Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಾವಣಗೆರೆ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ 'ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್' ರಾಷ್ಟ್ರೀಯ ಪ್ರಶಸ್ತಿ

Advertisement
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಐದಂತಸ್ತಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ
'ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್' ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.

ಹಳೇ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯ 90 ಕೋಟಿ ಅನುದಾನ ಮತ್ತು ಕೆಎಸ್ಆರ್​ಟಿಸಿ ನಿಗಮದ 30 ಕೋಟಿ ಅನುದಾನ ಸೇರಿ ಒಟ್ಟು 120 ಕೋಟಿ ಅನುದಾನ ಬಳಸಿಕೊಂಡು ಅತ್ಯುತ್ತಮ ಮೂಲ ಸೌಕರ್ಯಗಳುಳ್ಳ ಐದಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಏಕಕಾಲದಲ್ಲಿ 46 ಬಸ್​ ನಿಲುಗಡೆ:
ದಾವಣಗೆರೆ ನಗರದಲ್ಲಿ
9 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಸಿದ್ದಗೊಂಡಿದ್ದು, ನಿಲ್ದಾಣದಲ್ಲಿ ಎರಡು ಶಾಪಿಂಗ್ ಮಾಲ್​ಗಳು, ಮೂರು ಸಿನಿಮಾ ಥಿಯೇಟರ್​ಗಳು ಹಾಗೂ ಆರು ಲಿಫ್ಟ್ ಸೇರಿದಂತೆ ಎರಡು ಎಸ್ಕಲೇಟರ್ ವ್ಯವಸ್ಥೆ ಮಾಡಲಾಗಿದೆ.‌ಬಸ್ ನಿಲ್ದಾಣದಲ್ಲಿ ಒಂದೇ ಬಾರಿಗೆ 46 ಬಸ್​ಗಳು ನಿಲುಗಡೆ ಮಾಡಬಹುದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. ಉಪಾಹಾರ, ಊಟ ಸೇವಿಸಲು ಹೋಟೆಲ್ ವ್ಯವಸ್ಥೆ ಸಹ ಮಾಡಲಾಗಿದೆ.

ಅತ್ಯುತ್ತಮ ಪಾರ್ಕಿಂಗ್​:
ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ ಸಾರ್ವಜನಿಕರ
500 ದ್ವಿಚಕ್ರ ಹಾಗೂ 104 ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಈ ನಿಲ್ದಾಣದಲ್ಲಿರುವ ಮಾಲ್, ಸಿನಿಮಾ ಥಿಯೇಟರ್ ಹಾಗೂ ಉಳಿದ ಕಾಂಪ್ಲೆಕ್ಸ್​ಗಳಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಸ್ಮಾರ್ಟ್​ಸಿಟಿಗೆ, ಉಳಿದ ಶೇ.50 ರಷ್ಟು ಕೆಎಸ್ಆರ್​ಟಿಸಿಗೆ ಸೇರಬೇಕು ಎಂದು ಒಪ್ಪಂದ ಮಾಡಿಕೊಂಡು ನಿರ್ವಹಣೆ ಮಾಡಲಾಗಿದೆ.

ಸ್ಮಾರ್ಟ್​ ಸಿಟಿ ಎಂಡಿ: ಸ್ಮಾರ್ಟ್ ಸಿಟಿ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ರೀಜನಲ್ ಅವಾರ್ಡ್ ಸಿಕ್ಕಿದೆ. ಬಸ್ ನಿಲ್ದಾಣದಲ್ಲಿ ಜನರಿಗೆ ಸಿಗುತ್ತಿರುವ ಮೂಲ ಸೌಕರ್ಯಗಳು ಹಾಗೂ ಬಸ್ ನಿಲ್ದಾಣದ ಆಕಾರ ಚೆನ್ನಾಗಿ ಮೂಡಿ ಬಂದಿರುವುದರಿಂದ 'ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್' ರಾಷ್ಟ್ರಮಟ್ಟದ ಅವಾರ್ಡ್ ಬಂದಿದ್ದು ಸಂತಸ ಸಡಗರ ಮನೆ ಮಾಡಿದೆ. ರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಮ್ಮನ್ನು ಮತ್ತೊಷ್ಟು ಎಚ್ಚರಗೊಳಿಸಿದೆ ಎಂದು ಅವರು ತಿಳಿಸಿದರು.

 ಹೋರಾಟಗಾರ ಆವರೆಗೆರೆ ವಾಸು ಮಾತನಾಡಿ ದಾವಣಗೆರೆ ನಗರದಲ್ಲಿ ಹೊಸ ಬಸ್ ನಿಲ್ದಾಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇದಕ್ಕೆ ರಾಷ್ಟ್ರೀಯ ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್' ಅರ್ವಾಡ್ ಬಂದಿದೆ‌. ಪ್ರಶಸ್ತಿ ಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಹಿಂದೆ ದಾವಣಗೆರೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ದಿ. ಕಾಮ್ರೇಡ್ ಪಂಪಾಪತಿ ಅವರ ಹೋರಾಟ ಅವಿಸ್ಮರಣೀಯ. ಅವರ ಹೆಸರನ್ನು ನಿಲ್ದಾಣಕ್ಕೆ ಇಡಬೇಕು ಎಂದು ಅವರು ಆಗ್ರಹ ಮಾಡಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ