Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರಾಧ್ಯ ಮೂರ್ತಿ ಆದರ್ಶಸ್ಫೂರ್ತಿ ಶ್ರೀಆಂಜನೇಯ ಸ್ವಾಮಿ...

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಆರಾಧ್ಯ ಮೂರ್ತಿ ಆದರ್ಶಸ್ಫೂರ್ತಿ ಶ್ರೀಆಂಜನೇಯ ಸ್ವಾಮಿ...
ಜನ್ಮ ನೀಡಿದ ತಾಯಿ-ತಂದೆ ಹಾಗೂ ಪರಮಪೂಜ್ಯ ಗುರುನಾಥರ ಪಾದಪದ್ಮಗಳಿಗೆ ಪ್ರಥಮ ನಮಸ್ಕಾರಗಳು, ಧೀರವೀರ ಶೂರ ಗಂಭೀರ ಶ್ರೀಸುಂದರ ಆಂಜನೇಯ ಸ್ವಾಮಿ ಕೀ ಜೈ, ಚತುರ್ಮುಖ ಬ್ರಹ್ಮರಿಂದ ಚಿರಂಜೀವತ್ವವನ್ನು ಹಾಗೂ ಪ್ರಭು ಶ್ರೀರಾಮರಿಂದ ಭವಿಷ್ಯತ್ ಬ್ರಹ್ಮರಾಗುವ ವರ ಹಾಗೂ ಯಾವುದೇ ಫಲಿತವನ್ನು ಆಶಿಸದೆ ಸೀತಾನ್ವೇಷಣೆ ಕಾರ್ಯದಲ್ಲಿ ಹನುಮಂತರು ಮಾಡಿರುವ ಸಹಾಯಕ್ಕೆ ಸ್ವತಃ ವಿಷ್ಣುಮೂರ್ತಿ ಅವತಾರವಾಗಿರುವ ಶ್ರೀರಾಮಚಂದ್ರ ಪ್ರಭು ನಿನ್ನ ಈ ಸಹಾಯಕ್ಕೆ ನಿನ್ನ ಋಣವನ್ನು ತೀರಿಸಲು ಸಾಧ್ಯವಿಲ್ಲ.

 ಈ ಸಹಾಯಕ್ಕೆ ತಕ್ಕ ಪ್ರತ್ಯುಪಕಾರವನ್ನು ನನ್ನಿಂದ ಮಾಡಲು ಸಾಧ್ಯವಿಲ್ಲವೆಂದು ಅನಿಸಿಕೊಂಡಿರುವ ಸೃಷ್ಟಿಯ ಏಕೈಕ ಜೀವವೆಂದರೆ ರಾಮಧೂತರಾದ ಹನುಮಂತರು, ಮಾನವರಿಗೆ ಸಕಲೇಶ್ವರ್ಯವನ್ನು ನೀಡುವ ಶಕ್ತಿ ಇರುವ ಅಸಾಧ್ಯ ಸಾಧಕರಾಗಿರುವಂತಹ ಹನುಮಂತರು ಬ್ರಹ್ಮೋತ್ಸವಗಳಲ್ಲಿ ಭಗವಂತನ ವಾಹನ ರೂಪದಲ್ಲಿ ನನಗೆ ಭಗವಂತನ ಸೇವೆ ಹಾಗೂ ನಾಮ ಸ್ಮರಣೆಗಿಂತ ಹೆಚ್ಚಾಗಿರುವುದು ಇನ್ನೇನು ಇಲ್ಲವೆಂದು ತನ್ನ ಕೈಗಳನ್ನು ಆಕಾಶದ ಕಡೆ ತೋರಿಸುತ್ತಾ ಇರುತ್ತಾರೆ.

ಸ್ವಾಮಿ ಹನುಮಂತರ ಆರಾಧನೆಯನ್ನು ತಿಳಿಸುವುದು ಪರಾಶರ ಸಂಹಿತೆ, ಹನುಮಂತರ ಕೃಪೆಗೆ ಶೀಘ್ರ ಕಾರಣವಾದ ತುಳಸಿದಾಸರು ರಚಿಸಿರುವ ಹನುಮಾನ್ ಚಾಲೀಸ ಪಾರಾಯಣ ಸರ್ವಕಾಲ ಸರ್ವಾವಸ್ಥೆಯಲ್ಲಿ ಮಾನವರಿಗೆ ರಕ್ಷಣಾ ಕವಚವಾಗಿರುತ್ತದೆ.ನವ ವಿಧಭಕ್ತಿಗಳಲ್ಲಿ ದಾಸ್ಯಭಕ್ತಿಗೆ ಪ್ರತೀತಿ ಆಂಜನೇಯ ಸ್ವಾಮಿಯವರು. ಸನಾತನ ಧರ್ಮವನ್ನು ರಕ್ಷಿಸಿ ವಿಜಯವನ್ನು ನೀಡುವುದಕ್ಕಾಗಿ ಕಪಿದ್ವಜರಾಗಿ ಕೇಸರಿ ಧ್ವಜದ ಮೇಲೆ ಇಂದಿಗೂ ನೆಲೆಸಿರುತ್ತಾರೆ, ಸ್ವಾಮಿ ವಿವೇಕಾನಂದರು ಹನುಮಂತರ ನಿಸ್ವಾರ್ಥ ಸೇವೆಯನ್ನು ಮಾನವರು ಆದರ್ಶವಾಗಿ ಮುಖ್ಯವಾಗಿ ಯುವ ಜನಾಂಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ನಮ್ಮ ಮಕ್ಕಳಿಗೆ ಸೂಪರ್ ಮ್ಯಾನ್ ಹೀಮಾನ್ ನಂತಹ ಅರ್ಥ ರಹಿತ ಕಥೆಗಳನ್ನು ತೋರಿಸುವ ಬದಲು ಹನುಮಂತರ ಕಥೆಯನ್ನು ಹಾಗೂ ಅವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಟ್ಟರೆ ಅವರ ಜನ್ಮ ಪ್ರಯೋಜನಕಾರವಾಗುತ್ತದೆ.
ನಮ್ಮ ಕರ್ನಾಟಕಕ್ಕೂ ಆಂಜನೇಯ ಸ್ವಾಮಿಯವರಿಗೂ ಅಭಿನಾಭಾವವಾಗಿರುವಂತ ಸಂಬಂಧವಿದೆ.  ಕರ್ನಾಟಕದ ಖ್ಯಾತ ಕವಿಗಳಾದ ಡಿ.ವಿ.ಜಿಯವರು ವಿದೇಶಿ ಪ್ರವಾಸದಲ್ಲಿದ್ದಾಗ ನಮ್ಮದು ಹನುಮಂತನ ಜನ್ಮಸ್ಥಾನವಾದ ಕಿಷ್ಕಿಂದ ಕರ್ನಾಟಕವೆಂದು ಹೆಮ್ಮೆಯಿಂದ ಹೇಳುಕೊಳ್ಳುತ್ತಾ ಇದ್ದರಂತೆ, ಹನುಮಂತರ ಜನ್ಮಸ್ಥಳ ಅಂಜನಾದ್ರಿ ಬೆಟ್ಟವಾದರೆ ಅವರು ಇದ್ದು ನಡೆದಾಡಿರುವುದು ಕಿಷ್ಕಿಂದ ಈಗಿನ ಹಂಪಿ, ವ್ಯಾಸರಾಯರು ಪ್ರತಿಷ್ಠಿಸಿರುವ 734 ಹನುಮಂತರ ದೇವಾಲಯಗಳಲ್ಲಿ ಮೊದಲನೆಯದು ಹಂಪಿಯಲ್ಲಿ ಇರುವಂತಹ ಯಂತ್ರೋದ್ಧಾರಕ ಹನುಮಂತರು.

ಇನ್ನು ನಮ್ಮ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಳಗೂರಿನಲ್ಲಿ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿರುವ ವೀರಪ್ರತಾಪ ಆಂಜನೇಯ ದೇವಾಲಯ ಹಾಗೂ ಚಳ್ಳಕೆರೆಗೆ 10 ಕಿ.ಮೀ ದೂರವಿರುವ ಮಶ್ಚಂದ್ರ ಎನ್ನುವ ಗ್ರಾಮದಲ್ಲಿ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿರುವ ದೇವಾಲಯಗಳು ಇದೆ. 

                       ಬೆಳಗೂರಿನ ಅವಧೂತರು ಬಿಂದು ಮಾಧವ ಶರ್ಮರು ಸಾಕ್ಷಾತ್ ಹನುಮತ್ ಸ್ವರೂಪಿಗಳೇ. ಪರಮ ಪೂಜ್ಯರಾದ ನಮ್ಮ ಗುರುನಾಥರು    ಶ್ರೀಶ್ರೀಮಹಾರಣ್ಯಮ್ ಮುರಳೀಧರ ಸ್ವಾಮಿಯವರು ಹನುಮಂತನ ಜೀವದ ಸಾರವಾದ ನಾಮ ಪ್ರಚಾರವನ್ನು ಕಳೆದು ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಮಾಡುತ್ತಾ ಬಂದಿದ್ದಾರೆ.




ರಾಮನಾಮ ಲೇಖನ ಪುಸ್ತಕಗಳನ್ನು ಹಾಗೂ ಚಾಟಿಂಗ್ ಬಾಕ್ಸ್ ಗಳನ್ನು ನೂರಾರು ದೇವಾಲಯಗಳಲ್ಲಿ ಇನ್ಸ್ಟಾಲ್ ಮಾಡಿ ದೊಡ್ಡ ಪ್ರಮಾಣದಲ್ಲಿ ನಾಮಪ್ರಚಾರವನ್ನು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಮುರಳೀಧರ ಸ್ವಾಮಿಯವರು ಭೂಲೋಕವನ್ನು ವೈಕುಂಠ ಲೋಕವನ್ನಾಗಿ ಮಾಡುವಂತಹ ನಿರಂತರ ಭಗವಂತನ ನಾಮವನ್ನು ಜಪಿಸುವ 108 ನಾಮದ್ವಾರ ಕೇಂದ್ರಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಮಹಾ ಸಂಕಲ್ಪವನ್ನು  ಮಾಡಿದ್ದಾರೆ. ಅದಕ್ಕಾಗಿ ಅವರ ಶಿಷ್ಯರಾದ ಶ್ರೀನಾಮಶೇಖರ್ ಜೀ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ನಾಮ ಪ್ರಚಾರ ಮಾಡುವಂತೆ ಆದೇಶವನ್ನು ನೀಡಿದ್ದಾರೆ.

ಅದಕ್ಕಾಗಿ ಶ್ರೀನಾಮಶೇಖರ್ ಜೀ ಅವರು ಚಿತ್ರದುರ್ಗದ ಹಲವು ತಾಲೂಕುಗಳಲ್ಲಿ ಹಳ್ಳಿಗಳಲ್ಲಿ ಸತ್ಸಂಗಗಳನ್ನು ಪ್ರಾರಂಭಿಸಿ ನಿರಂತರ ನಾಮಸ್ಮರಣೆ ನಡೆಯುವ ನಾಮದ್ವಾರವನ್ನು ಮೊಳಕಾಲ್ಮೂರಿನ ರಾಯಪುರದಲ್ಲಿ ಸ್ಥಾಪಿಸಿದ್ದಾರೆ.
ಅದೇ ರೀತಿ ನಮ್ಮ ಚಳ್ಳಕೆರೆಯಲ್ಲೂ ಸಹ ನಾಮದ್ವಾರ ಪ್ರಾರಂಭವಾಗುವಂತೆ ಅನುಗ್ರಹ ಮಾಡಬೇಕೆಂದು ಗುರುನಾಥರಲ್ಲಿ ಪ್ರಾರ್ಥನೆ ಮಾಡುತ್ತೇವೆ. ರುದ್ರಾಂಶ ಸಂಭೂತರು ಭವಿಷ್ಯತ್ ಬ್ರಹ್ಮರು ಅಷ್ಟಸಿದ್ದಿ ನವನಿಧಿದಾತರು ಅಸಾಧ್ಯ ಸಾಧಕರು, ಬುದ್ಧಿ ಬಲ ಯಶೋಧೈರ್ಯ ನೀಡುವ ಅಪಾರ ಶಕ್ತಿ ಇದ್ದರೂ ತಮ್ಮನ್ನು ತಾವು ಪ್ರಭು ಶ್ರೀರಾಮಚಂದ್ರ ಸೇವಕರಾಗಿ ರಾಮಬಂಟರಾಗಿ ರಾಮಭಕ್ತರಾಗಿ ಗುರುತಿಸಿ ಆ ನಾಮಗಳಿಂದ ಕರೆದರೆ ಪರಮಾನಂದವನ್ನು ಹೊಂದುವ ಭಕ್ತ ಆಂಜನೇಯ ಸ್ವಾಮಿಗೆ ಜಯವಾಗಲಿ ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕೀ:-
ಲೇಖನ:ಲತಾ ಗೋವಿಂದರಾಜು, ಚಳ್ಳಕೆರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ