Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ಮುಖವಾಡ ಬಯಲು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಧರ್ಮಸ್ಥಳ ಪ್ರಕರಣದಲ್ಲಿ ಕರ್ನಾಟಕ ಬಿಜೆಪಿ ಮಾಡಿದಂತಹ ಅಪಪ್ರಚಾರದ ಮುಖವಾಡ ಕಳಚಿದೆ
, ನಾಟಕ ಕಂಪನಿ ಮುಚ್ಚಿದೆ‌ ! ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ಬಿಜೆಪಿಯವರೇ, ಧರ್ಮಸ್ಥಳದ ವಿಚಾರದಲ್ಲಿ ನಿಮ್ಮ ದುರುದ್ದೇಶಪೂರಿತ ಸುಳ್ಳುಗಳು ಬಟಾ ಬಯಲಾಗಿವೆ ಮುಂದೇನು??? ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.

ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್, ಪ್ರಹ್ಲಾದ್ ಜೋಷಿ, ಕು.ಶೋಭಾ ಕರದ್ಲಾಂಜೆ, ಸಿ.ಟಿ ರವಿ ಅವರೇ ಈಗಲಾದರೂ ರಾಜ್ಯದ ಜನರ ಕ್ಷಮೆ ಕೇಳುತ್ತೀರಾ? ಎಂದು ಸಚಿವರು ತಾಕೀತು ಮಾಡಿದ್ದಾರೆ.

ಸತ್ಯಾಂಶಗಳು:
ಸರ್ಕಾರ ನ್ಯಾಯಾಲಯದ ಆದೇಶದಂತೆ
SIT ರಚಿಸಿದಾಗ, ಮೊದಲು ಸ್ವಾಗತಿಸಿ, ಅದರಲ್ಲೂ ಕ್ರೆಡಿಟ್ ಪಡೆಯಲು ಇಲ್ಲದ ಪ್ರಯತ್ನ ಮಾಡಿದ್ದು ಬಿ.ಜೆ.ಪಿ.   ತನಿಖೆಯಲ್ಲಿ ತಮ್ಮ ಬೆಂಬಲಿತರ ಹೆಸರುಗಳು ಕೇಳಿಬರುತ್ತಿದ್ದಂತೆ, ತನಿಖೆಯ ದಾರಿ ತಪ್ಪಿಸಲು NIAಗೆ ವಹಿಸಿ ಎಂದು ಕೂಗಾಡಿದರು.

ನೂರಾರು ಕಾರುಗಳಲ್ಲಿ  ಧರ್ಮ ಸ್ಥಾಪನೆ ಹೆಸರಿನಲ್ಲಿ ಮೋಜು ಮಸ್ತಿ ಮಾಡಿ ಪ್ರವಾಸ ಮಾಡಿ, ನಾವು ಧರ್ಮಸ್ಥಳದ ಜೊತೆ ಇದ್ದೇವೆ ಎಂಬ ಬೃಹನ್ನಾಟಕ ಮಾಡಿದ್ದಷ್ಟೇ ಬಂದಿದ್ದು.

ಬಿ.ಜೆ.ಪಿ‌ಯವರಿಗೆ ಸತ್ಯ ಹೊರಬರುವುದು ಬೇಕಿಲ್ಲ, ರಾಜಕಾರಣ ಮಾಡಲು ವಿಷಯ ಬೇಕು, ಸತ್ಯವನ್ನು ತಿರುಚಿಯಾದರೂ ಸರಿ ರಾಜಕಾರಣ‌ ಮಾಡಬೇಕು, ನಾವು ಇದ್ದೀವಿ ಎಂದು ತೋರಿಸಲು ಒಂದು ವೇದಿಕೆ ಬೇಕು. ಅವರ‌ ಈ ಸ್ಥಿತಿಯು ನಿಜಕ್ಕೂ ಚಿಂತಾಜನಕ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಮಾಡಿದ್ದಾರೆ.

ದಕ್ಷ ಅಧಿಕಾರಿಗಳು ಸಂಚಿನ ಹಿಂದಿರುವ ಸತ್ಯವನ್ನು ಬಯಲಿಗೆಳೆಯುತ್ತಿದ್ದಾರೆ. ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರೇ SIT ತನಿಖೆಯನ್ನು ಶ್ಲಾಘಿಸಿ, "ಸತ್ಯ ಹೊರಬರುತ್ತಿದೆ, ಸರ್ಕಾರಕ್ಕೆ ಧನ್ಯವಾದಗಳು" ಎಂದಿದ್ದಾರೆ.


SITಯನ್ನು ವಿರೋಧಿಸಿ ಬೀದಿಗಿಳಿದು ಅಬ್ಬರಿಸಿದ ಬಿಜೆಪಿ ನಾಯಕರು ಈಗೇನು ಹೇಳುತ್ತಾರೆ? ಕೇವಲ ವಿರೋಧ ಪಕ್ಷದಲ್ಲಿದ್ದೇವೆ ಎಂಬ ಕಾರಣಕ್ಕೆ ಸತ್ಯ-ಸುಳ್ಳುಗಳ ಬಗ್ಗೆ ಅರಿವಿದ್ದರೂ ಸಹ ಸರ್ಕಾರದ ಪ್ರತಿಯೊಂದು ಕ್ರಮವನ್ನು ವಿರೋಧಿಸಲೇಬೇಕೆಂಬ ಧೋರಣೆ ಬಿ.ಜೆ.ಪಿಯವರ ಕೀಳುಮಟ್ಟದ, ಸಂವೇದನಾರಹಿತ ರಾಜಕಾರಣವನ್ನು ಸಾಬೀತುಪಡಿಸಿದೆ.

ನಿಮ್ಮ ಆರ್ಭಟಗಳಿಗೆ ನಮ್ಮ ಸರ್ಕಾರ ಜಗ್ಗುವುದಿಲ್ಲ. ಸತ್ಯವನ್ನು ಹೊರತರುವ ಬದ್ಧತೆಯಿಂದ ನಾವು ಹಿಂದೆ ಸರಿಯುವುದಿಲ್ಲ.

ಸತ್ಯದ ಮಾರ್ಗ ತಲುಪಿದ್ದೇವೆ. ಸಂಚಿನ ಹಿಂದಿರುವ ಅಸಲಿ ರೂವಾರಿಗಳು ಮತ್ತು ಅವರ ರಾಜಕೀಯ ಪೋಷಕರುಶೀಘ್ರದಲ್ಲೇ ಜನರ ಮುಂದೆ ಬೆತ್ತಲಾಗಲಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

 

 

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ