ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡಂತೆ “ಜಾನಪದ ಸಂಗಮ” ಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಸರ್ಕಾರವು ಹೊಸ ಯೋಜನೆಯಾಗಿ ಘೊಷಿಸಿದೆ. ಗಿರಿಜನ ಉಪಯೋಜನೆಯಡಿ ರಾಜ್ಯದ 4 ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾಪ್ರಕಾರದ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ 16 ರಿಂದ 40ರೊಳಗಿನ ವಯೋಮಾನದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅಕಾಡೆಮಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು – 560002 ಇವರಿಗೆ ದಿನಾಂಕ: 16-09-2026 ರೊಳಗೆ ತಲುಪಿಸಲು ಕೋರಿದೆ.
ಅರ್ಜಿ ನಮೂನೆಯು ಅಕಾಡೆಮಿ ವೆಬ್ ಸೈಟ್ ವಿಳಾಸ https://janapada.karnataka.gov.in/ ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿ ಇ–ಮೇಲ್ [email protected] ಹಾಗೂ ದೂರವಾಣಿ ಸಂಖ್ಯೆ 080-22215509 ಅನ್ನು ಸಂಪರ್ಕಿಸಬಹುದಾಗಿದೆ. ಶಿಬಿರಾರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೆ ಅಂತಿಮವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.




