಕಾಲ ಇದಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮ ಕುರಿತ ಸಂಶೋಧನೆಗೆ ವಿಫುಲ ಅವಕಾಶವಿದೆ ಎಂದು ಅಮೇರಿಕದ ಕೊಲರಾಡೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕಿ ವೈಭವಿ ಕೃಷ್ಣ ಜಿ. ಎ. ತಿಳಿಸಿದರು.


ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ಸಂಶೋಧನೆ ಮತ್ತು ಉದ್ಯೋಗಾವಕಾಶಗಳುಕುರಿತು ಮಾತನಾಡಿದ ಅವರು, ಮಾಧ್ಯಮ ಸಂಶೋಧನೆ ಒಂದು ವಿಸ್ತೃತ ಕ್ಷೇತ್ರವಾಗಿದ್ದು ಅದು ಸೀಮಾತೀತವಾಗಿದೆ ಎಂದರು.

ಅಮೇರಿಕದಂತಹ ದೇಶಗಳ ವಿವಿಗಳಿಗೆ ವಿವಿಧ ದೇಶಗಳಿಂದ ಸಂಶೋಧಕರು ಬರುವುದರಿಂದ ಸಹಭಾಗಿತ್ವದ ಸಂಶೋಧನ ಯೋಜನೆಗಳು ಹೆಚ್ಚಾಗಿರುತ್ತವೆ. ಇದರಿಂದ ಒಂದೇ ವಿಷಯದ ಕುರಿತ ವಿಭಿನ್ನ ದೃಷ್ಟಿಕೋನಗಳು ಗೊತ್ತಾಗುತ್ತವೆ ಎಂದರು.

ವಿದೇಶದಲ್ಲಿ ವ್ಯಾಸಂಗ ಹಾಗೂ ಸಂಶೋಧನೆ ಜತೆಜತೆಗೆ ಉದ್ಯೋಗ ಮಾಡುವುದಕ್ಕೂ ಸಾಕಷ್ಟು ಅವಕಾಶವಿದೆ. ಸಂಶೋಧನ ಸಹಾಯಕರೂ ಉತ್ತಮ ಸಂಭಾವನೆ ಪಡೆಯಬಲ್ಲರು. ಆದರೆ ಸರಿಯಾದ ವಿಶ್ವವಿದ್ಯಾನಿಲಯ ಹಾಗೂ ಮಾರ್ಗದರ್ಶಕರ ಆಯ್ಕೆ ಬಹಳ ಮುಖ್ಯ ಎಂದರು.

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧಕರು ಬೋಧನೆಯಲ್ಲಿ ತೊಡಗಿಸಿಕೊಳ್ಳುವುದು ಅಪೇಕ್ಷಣೀಯ. ಇದು ಅವರ ಸಂಶೋಧನ ಫಲಿತಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುವುದರೊಂದಿಗೆ ಸಂಶೋಧನೆ ಕುರಿತು ಹೆಚ್ಚಿನ ಸ್ಪಷ್ಟತೆಯೂ ದೊರೆಯುತ್ತದೆ ಎಂದರು.

ಅಮೇರಿಕದ ವಿವಿಗಳಲ್ಲಿ ಗ್ರಂಥಾಲಯಕ್ಕೆ ಮಹತ್ವದ ಸ್ಥಾನವಿದೆ. ಅಲ್ಲಿನ ಯಾವುದೇ ವಿಭಾಗಗಳಿಗಿಂತ ಗ್ರಂಥಾಲಯವೇ ದೊಡ್ಡದಾಗಿರುತ್ತದೆ. ಉತ್ತಮ ಸಂಶೋಧಕರಾಗಿ ರೂಪುಗೊಳ್ಳಲು ವಿಸ್ತೃತ ಅಧ್ಯಯನದ ಅವಶ್ಯಕತೆಯಿದೆ ಎಂದರು.

ವಿದೇಶದಲ್ಲಿ ಸಂಶೋಧನೆ ಮಾಡುವುದಕ್ಕೆ ಮೂಲಪ್ರೇರಣೆ ನನಗೆ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ದೊರೆಯಿತು. ವಿವಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದರು. ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕ ಡಾ. ಪೃಥ್ವೀರಾಜ ಟಿ., ವಿನಯ್ ಕುಮಾರ್ ಎಸ್.ಎಸ್., ಡಾ. ಜಿ. ಗಿರಿಜಮ್ಮ ಉಪಸ್ಥಿತರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ