LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪಡಿತರ ಈ ತಿಂಗಳೇ ವಿತರಣೆ: 2 ಬಾರಿ ಬಯೋಮೆಟ್ರಿಕ್ ಕಡ್ಡಾಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಗಸ್ಟ್-2026 ಹಾಗೂ ಸೆಪ್ಟೆಂಬರ್-2026ರ ಒಟ್ಟು ಎರಡು ತಿಂಗಳ ಆಹಾರ ಧಾನ್ಯಗಳನ್ನು ಆಗಸ್ಟ್ ತಿಂಗಳಿನಲ್ಲೇ ಒಟ್ಟಿಗೆ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಪಡಿತರದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯುವ ಸಮಯದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗಳಿಗೆ ಎರಡು ಬಾರಿ ಪ್ರತ್ಯೇಕವಾಗಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆದುಕೊಳ್ಳಬೇಕಾಗಿದೆ.

ಎರಡೂ ತಿಂಗಳುಗಳ ಒಟ್ಟು ವಿತರಣೆಯ ವಿವರ ಇಂತಿದೆ. ಅಂತ್ಯೋದಯ ಪಡಿತರ ಚೀಟಿ (AAY)  ಹೊಂದಿರುವ ಪ್ರತಿಯೊಂದು ಕಾರ್ಡ್‍ಗೆ ಒಟ್ಟು 42 ಕೆಜಿ ರಾಗಿ (21 ಕೆಜಿ + 21 ಕೆಜಿ) ಹಾಗೂ 28 ಕೆಜಿ ಅಕ್ಕಿ (14 ಕೆಜಿ + 14 ಕೆಜಿ) ಸಿಗಲಿದೆ.

ಕೇಂದ್ರ ಆದ್ಯತಾ ಪಡಿತರ ಚೀಟಿ (PHH)  ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ಒಟ್ಟು 06 ಕೆಜಿ ರಾಗಿ (03 ಕೆಜಿ + 03 ಕೆಜಿ) ಹಾಗೂ 04 ಕೆಜಿ ಅಕ್ಕಿ (02 ಕೆಜಿ + 02 ಕೆಜಿ) ನೀಡಲಾಗುತ್ತದೆ. ಹಾಗೆಯೇ, ರಾಜ್ಯ ಆದ್ಯತಾ ಪಡಿತರ ಚೀಟಿ (PHH) ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ಒಟ್ಟು 10 ಕೆಜಿ ಅಕ್ಕಿ (05 ಕೆಜಿ + 05 ಕೆಜಿ) ವಿತರಿಸಲಾಗುವುದು.

ಯಾವುದೇ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ/ಮಾಲೀಕರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದಲ್ಲಿ ಅಥವಾ ಹಣ ಕೇಳಿದಲ್ಲಿ ರಾಜ್ಯ ಸಹಾಯವಾಣಿ ಸಂಖ್ಯೆ 1967ಗೆ ಹಾಗೂ ಜಂಟಿ ನಿರ್ದೇಶಕರ ಕಚೇರಿಗೆ/ತಹಶೀಲ್ದಾರ್ ಕಚೇರಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜವಳಿ ಉತ್ಪನ್ನ ರಫ್ತುಗೆ ಸರ್ಕಾರ ಉತ್ತೇಜನ:ಆಯುಕ್ತ ಎ.ಬಿ. ಬಸವರಾಜು ಎಂಪಿಆರ್ ಎಸಿಎಸ್ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಭಾರತಕ್ಕೆ 39 ಪದಕ: ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಕಾವೇರಿ ವಿಚಾರದಲ್ಲಿ ಸರ್ಕಾರದ ವಿಫಲತೆ: ಮಳೆಯಿಂದಷ್ಟೇ ರೈತರಿಗೆ ಆಸರೆ—ವಿಪಕ್ಷ ನಾಯಕ ಆರ್‌‌. ಅಶೋಕ್ ವಾಗ್ದಾಳಿನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವೈಫಲ್ಯ: ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಸಂಪುಟ ವಿಸ್ತರಣೆ ಹೈ ಡ್ರಾಮಾ: ಕೊನೆ ಕ್ಷಣದಲ್ಲಿ ಮಂಕಾಳಗೆ ಕೊಕ್, ಎಸ್.ಎಸ್.ಎಂಗೆ ಒಲಿದ ಸಚಿವ ಸ್ಥಾನ!ಕೈ ಸಂಪುಟ ಪುನಾರಚನೆ ಬಿರುಗಾಳಿ: ಸಿದ್ದರಾಮಯ್ಯ ಆಪ್ತರಾಗಿದ್ದ 12 ಹಿರಿಯ ನಾಯಕರಿಗೆ ಕೊಕ್!ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ಬಿಸಿ: ಜಯಚಂದ್ರ ಬೆಂಬಲಿಗರು, ಕುಂಚಿಟಿಗ ಸಮಾಜ ಆಕ್ರೋಶ – ರಾಜೀನಾಮೆಗೆ ಜಯಚಂದ್ರ ಸಿದ್ಧ?ಕೈ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಟೀಲ್ ವೇದಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿದ ಸನಾತನ ಧರ್ಮದ ಪ್ರಸಾರಕ ವೇದವ್ಯಾಸರು: ಎಚ್ ಲಕ್ಷ್ಮೀದೇವಮ್ಮ