Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಅಂಬುಲೆನ್ಸ್ ಡ್ರೈವರ್ ಮಗಳ ಅದ್ಬುತ ಸಾಧನೆ

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ವಿಶ್ವವಿದ್ಯಾನಿಲಯದಿಂದ ನಡೆದ
18ನೇ ಘಟಿಕೋತ್ಸವದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನರಗನಹಳ್ಳಿ ಗ್ರಾಮದ ಶೋಭ ಎನ್. ಮತ್ತು ರಂಗಸ್ವಾಮಿ ಸಿ.ಎನ್. ದಂಪತಿಯ ಮಗಳು ಜಯಶ್ರೀ ಎನ್.ಆರ್, ಎಂ.ಎಸ್ಸಿ ಪುಡ್ ಅಂಡ್ ನ್ಯೂಟ್ರೀಷನ್ ವಿಷಯದಲಿ ವಿಶ್ವ ವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕರ್ನಾಟಕ ರಾಜ್ಯಪಾಲರಾದ ತ್ಯಾವರ್ ಚಂದ್ ಗೆಹಲ್ಲೋಟ್ ರವರಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ.


ತಂದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಗನ ನವಿಲೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಜೀವಗಳ ಅತ್ಯಮೂಲ್ಯ ಕ್ಷಣಗಳನ್ನು ತನ್ನ ವೃತ್ತಿ ಬದ್ದತೆಗೆ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತ ಅದೇಷ್ಟೋ ಜೀವಗಳನ್ನು ಪರೋಕ್ಷವಾಗಿ ಕಾಪಾಡುವ ಅಂಬುಲೆನ್ಸ್ ವೃತ್ತಿ ಮಾಡಿಕೊಂಡೆ ತನ್ನ ಮಗಳ ಸುಂದರ ಭವಿಷ್ಯಕ್ಕೆ ಉನ್ನತ ಶಿಕ್ಷಣದ ಕನಸು ಕಂಡ ರಂಗಸ್ವಾಮಿಗೆ ಮಗಳು ಚಿನ್ನದ ಪದಕ ಪಡೆದ ಕ್ಷಣ ನನ್ನ ಜೀವನದ ಸಾರ್ಥಕ ಕ್ಷಣಗಳೆಂದು ಬಾವುಕದಿಂದ ಆನಂದಿಸಿದರು.


 ಮೂಲತ: ರೈತ ಕುಟುಂಬದ ಹಿನ್ನೆಲೆ ಹೊಂದಿದ ರಂಗಸ್ವಾಮಿ ಕುಟುಂಟ ಕೃಷಿಯ ಜೊತೆಗೆ ಜೀವಗಳ ಅತ್ಯಮೂಲ್ಯ ಕ್ಷಣಗಳನ್ನು ಉಳಿಸುವ ಕಾಯಕ ಲಭಿಸಿ ಅದರಲ್ಲೇ ನಿಷ್ಟೆಯಿಂದ ಕಾಯಕ ಮಾಡುತ್ತಿದ್ದ ಶೋಭ ರಂಗಸ್ವಾಮಿ ದಂಪತಿಗೆ ಮಗಳ ಸಾಧನೆ ತನ್ನ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿ ಬದ್ದತೆಗೆ ಸಂದ ಕ್ಷಣವಾಗಿದೆ ಎಂದರು.


ಜಯಶ್ರೀ ಎನ್. ಆರ್. ಪ್ರಾಥಮಿಕ ಶಿಕ್ಷಣವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ ಅದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಜಿಲ್ಲೆಯ ಶಿವಾರಗುಡ್ಡದಲ್ಲಿರುವ ಕೇಂದ್ರ ಸರ್ಕಾರದ ಜವಹಾರ ನವೋದಯ ಶಾಲೆಗೆ ಆಯ್ಕೆಯಾಗಿ ಪಿಯುಸಿ ವರೆಗೆ ಶಿಕ್ಷಣ ಮುಗಿಸಿದರು. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿನ ಪ್ರತಿಷ್ಠಿತ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಶಿಕ್ಷಣ ಮುಗಿಸಿದ ಜಯಶ್ರೀ ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಡ್ಡಿದ್ದು ತುಮಕೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿಭಾಗದ ಎಂ.ಎಸ್ಸಿ ಪುಡ್ ಅಂಡ್ ನ್ಯೂಟ್ರೀಷನ್ ವಿಷಯ.


ತುಮಕೂರು ವಿಶ್ವ ವಿದ್ಯಾನಿಲಯದ 18ನೇ ಘಟಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಜಯಶ್ರೀ ಎನ್. ಆರ್. ಮುಂದೆ ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಜಯಶ್ರೀಯ ಈ ಸಾಧನೆಗೆ ಕುಟುಂಬ ಸದಸ್ಯರು, ಗ್ರಾಮಸ್ಥರು. ಹಿರಿಯರು. ಸ್ನೇಹಿತರು ಶುಭ ಹಾರೈಸಿದ್ದಾರೆ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು