LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದಲ್ಲಿ ಬಿಸ್ಲೇರಿ ಉದ್ಯಮ ವಿಸ್ತರಣೆ: 2,000 ಹೊಸ ಉದ್ಯೋಗ ಸೃಷ್ಠಿ- ಸಚಿವ ಎಂ.ಬಿ. ಪಾಟೀಲ್

Advertisement
Advertisement

ಚಂದ್ರವಳ್ಳಿ ನ್ಯೂಸ್, ​​ಬೆಂಗಳೂರು:
ಪ್ರಸಿದ್ಧ ಬಿಸ್ಲೇರಿ ಇಂಟರ್ನ್ಯಾಷನಲ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಉದ್ಯಮ ವಿಸ್ತರಣೆಗೆ ಮುಂದಾಗಿದ್ದು
, ಇದರಿಂದ ರಾಜ್ಯದಲ್ಲಿ ಸುಮಾರು 2,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

​ಇಂದು ಬಿಸ್ಲೇರಿ ಇಂಟರ್ನ್ಯಾಷನಲ್ ಸಂಸ್ಥೆಯ ಸಿಇಒ ಎಂ. ಆಂಜೆಲೋ ಜಾರ್ಜ್ ಹಾಗೂ ತಯಾರಿಕಾ ವಿಭಾಗದ ನಿರ್ದೇಶಕ ಲೋಚನ್ ಮಾಥುರ್ ಅವರನ್ನೊಳಗೊಂಡ ನಿಯೋಗ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ವಿಸ್ತರಣಾ ಯೋಜನೆಗಳ ಕುರಿತು ಚರ್ಚಿಸಿತು. ಈ ಸಂದರ್ಭದಲ್ಲಿ ಘಟಕಗಳ ಸ್ಥಾಪನೆಗೆ ಚಾಮರಾಜನಗರ ಮತ್ತು ವಿಜಯಪುರ ಜಿಲ್ಲೆಗಳು ಅತ್ಯಂತ ಸೂಕ್ತ ಹಾಗೂ ಆಕರ್ಷಕ ತಾಣಗಳಾಗಿವೆ ಎಂದು ಸಚಿವರು ಸಲಹೆ ನೀಡಿದರು.

​ಬಿಸ್ಲೇರಿ ಸಂಸ್ಥೆಯು ತಾನು ಬಳಸುವ ನೀರಿಗಿಂತ 3.5 ಪಟ್ಟು ಹೆಚ್ಚು ನೀರನ್ನು ಮರುಪೂರಣ ಮಾಡುತ್ತಿರುವುದು ಹಾಗೂ ಬಳಸಿದ ಪ್ಲಾಸ್ಟಿಕ್‌ನಲ್ಲಿ ಶೇ. 114 ರಷ್ಟು ಪ್ಲಾಸ್ಟಿಕ್ ಪುನರ್‌ಬಳಕೆ ಮಾಡುತ್ತಿರುವ ಸಂಸ್ಥೆಯ ಪರಿಸರಸ್ನೇಹಿ ಕಾರ್ಯವನ್ನು ಸಚಿವರು ಶ್ಲಾಘಿಸಿದರು. ಸುಸ್ಥಿರತೆ ಮತ್ತು ಪರಿಸರ ಕಾಳಜಿಯೊಂದಿಗೆ ಬೆಳೆಯುವ ಕೈಗಾರಿಕೆಗಳಿಗೆ ಸೂಕ್ತ ಬೆಂಬಲ ನೀಡಲು ಕರ್ನಾಟಕ ಸರ್ಕಾರ ಸದಾ ಬದ್ಧವಾಗಿದೆ ಎಂದು ಎಂ.ಬಿ. ಪಾಟೀಲ್ ಭರವಸೆ ನೀಡಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಟಿ.ರಘುಮೂರ್ತಿ ಅವರಿಗೆ ಇಂದು ಅದ್ದೂರಿ ಸ್ವಾಗತ ಕೋಟೆ ನಾಡು ಸಜ್ಜು | ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಕೆಯುಡಬ್ಲ್ಯೂಜೆ ಒತ್ತಾಯಕ್ಕೆ ಸರ್ಕಾರದ ಸ್ಪಂದನೆ; ಜುಲೈ 30ರ ಮನವಿಯ ಬೆನ್ನಲ್ಲೇ ಆ.6ಕ್ಕೆ ಸಭೆಡಾ. ರಾಜ್ ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಕನ್ನಡ ಪರ ಸಂಘಟನೆಗಳ ಆಕ್ರೋಶಪಟ್ಟಣ ಪಂಚಾಯ್ತಿ ಹಗರಣಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಾನವನಾಗಿ ಬಾಳುವುದಕ್ಕಿಂತ ಮಹಾ ಮಾನವನಾಗಿ ಬದುಕುವುದು ಲೇಸು- ದಿವ್ಯ ಜ್ಞಾನಾನಂದಗಿರಿಶ್ರೀಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾದ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯಲ್ಲದಕೆರೆ ಗ್ರಾ.ಪಂ.ಗೆ ಮುತ್ತಿಗೆ; ಕುಡಿಯುವ ನೀರಿಗೆ ಆಗ್ರಹಿಸಿ ಪಂಚಾಯಿತಿ ಆವರಣದಲ್ಲೇ ಅಡುಗೆ ಮಾಡಿ ಗ್ರಾಮಸ್ಥರ ಆಕ್ರೋಶ!ಕರಿಯಾಲ ಗ್ರಾಪಂನಲ್ಲಿ ವಿ.ಬಿ. ಗ್ರಾಮ್ ಜಿ ಯೋಜನೆ ಜಾಗೃತಿ: ಕಾರ್ಮಿಕರಿಗೆ ಸಮಾನ ಕೂಲಿ ಹಾಗೂ ಹಕ್ಕುಗಳ ಕುರಿತು ಅಧಿಕಾರಿಗಳಿಂದ ಮಾಹಿತಿನೂತನ ಸಚಿವರ ಆಯ್ಕೆಗೆ ಬಿಜೆಪಿ-ಜೆಡಿಎಸ್ ತೀವ್ರ ಆಕ್ಷೇಪ: ಜಂಟಿ ವಾಗ್ದಾಳಿಜಾಗತಿಕ ತಂತ್ರಜ್ಞಾನದ ಮುಂದಿನ ಕ್ರಾಂತಿ ಕರ್ನಾಟಕದಿಂದಲೇ ರೂಪಗೊಳ್ಳಲಿ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್