LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜುಲೈ 28 ರಂದು ಉಚಿತ ಗ್ಯಾಸ್ಟ್ರೋ ಶಿಬಿರ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
, ಬೋಧಕ ಆಸ್ಪತ್ರೆ (ಸಿಎಂಸಿಆರೈ) ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಜುಲೈ ೨೮ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಗರದ ಸಿಎಂಸಿಆರೈನ ಕೊಠಡಿ ಸಂಖ್ಯೆ ೧೫ರಲ್ಲಿ ಉಚಿತ ಗ್ಯಾಸ್ಟ್ರೋ ಶಿಬಿರ ಏರ್ಪಡಿಸಲಾಗಿದೆ.

ದಾವಣಗೆರೆ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಯಕೃತ್ತು ವೈದ್ಯರಾದ ಡಿ.ಕೆ.ಅಶ್ವಿನ್ ಅವರು ಉಚಿತವಾಗಿ ಗ್ಯಾಸ್ಟ್ರೋ ಶಿಬಿರ ನಡೆಸುವರು.

ಹೊಟ್ಟೆನೋವು, ಹೊಟ್ಟೆ ಉಬ್ಬುವಿಕೆ, ಅಜೀರ್ಣ, ಎದೆಯುರಿ, ವಾಕರಿಕೆ, ವಾಂತಿ, ಮಲದಲ್ಲಿ ರಕ್ತ, ಗ್ಯಾಸ್, ವಾಯು, ಅಗಾಗ ತೇಗು ಬರುವುದು, ಮಲಬದ್ಧತೆ, ಅತಿಸಾರ ಬೇದಿ, ಹಸಿವಿನ ಕೊರತೆ, ನುಂಗಲು ತೊಂದರೆ, ತೀವ್ರವಾದ ಹೊಟ್ಟೆ ನೋವು, ವಾಂತಿಯಲ್ಲಿ ರಕ್ತ, ಹಠಾತ್ ತೂಕ ನಷ್ಟ, ಕಮಾಲೆ ಸೇರಿದಂತೆ ಈ ಗ್ಯಾಸ್ಟ್ರೋ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಮತ್ತು ಫೋಷಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ೯೫೩೫೦೨೫೭೪೩, ೭೨೫೯೭೫೯೯೮೨ ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸಿಎಂಸಿಆರೈ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತರಿಗೆ 3 ದಿನಗಳ ವಸತಿಯುಕ್ತ ಉಚಿತ ಸಾವಯವ ಕೃಷಿ ತರಬೇತಿ ಹಾಗೂ ಪ್ರವಾಸಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಕುಮಾರಸ್ವಾಮಿ, ಆರ್.ಅಶೋಕ್ ಚಾಲನೆ: ಪಾದಯಾತ್ರೆಯಲ್ಲಿ ಹಿರಿಯೂರು ಮುಖಂಡರು ಭಾಗಿಸರ್ಕಾರಿ ಶಾಲೆಗೆ ಭೂಮಿ ದಾನ ಅತ್ಯಂತ ಶ್ರೇಷ್ಠ ಕಾರ್ಯ-ಎನ್. ಶ್ರೀನಿವಾಸ್ ಚಿನ್ಮೂಲಾದ್ರಿ ಅಕ್ಷರೋತ್ಸವ ಕವಿಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎಲ್.ಪಾಲಾಕ್ಷಯ್ಯಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ:ಬಿಡದಿ ಟೌನ್‌ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಸಮರ: ಬೈರಮಂಗಲದಿಂದ ಬೆಂಗಳೂರಿಗೆ 'ಪಾದಯಾತ್ರೆ' ಆರಂಭ"ನನ್ನನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ": ಹೆಚ್.ಡಿ. ಕೆ ವಾಗ್ದಾಳಿ ಖಾತೆ ಹಂಚಿಕೆ, ಸಂಪುಟ ಪುನಾರಚನೆ ಕಸರತ್ತು: ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಶಿವಕುಮಾರ್ಪೊಲೀಸರ ಮೆಗಾ ಆಪರೇಷನ್: 105 ಅಕ್ರಮ ಬಾಂಗ್ಲಾ ವಲಸಿಗರ ಬಂಧನ, ಗಡಿಪಾರಿಗೆ ಕ್ರಮಸಚಿವ ನಾಗೇಂದ್ರ ರಾಜೀನಾಮೆಗೆ ಶ್ರೀರಾಮುಲು ಆಗ್ರಹ; ರೆಡ್ಡಿ ಬ್ರದರ್ಸ್‌ಗೆ ಈಶ್ವರ್ ಖಂಡ್ರೆ ತಿರುಗೇಟು