LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

​ಬಸವರಾಜ ಬಿ.ಕೆ. ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ಇಲ್ಲಿನ ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಬಿ.ಕೆ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯವು ಪಿಎಚ್.ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.

​ದಾವಣಗೆರೆ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಬೆನಕನಹಳ್ಳಿ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬಿ.ಕೆ. ಅವರು ಸಂಶೋಧನೆ ನಡೆಸಿದ್ದರು. 

ಅವರು ಮಂಡಿಸಿದ "ಹಿಂದುಳಿದ ವರ್ಗಗಳ ರಾಜಕಾರಣ ಮತ್ತು ಗ್ರಾಮ ಪಂಚಾಯತಿಗಳು : ದಾವಣಗೆರೆ ಜಿಲ್ಲೆಯ ಒಂದು ಅಧ್ಯಯನ" ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ದಿನಾಂಕ: 02-06-2026 ರಂದು ಅಧಿಕೃತವಾಗಿ ಪಿಎಚ್.ಡಿ ಪದವಿ ನೀಡಿದೆ.

​ಹಿನ್ನೆಲೆ ಮತ್ತು ಅಭಿನಂದನೆ:
​ಡಾ. ಬಸವರಾಜ ಬಿ.ಕೆ. ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದ ಶಿಕ್ಷಕರಾಗಿದ್ದ ದಿ|| ಬಿ. ಕರಿಯಪ್ಪ ಮತ್ತು ದಿ|| ಕಮಲಮ್ಮನವರ ಕೊನೆಯ ಪುತ್ರರಾಗಿದ್ದಾರೆ.
​ಸಾಧನೆಗೈದ ಇವರಿಗೆ ಅವರ ಕುಟುಂಬದ ಸಮಸ್ತ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿ ಅಧ್ಯಾಪಕ ಮಿತ್ರರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜುಲೈ 28 ರಂದು ಉಚಿತ ಗ್ಯಾಸ್ಟ್ರೋ ಶಿಬಿರನಾಯಕ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಜಾತ್ರೆ ಮರುಳೋ ಜನ ಮರುಳೋ ಯಾವುದಯ್ಯ ಹುರಳು?ಐಶ್ವರ್ಯ ಕರಗುತ್ತದೆ, ಆದರ್ಶ ಉಳಿಯುತ್ತದೆಭೋವಿ ಸಮುದಾಯದ ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಇಮ್ಮಡಿ ಸ್ವಾಮೀಜಿ ಮನವಿಚಿತ್ರದುರ್ಗದಲ್ಲಿ ಜುಲೈ 29ಕ್ಕೆ ಗುರುಪೂರ್ಣಿಮೆ ಪ್ರಯುಕ್ತ 'ಗುರುವಂದನೆ'ಜೋಗಿ ಸಮುದಾಯ ಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಹಾಗೂ ಹಕ್ಕುಪತ್ರ ವಿತರಣೆಗೆ ಮನವಿ2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ರಾಜಕೀಯ ಸಂನ್ಯಾಸದ ಸುಳಿವು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯವಿದ್ಯಾರ್ಥಿ ಹೋರಾಟದ ನೆಪದಲ್ಲಿ ಬೆಂಕಿ ಹಚ್ಚಲು ಯತ್ನಿಸಿದ 'ಮುಲ್ಲಾ'ನ ಕೃತ್ಯ ಖಂಡಿಸಿದ್ದೇನೆಯೇ ಹೊರತು ಮುಸ್ಲಿಂ ಸಮುದಾಯವನ್ನಲ್ಲ: ಸಿ.ಟಿ. ರವಿ ಸ್ಪಷ್ಟನೆ ಕಾರ್ಯಕರ್ತರೊಂದಿಗೆ 'ಮನ್ ಕೀ ಬಾತ್' ವೀಕ್ಷಿಸಿದ ಬಿ.ವೈ. ವಿಜಯೇಂದ್ರ