Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಧರ್ಮಪುರ ಭಾಗದ 14 ಕೆರೆಗಳನ್ನು ತುಂಬಿಸುವ 35 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ *14 ಕೆರೆಗಳನ್ನು ತುಂಬಿಸುವ ₹35 ಕೋಟಿ ಅಂದಾಜು ಮೊತ್ತದ ಏತ ನೀರಾವರಿ ಯೋಜನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ* ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ *ಡಾ. ಅಜಯ್ ಧರ್ಮಸಿಂಗ್* ತಿಳಿಸಿದ್ದಾರೆ.

ಹಿರಿಯೂರು ತಾಲೂಕು ಮಳೆಯ ಕೊರತೆ ಮತ್ತು ನಿರಂತರ ಅಂತರ್ಜಲ ಕುಸಿತವನ್ನು ಎದುರಿಸುತ್ತಿರುವ ಪ್ರದೇಶವಾಗಿದ್ದು, ಧರ್ಮಪುರ ಹೋಬಳಿಯ ಹಲವಾರು ಕೆರೆಗಳು ಹಲವು ವರ್ಷಗಳಿಂದ ಸಮರ್ಪಕವಾಗಿ ತುಂಬಿಲ್ಲ. ಈ ಭಾಗದಲ್ಲಿ ಕೆರೆ-ಕಟ್ಟೆಗಳು ಜನರು ಹಾಗೂ ರೈತರ ಜೀವನಾಡಿಯಾಗಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಪುನರ್ಭರ್ತಿ ಮಾಡುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಯೋಜನೆಯಡಿ *ಧರ್ಮಪುರ ಕೆರೆಯಿಂದ ಏತ ನೀರಾವರಿ ಮೂಲಕ ಹಲಗಲದ್ದಿ, ಮುದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು ಸೇರಿದಂತೆ ಒಟ್ಟು 14 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.* ಮಾರ್ಗಮಧ್ಯೆ ಬರುವ ಗೋಕಟ್ಟೆಗಳಿಗೂ ನೀರು ತಲುಪಿಸುವ ಉದ್ದೇಶ ಹೊಂದಲಾಗಿದೆ.

“*ಈ ಭಾಗದಲ್ಲಿ ಕುಡಿಯುವ ನೀರಿನ ಭದ್ರತೆ, ಅಂತರ್ಜಲ ಪುನರ್ಭರ್ತಿ ಹಾಗೂ ಕೃಷಿ ಚಟುವಟಿಕೆಗಳಿಗೆ ದೀರ್ಘಕಾಲಿಕ ನೆರವು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೆರೆಗಳನ್ನು ತುಂಬಿಸುವುದರಿಂದ ಕೇವಲ ಮೇಲ್ಮೈ ನೀರಿನ ಲಭ್ಯತೆ ಮಾತ್ರವಲ್ಲ, ಸುತ್ತಮುತ್ತಲಿನ ಬೋರ್‌ವೆಲ್‌ಗಳು ಹಾಗೂ ಕೃಷಿಭೂಮಿಗಳಿಗೂ ನೇರ ಪ್ರಯೋಜನವಾಗಲಿದೆ*,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.

2025–26ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿಯ ಪ್ರಕಾರ ಹಿರಿಯೂರು ತಾಲೂಕು **‘ಅತಿ ಬಳಕೆ’ ಪ್ರದೇಶವಾಗಿ ಗುರುತಿಸಲ್ಪಟ್ಟಿರುವುದರಿಂದ**, ಅಂತರ್ಜಲ ಪುನರ್ಭರ್ತಿ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.

 ಈ ಯೋಜನೆಯ ಮೂಲಕ *ವೇದಾವತಿ ನದಿಯಿಂದ 66.19 ಎಂ.ಸಿ.ಎಫ್‌.ಟಿ ನೀರನ್ನು* ಎತ್ತಿ ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ.

ಯೋಜನೆಯ ವ್ಯಾಪ್ತಿಯಲ್ಲಿ ಹಲಗಲದ್ದಿ ಕೆರೆ, ಮುದ್ದಿಹಳ್ಳಿ ಕೆರೆ, ಮುದ್ದಿಹಳ್ಳಿ ಕಿವುಡನಕಟ್ಟೆ ಕೆರೆ, ಖಂಡೇನಹಳ್ಳಿ ಕೆರೆ, ಹರಳೀಕೆರೆ-1, ಹರಳೀಕೆರೆ-2, ಹರಳೀಕೆರೆ-3, ಹರಳೀಕೆರೆ-4, ಹೊಸಕೆರೆ, ಬೇತೂರು, ಬೆನಕನಹಳ್ಳಿ ಕೆರೆ, ಸಕ್ಕರೆ ಕೆರೆ-1 ಮತ್ತು ಸಕ್ಕರೆ ಕೆರೆ-2 ಸೇರಿದಂತೆ ಕೆರೆಗಳನ್ನು ಒಳಗೊಂಡಿದೆ.

“*ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳನ್ನು ತುಂಬಿಸಿ ಅಂತರ್ಜಲವನ್ನು ಪುನಶ್ಚೇತನಗೊಳಿಸುವುದು ನಮ್ಮ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಈ ₹35 ಕೋಟಿ ಯೋಜನೆ ಧರ್ಮಪುರ ಭಾಗದ ಜಲಭದ್ರತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಲಿದೆ*,” ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

 

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಪುರ ಭಾಗದ 14 ಕೆರೆಗಳನ್ನು ತುಂಬಿಸುವ 35 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆಚಿತ್ರದುರ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ: ನವೆಂಬರ್ 08ರಿಂದ ಹೊಸ ದರ ಜಾರಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿಮುಖ್ಯವಾಹಿನಿಯಿಂದ ದೂರ ಉಳಿದ ಅಲೆಮಾರಿ ‘ಸುಡುಗಾಡು ಸಿದ್ಧ’ರ ಮಕ್ಕಳು!ಮನೆಗಳ್ಳತನ ಮಾಡಿದ ಕಳ್ಳನನ್ನು ಚೇಸ್ ಮಾಡಿ ಹಿಡಿದ ಗ್ರಾಮಸ್ಥರುಟಿವಿಎಸ್ ಹೊಸ 'ರೇಡಿಯಾನ್' ಬೈಕ್ ಲೋಕಾರ್ಪಣೆ: ನೂರಾರು ಗ್ರಾಹಕರಿಗೆ ಉದ್ಯೋಗ ನೀಡಿರುವ ಚಿತ್ರದುರ್ಗದ ಅರುಣ್ ಸಾಧನೆಗೆ ಮೆಚ್ಚುಗೆಪೋತ್ಸಾಹ ಧನ ಹಾಗೂ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ  ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಧಿಕಾರಿಗಳ ಮನವಿಹಿರಿಯೂರು ತಾಲೂಕಿನಲ್ಲಿ ಒಬ್ಬರೂ ಒಕ್ಕಲಿಗರಿಲ್ಲ, ಎಲ್ಲರೂ ಕುಂಚಿಟಿಗರು: ಎಂ.ಆರ್.ಜೋಗೇಶ್ ನೇರ ವಾಗ್ದಾಳಿಬಸ್ ದರ ಏರಿಕೆ ಖಂಡಿಸಿ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಭಿಕ್ಷಾಟನೆ ಪ್ರತಿಭಟನೆ: ಆರ್. ಅಶೋಕ್