ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಪಿ. ಬೈಲಾಂಜಿನಪ್ಪನವರಿಗೆ ಭಾವ ಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಉಪನಿರ್ದೇಶಕರಾಗಿ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೈಲಾಂಜಿನಪ್ಪ ನವರು ಇಲಾಖೆಯಲ್ಲಿ ದಕ್ಷ ಅದಿಕಾರಿಯಾಗಿ ಶಿಸ್ತುಬದ್ದ ಪ್ರಮಾಣಿಕ ಅದಿಕಾರಿಯೆಂದು ಹೆಸರು ಗಳಿಸಿದ್ದರು.
ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಮಧುರೆ ಹೊಬಳಿ ಹೊನ್ನಾವರ ಗ್ರಾಮದವರಾದ ಬೈಲಾಂಜಿನಪ್ಪ ನವರ ಸುದೀರ್ಘ ಪ್ರಾಮಾಣಿಕ ಸೇವೆಯನ್ನು ಗುರ್ತಿಸಿ ಅವರ ಆತ್ಮೀಯ ಬಳಗ ಭಾಷೆಟ್ಟಿ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀಗಂದದ ರಾಷ್ಟ್ರ ಲಾಂಚನ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಲಾವಣ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಂ.ಸಿ.ಮಂಜುನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಬಾಗ) ಉಪ ಪ್ರಾಂಶುಪಾಲರಾದ ಶ್ರಿಮತಿ ದಾಕ್ಷಾಯಣಿ,ಮುಖ್ಯ ಶಿಕ್ಷಕ ವಿ ಶಿವರಾಜ್ ಬಯ್ಯಾ, ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರು ಹಿತೈಷಿಗಳು ಹಾಜರಿದ್ದು ಬೈಲಾಂಜಿನಪ್ಪ ನವರನ್ನು ಅಬಿನಂದಿಸಿದರು.



