Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮದ್ಯ ವ್ಯಸನಿ, ಭ್ರಷ್ಟಾಚಾರಿ, ಸ್ತ್ರೀಲೋಲ, ಜೂಜುಕೋರ, ಸೋಮಾರಿ ಸ್ವಾರ್ಥಿ ಅಪ್ಪ!?..

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಪ್ಪನ ದಿನ........ತಂದೆ ಎಂಬ ಪಾತ್ರವ ಕುರಿತು......ಅಪ್ಪಾ............ಸ್ವಲ್ಪ ಇಲ್ಲಿ ನೋಡಪ್ಪಾ.......
ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾವಲಂಬನೆ ಸಾಧ್ಯವಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )

ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ. ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ, ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.

ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ. ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು ಅಪರೂಪದ ಪ್ರಕರಣಗಳಲ್ಲಿ ಅಪ್ಪ ಮತ್ತು ಮಕ್ಕಳ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಹೊಡೆದಾಟಗಳು ಸಹ ಇವೆ )

ಹಾಗಾದರೆ ಅಪ್ಪಂದಿರೆಲ್ಲಾ ಶ್ರೇಷ್ಠವೇ, ಅಪ್ಪ ಅತ್ಯಂತ ಒಳ್ಳೆಯ ವ್ಯಕ್ತಿಯೇ, ಅಪ್ಪ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ? ಅಪ್ಪ ಇದು ವೈಯಕ್ತಿಕ ಸಂಬಂಧ ಮಾತ್ರವೇ ?.....

ಇಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ಅಪ್ಪ ತನ್ನ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾನೆ. ತನ್ನ ತನು ಮನ ಧನಗಳನ್ನು ಮಕ್ಕಳಿಗೆ ಅರ್ಪಿಸುತ್ತಾನೆ. ಒಂದು ರೀತಿಯ ತ್ಯಾಗ ಜೀವಿ...

ಅಪ್ಪನ ಇನ್ನೊಂದು ಮುಖವೂ ಇದೆ. ಬಹಳಷ್ಟು ಅಪ್ಪಂದಿರು ಕೌಟುಂಬಿಕವಾಗಿ ತುಂಬಾ ಒಳ್ಳೆಯವರೇ ಆಗಿರಬಹುದು ಆದರೆ ‌ಈ ವ್ಯವಸ್ಥೆಯಲ್ಲಿ ಅದೇ ಅಪ್ಪ ತುಂಬಾ ಕೆಟ್ಟವನು ಆಗಿರುತ್ತಾನೆ. ತನ್ನ ಮಕ್ಕಳ ಶ್ರೇಯೋಭಿವೃದ್ದಿಗೆ ಕಾನೂನು ಬಾಹಿರ ಅನೈತಿಕ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಇಡೀ ವ್ಯವಸ್ಥೆಯ ಅಧೋಗತಿಗೆ ತಾನೂ ಕಾರಣನಾಗಿರುತ್ತಾನೆ.

ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ ವ್ಯಸನಿ ಅಪ್ಪ, ಲಫಂಗ ಅಪ್ಪ, ಭ್ರಷ್ಟಾಚಾರಿ ಅಪ್ಪ, ಸ್ತ್ರೀಲೋಲ ಅಪ್ಪ, ಜೂಜುಕೋರ ಅಪ್ಪ, ಸೋಮಾರಿ ಅಪ್ಪ, ಸ್ವಾರ್ಥಿ ಅಪ್ಪ.

ಹೀಗೆ ಮುಗಿಯದ ಶತಾವತಾರದ ಅನೇಕ ಅಪ್ಪಂದಿರ ಉಗಮ ಸ್ಥಾನ ನಮ್ಮ ಸಮಾಜ. ಹಾಗೆಯೇ ಬಾಲ್ಯದಿಂದ ಮುಪ್ಪಿನವರೆಗೆ ಅಪ್ಪನ ಮೇಲಿನ ನಮ್ಮ ಅಭಿಪ್ರಾಯ ರೂಪಾಂತರ ಹೊಂದುತ್ತಲೇ ಇರುತ್ತದೆ. ಕೆಟ್ಟ ಅಪ್ಪ ಒಳ್ಳೆಯವನಾಗಿ, ಒಳ್ಳೆಯ ಅಪ್ಪ ಕೆಟ್ಟವನಾಗಿ, ಶ್ರೀಮಂತ ಅಪ್ಪ ಬಡವನಾಗಿ, ಬಡವ ಅಪ್ಪ ಶ್ರೀಮಂತನಾಗಿ ಸರ್ವಗುಣಗಳು ನಮ್ಮ ಗ್ರಹಿಕೆಗುನುಗುಣವಾಗಿ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಸ್ಥಿರವಾಗಿರುತ್ತದೆ.

ಸಮಾಜದ ಹಿತದೃಷ್ಟಿಯಿಂದ ಅಪ್ಪನನ್ನು ನನ್ನಪ್ಪ ಎಂದು ನೋಡುವುದರ ಜೊತೆಗೆ ಸಾಮಾಜಿಕ ಮನುಷ್ಯ -  ದೇಶದ ಪ್ರಜೆ ಎಂದೂ ಸಹ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಏಕೆಂದರೆ ಅಪ್ಪನ ಪಾತ್ರ ಸೀಮಿತವಲ್ಲ. ಅದು ಬಹು ಆಯಾಮಗಳನ್ನು ಹೊಂದಿದೆ. ಆ ಎಲ್ಲಾ ಜವಾಬ್ದಾರಿಗಳನ್ನು - ಕರ್ತವ್ಯಗಳನ್ನು ಆತ ನಿರ್ವಹಿಸಿದಾಗ ಮಾತ್ರ ಒಂದು ಸಮಾಜ ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದರೆ ಭ್ರಷ್ಟ ಅಪ್ಪ, ಮೋಸಗಾರ ಅಪ್ಪ ನಮಗೆ ಒಳ್ಳೆಯವನಾಗಿ ಕಂಡರೂ ಸಾಮಾಜಿಕವಾಗಿ ವ್ಯವಸ್ಥೆ ಹದಗೆಡಲು ಕಾರಣವಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳ ಪಾಲಿಗೆ ಕೆಟ್ಟ ಸಮಾಜ ನಿರ್ಮಾಣವಾಗಲು ಕಾರಣವಾಗುತ್ತದೆ.

ಬಹುಶಃ ಇತ್ತೀಚಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ಗುರುತಿಸಬಹುದಾಗಿದೆ. ನಮ್ಮ ಚಿಂತನೆಗಳು, ನಡವಳಿಕೆಗಳು ವಿಶಾಲತೆ ಪಡೆದಷ್ಟೂ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಅಪ್ಪನನ್ನು ನಮಗೆ ಮಾತ್ರ ಸೀಮಿತವಾಗಿ‌ ಅರ್ಥೈಸಿದರೆ ಕುಟುಂಬ ವ್ಯವಸ್ಥೆ ಚೆನ್ನಾಗಿರಬಹುದು. ಆದರೆ ಅದರ ಒಟ್ಟು ಪರಿಣಾಮ ಸಮಾಜದ ಆಗುಹೋಗುಗಳ ನಿರ್ಲಕ್ಷ್ಯದಿಂದ ನಮ್ಮ ಪಾಡಿಗೆ ನಾವು ವಾಸಿಸಲು ಅಯೋಗ್ಯವಾದ ಸಮಾಜ ಸೃಷ್ಟಿಯಾಗುತ್ತದೆ.

ಆದ್ದರಿಂದ ಅಪ್ಪನ ದಿನ ಒಬ್ಬ ಒಳ್ಳೆಯ ಜವಾಬ್ದಾರಿಯುತ ನಾಗರಿಕ ದಿನ ಸಹ‌ ಹೌದು ಮತ್ತು ಅದು ಹೆಚ್ಚು ಅರ್ಥಪೂರ್ಣ ಎಂದು ಭಾವಿಸುತ್ತಾ.

ಇಲ್ಲಿ ಒಂದು ಸೂಕ್ಷ್ಮತೆ ಅಡಗಿದೆ. ನೀವು ನಿಮ್ಮ ಮಕ್ಕಳನ್ನು ಎಷ್ಟೇ ಪ್ರೀತಿಯಿಂದ, ಎಷ್ಟೇ ಶಿಸ್ತಿನಿಂದ, ಎಷ್ಟೇ ಪ್ರಾಮಾಣಿಕರಾಗಿ ಬೆಳೆಸಿದರು ಅದರ ಫಲಿತಾಂಶ ಈ ವ್ಯವಸ್ಥೆ ಎಷ್ಟು ಆ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಈ ಸಮಾಜದಲ್ಲಿ ನೀವು, ನಿಮ್ಮ ಮಕ್ಕಳು, ನಿಮ್ಮ ಕುಟುಂಬ ಮಾತ್ರ ವಾಸಿಸುತ್ತಿಲ್ಲ. ನಿಮ್ಮಂತೆಯೇ ಅನೇಕ ಕುಟುಂಬಗಳ ಒಟ್ಟು ವ್ಯವಸ್ಥೆ ಈ ಸಮಾಜ. ನೀವು ಕಲಿಸುವ ಮೌಲ್ಯಗಳು ಸಮಾಜದಲ್ಲಿ ಉಪಯೋಗಕ್ಕೆ ಬರಬೇಕಾದರೆ ಅದನ್ನು ಉಳಿಸಬೇಕಾದ ಜವಾಬ್ದಾರಿ ಸಹ ಅಪ್ಪನದೇ ಆಗಿರುತ್ತದೆ.

ಪ್ರೀತಿ, ಕರುಣೆ, ಸರಳತೆ, ಕ್ಷಮಾಧಾನ, ಪ್ರಾಮಾಣಿಕತೆ, ಸತ್ಯ, ಶ್ರಮ, ದಕ್ಷತೆ ಎಲ್ಲವೂ ಅಡಕವಾಗಿರುವ ವ್ಯಕ್ತಿತ್ವ ತನ್ನ ನಿಜ ಸ್ವರೂಪದಲ್ಲಿ ಅರಳಲು ನಮ್ಮ ಸಾಮಾಜಿಕ ವ್ಯವಸ್ಥೆಯೂ ಅದಕ್ಕೆ ಪೂರಕವಾಗಿರಬೇಕು. ಅಪ್ಪ ಭ್ರಷ್ಟನಾಗಿ ಆ ಹಣವನ್ನು ತಂದು ತನ್ನ ಮಕ್ಕಳನ್ನು ಪ್ರೀತಿಯಿಂದ ಸಾಕಿದರೆ ಮುಂದೆ ಅದೇ ಸಾಮಾಜಿಕ ವ್ಯವಸ್ಥೆಯಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳಿಗೆ ಖಂಡಿತ ಭ್ರಷ್ಟ ವ್ಯವಸ್ಥೆಯ ವಿವಿಧ ಮುಖಗಳು ಪರಿಚಯವಾಗುತ್ತದೆ. ಆಗ ಆ ಮಕ್ಕಳು ತುಂಬಾ ನಿರಾಶರಾಗಿ ಜಿಗುಪ್ಸೆ ಹೊಂದಬಹುದು ಅಥವಾ ವ್ಯವಸ್ಥೆಯ ಭಾಗವಾಗಿ ತಾವು ಭ್ರಷ್ಟರಾಗಬಹುದು.

ಇವತ್ತಿನ ಸಾಮಾಜಿಕ ಮೌಲ್ಯಗಳು ಹೇಗಿವೆ ಎಂದರೆ ಪ್ರೀತಿ ತನ್ನ ಮೂಲ ಸ್ವರೂಪದಲ್ಲಿ ಉಪಯೋಗವೇ ಬರುವುದಿಲ್ಲ. ಪ್ರೀತಿಯ ತರಹ  ಇರಬೇಕು, ನಿಜವಾದ ಪ್ರೀತಿ ಮಾಡಬಾರದು. ಮಾಡಿದರೆ ಹುಚ್ಚರಾಗುವಿರಿ. ಅದೇರೀತಿ ಸ್ನೇಹದ ತರಾ ಇರಬೇಕು, ಒಳ್ಳೆಯವರ ತರಹ ಇರಬೇಕು, ಪ್ರಾಮಾಣಿಕರ ತರಾ ಇರಬೇಕು, ಸತ್ಯದ ತರಹ ಇರಬೇಕು. ನಿಜವಾಗಿಯೂ ಅದನ್ನು ಹೇಳಬಾರದು. ಆಗ ಅದು ಹೆಚ್ಚು ಮೌಲ್ಯ ಪಡೆಯುತ್ತದೆ. ಅಂದರೆ ಬ್ಯಾಲೆನ್ಸ್ ಅಥವಾ ಮ್ಯಾನೇಜ್ ಎಂಬ ಸ್ಥಿತಿಗೆ ಬಂದು ತಲುಪಿದೆ. ನಿಜವಾದ ಮಾನವೀಯ ಮೌಲ್ಯಗಳ ಜಾಗದಲ್ಲಿ ಕೃತಕತೆ ಬಂದು ಕುಳಿತಿದೆ.

ಈ ಸನ್ನಿವೇಶದಲ್ಲಿ ಅಪ್ಪ ಮಕ್ಕಳಿಗೆ ಹೇಳಿ ಕೊಡುವ ಪಾಠವಾದರೂ ಏನು. ಅಪ್ಪ ಹೇಳಿಕೊಡುವುದಕ್ಕಿಂತ ತಾನು ಏನು ಅನುಸರಿಸುತ್ತಾನೆ, ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಮುಖ್ಯ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಮಕ್ಕಳು ದೊಡ್ಡವರು ಹೇಳುವುದಂತೆ ಮಾಡುವುದಿಲ್ಲ ಅವರು ಮಾಡಿದಂತೆ ಮಾಡುತ್ತಾರೆ.

ಆದ್ದರಿಂದ ಅಪ್ಪ ಎಂಬುದು ಕೇವಲ ವೈಯಕ್ತಿಕ ಸಂಬಂಧ ಮತ್ತು ಜವಾಬ್ದಾರಿ ಮಾತ್ರವಲ್ಲ ಸಾಮಾಜಿಕ ಸಂಬಂಧ ಮತ್ತು ಜವಾಬ್ದಾರಿಯೂ ಇದೆ. ಅದರ ನಿರ್ವಹಣೆಯಲ್ಲಿ ಆತ ವಿಫಲನಾಗಿರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ.

ಪರಿಸರದಿಂದ ಪಾರಮಾರ್ಥಿಕದವರೆಗೆ ಅಪ್ಪನ ವ್ಯಕ್ತಿತ್ವದ ಪ್ರತಿಬಿಂಬಿವೇ ಈ ಸಮಾಜ. ಅಪ್ಪ ನೀನು ನಮ್ಮ ಕುಟುಂಬದ ಅಪ್ಪ ಮಾತ್ರವಲ್ಲ ಈ ದೇಶ ಈ ಸಮಾಜಕ್ಕೂ ಅಪ್ಪನೇ. ಅದನ್ನು ನೀನು ಅರಿತುಕೊಂಡು ಜೀವಿಸುವುದೇ ನಿನ್ನ ಮಕ್ಕಳಿಗೆ ನೀನು ಕೊಡುವ ಬಹುದೊಡ್ಡ ಕೊಡುಗೆ. ಆ ದಿನಗಳು ಬೇಗ ಬರಲಿ ಎಂದು ಆಶಿಸುತ್ತಾ.
ಲೇಖನ-ವಿವೇಕಾನಂದ. ಎಚ್. ಕೆ. 9663750451


 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ