ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆಗಸ್ಟ್ ತಿಂಗಳ 29 30 ಮತ್ತು 31ನೇ ತಾರೀಕಿನಂದು ಶ್ರೀ ರಾಘವೇಂದ್ರ ಸ್ವಾಮಿಗಳ "355ನೇ ಆರಾಧನಾ ಮಹೋತ್ಸವ"ವನ್ನು ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಬಾಶೆಟ್ಟಿಹಳ್ಳಿಯಲ್ಲಿರುವ ವಿಜಯನಗರದಲ್ಲಿ ನೆರವೇರಿಸಲಾಗುವುದು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಜಿ. ಗುರುರಾಜಚಾರ್ ತಿಳಿಸಿದರು.
355 ನೇ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಶ್ರಾವಣ ಮಾಸ ಕೃಷ್ಣಪಕ್ಷದ ಪ್ರಥಮ, ದ್ವಿತೀಯ, ತೃತೀಯ ದಂದು ಶ್ರೀ ರಾಘವೇಂದ್ರ ಸ್ವಾಮಿಗಳ "ಆರಾಧನಾ ಮಹೋತ್ಸವ"ವನ್ನು ನೆರವೇರಿಸಲಾಗುವುದು ಭಕ್ತಾಧಿಗಳು ಈ ಆರಾಧನಾ ಮಹೋತ್ಸವದಲ್ಲಿ ತಮ್ಮ ತನು, ಮನ, ಧನ, ಧಾನ್ಯಾಧಿಗಳ ಸೇವೆ ಸಲ್ಲಿಸಿ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
29-08-2026 ಪೂರ್ವಾರಾಧನೆ, ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ,ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಬೆಳಿಗ್ಗೆ ಮತ್ತು ಸಂಜೆ "ಭಜನೆ ಕಾರ್ಯಕ್ರಮ" ಮತ್ತು ಮಹಾಮಂಗಳಾರತಿ ನೆರವೇರಲಿದೆ.
30-08-2026 ಮಧ್ಯಾರಾಧನೆ, ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ ಬೆಳಿಗ್ಗೆ 9 ಕ್ಕೆ ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿಯವರಿಂದ "ಭಜನೆ ಮತ್ತು ವಾದ್ಯಗೋಷ್ಠಿ" “ಚಂಡೇವಾದ್ಯ" ಬೆಳಿಗ್ಗೆ 9.30ಕ್ಕೆ ರಾಜಬೀದಿಯಲ್ಲಿ "ರಥೋತ್ಸವ" ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
31-08-2026 ಉತ್ತರರಾಧನೆ, ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಸ್ತೋತ್ರ, ಮೋಕ್ಷಿತ್ ಎಂಬ ವಟುವಿಗೆ ಉಪನಯನ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸಂಜೆ “ಭಜನೆ ಕಾರ್ಯಕ್ರಮ" ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗನಡೆಯಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಕೋರಿದೆ.
ಸೆಪ್ಟೆಂಬರ್ 04 ರ ಶುಕ್ರವಾರ ದಂದು "ಶ್ರೀ ಕೃಷ್ಣ ಜನ್ಮಾಷ್ಟಮಿ" ಪ್ರಯುಕ್ತ ಶ್ರೀ ಕೃಷ್ಣನಿಗೆ ಸಂಜೆ 7-00 ರಿಂದ 9-30ರವರೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನೆಡೆಯಲಿದ್ದು ದಾನಿಗಳು ಶ್ರೀ ರಾಯರ ಪೂಜಾ ಕೈಂಕರ್ಯಗಳಿಗೆ ಸೇವೆ ಸಲ್ಲಿಸಲಿಚ್ಛಿಸುವರು ಶ್ರೀ ಕ್ಷೇತ್ರ ರಾಯರ ಮಠದ ಪ್ರಧಾನ ಅರ್ಚಕರಾದ ಜಿ. ಗುರುರಾಜಚಾರ್ (9535981175) ಮತ್ತು ವ್ಯವಸ್ಥಾಪಕರಾದ ಆರ್. ಜಶ್ವಿನ್(9739198823) ಅವರನ್ನು ಸಂಪರ್ಕಿಸಲು ಕೋರಿದೆ.




