ಶ್ರೀ ಸುತ್ತೂರು ಶ್ರೀಗಳ ವರ್ಧಂತಿಗೆ ಹೆಚ್.ಡಿ. ಕುಮಾರಸ್ವಾಮಿ ಭಕ್ತಿಪೂರ್ವಕ ಶುಭಾಶಯ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನ, ಅಕ್ಷರ ಮತ್ತು ಆಶ್ರಯದ ಮೂಲಕ ಲಕ್ಷಾಂತರ ಬಡ ಮಕ್ಕಳ ಪಾಲಿಗೆ ಪ್ರತ್ಯಕ್ಷ ದೈವವಾಗಿರುವ ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭಕ್ತಿಪೂರ್ವಕ ಶುಭಾಶಯಗಳನ್ನು ಕೋರಿ, ಪ್ರಣಾಮಗಳನ್ನು ಸಮರ್ಪಿಸಿದ್ದಾರೆ.
"ನಮ್ಮ ನಾಡಿಗೆ ಪರಮಪೂಜ್ಯರ ಮಾರ್ಗದರ್ಶನ, ಕರುಣೆ ಹಾಗೂ ಅನುಕಂಪಗಳು ನಿರಂತರವಾಗಿ ಸಿಗುವಂತಾಗಲಿ.
ಭಗವಂತನು ಪೂಜ್ಯರಿಗೆ ಇನ್ನು ಹೆಚ್ಚಿನ ಆಯುರಾರೋಗ್ಯ, ಶಕ್ತಿ ಮತ್ತು ಚೈತನ್ಯವನ್ನು ಪ್ರದಾನ ಮಾಡಲಿ" ಎಂದು ಅವರು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದ್ದಾರೆ.




