ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪ್ರತಿ ವರ್ಷದಂತೆ ಈ ವರ್ಷವೂ ಮಧುರನಹೊಸಹಳ್ಳಿ ಗ್ರಾಮದ ಶ್ರೀ ಸೀತಾರಾಮ ಭಜನಾ ಸಂಘದಿಂದ 99ನೇ ಶ್ರಾವಣ ಮಾಸದ ಭಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ದೇವರ ಫೋಟೋ ಮತ್ತು ಗರುಡಗಂಬ ಹಿಡಿದು ಗ್ರಾಮದ ಎಲ್ಲಾ ಮನೆಗಳಿಗೆ ಹೋಗಿ ಭಜನೆ ಮತ್ತು ಪೂಜೆ ಮಾಡಿ ಪ್ರತಿಯೊಂದು ಮನೆಯಲ್ಲೂ ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮದಲ್ಲಿನ ಎಲ್ಲಾ ದೇವಸ್ಥಾನಗಳಲ್ಲೂ ಭಜನೆ ಕಾರ್ಯಕ್ರಮ ನೆರವೇರಿಸಿ ಉತ್ತಮ ಮಳೆ-ಬೆಳೆಯಾಗಿ ಜನ-ಜಾನುವಾರುಗಳಿಗೆ ಅರೋಗ್ಯ ಕೊಟ್ಟು ಕಾಪಾಡಲಿ ಎಂದು ಗ್ರಾಮಸ್ಥರು ದೇವರಲ್ಲಿ ಪ್ರಾರ್ಥಿಸಿದರು.
ಭಜನಾ ಕಾರ್ಯಕ್ರಮ ಆಗಸ್ಟ್ 15ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 6ರ ವರೆಗೆ ನಡೆಯುತ್ತದೆ. 18 ಗ್ರಾಮಗಳ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಮಾಡಲಾಗುತ್ತದೆ.
ಭಜನಾ ಸಂಘ 1928ರಲ್ಲಿ ಸ್ಥಾಪನೆ ಅಗಿದ್ದು ಇಂದಿಗೆ 99ವರ್ಷ ಪೂರೈಸಿದೆ. ಶತಮಾನೋತ್ಸವಕ್ಕೆ ಇನ್ನೊಂದು ವರ್ಷ ಬಾಕಿ ಇದೆ. ಭಜನಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಧುರನಹೊಸಹಳ್ಳಿ ಗ್ರಾಮದ ಎಂ.ಕೆಂಪೇಗೌಡರು, ಉಪಾಧ್ಯಕ್ಷರಾದ ಶ್ಯಾಕಲನದೇವನಪುರದ ಎಸ್.ರೇಣುಕಯ್ಯ, ಗೌರವ ಕಾರ್ಯದರ್ಶಿ ಅನಂತ ರಾಮರಾವ್, ಕಾರ್ಯದರ್ಶಿ ನರಹರಿರಾವ್, ಸಹ ಕಾರ್ಯದರ್ಶಿ ರಾಜಶೇಖರಯ್ಯ, ಖಜಾಂಚಿ ಕರಿಬಸವದೇವರು, ಎಂ.ಉಮೇಶ್, ಎಂ.ಸಿ.ಸಿದ್ದರಾಜು ಸೇರಿ ಹಲವರು ಉಪಸ್ಥಿತರಿದ್ದರು.




