Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

 ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿ

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ : 
ಮಕ್ಕಳಲ್ಲಿರುವ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಉತ್ತಮವಾದ ತೀರ್ಪುನ್ನು ನೀಡುವುದರ ಮುಖಾಂತರವಾಗಿ ವಿದ್ಯಾರ್ಥಿಗಳಲ್ಲಿ  ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಸಂಯೋಜಕರಾದ ಲೋಕೇಶ್ ರವರು ಹೇಳಿದರು.

 ಸಮೀಪದ ಕಡ್ಲೆ ಗುದ್ದು ನಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ ಭೀಮಸಮುದ್ರ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಮಾತನಾಡುತ್ತ ಅವರು ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿಯನ್ನ ನೀಡಿ  ಸ್ಪರ್ಧೆಯಲ್ಲಿ ಭಾಗವಹಿಸಿಸುವಂತೆ ಶಾಲೆಯ ಮುಖ್ಯಸ್ಥರು ಶಿಕ್ಷಕರು ಕ್ರಮ ಕೈಕೊಂಡು ಕರೆತಂದಿದ್ದಾರೆ ಹಾಗಾಗಿ ತೀರ್ಪುಗಾರರು ನಿಜವಾದ  ಪ್ರತಿಭೆವುಳ್ಳ ವಿದ್ಯಾರ್ಥಿಳನ್ನು ಗುರುತಿಸಿ , ಅವರುಗಳನ್ನ ಜಿಲ್ಲಾಮಟ್ಟ ರಾಜ್ಯಮಟ್ಟ ದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದರಿಂದ ಸೂಕ್ತವಾದ ತೀರ್ಪು ನೀಡಿ ಪ್ರೋತ್ಸಾಹಿಸಬೇಕೆಂದು ಹೇಳಿದರು ಜೊತೆಗೆ ಈ ಶಾಲೆಯ ಪ್ರಾಂಶುಪಾಲರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮನೆಯ ಹಬ್ಬದ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾರೆಂದು  ಪ್ರಶಂಸಿದರು.

 ವಾಸ್ತವಿಕವಾಗಿ ಮಾತನಾಡಿದ ಆಂಜನೇಯ ಪ್ರೌಢಶಾಲೆಯ ಡಾಕ್ಟರ್ ಕೆ ಮಹೇಶ್ ರವರು ಪ್ರತಿಭಾ ಕಾರಂಜಿ ಎನ್ನುವುದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತೆಗೆಯಲು ಸರ್ಕಾರ ಜಾರಿಗೊಳಿಸಿರುವ ಒಂದು ಉತ್ತಮ ಕಾರ್ಯಕ್ರಮ, ಈ ಕಾರ್ಯಕ್ರಮವನ್ನು ನಮ್ಮ ಕಡ್ಲೆ ಗುದ್ದು ವಿನ ಮೂರು ಶಾಲೆಯವರು ಸೇರಿ ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಸಹಕರಿಸಿದವರೆಲ್ಲರನ್ನು ಸ್ಮರಿಸಿದರು. ವಸತಿ ಶಾಲೆಯ ಪ್ರಾಂಶುಪಾಲರಾದ ರಮೇಶ್ ಆರ್ ರವರು ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವರ ಹಾಕಬೇಕು ಹಾಗೂ ಸ್ಪರ್ಧೆಯಿಂದ ಮೇಲೆ ಸೋಲು ಗೆಲುವು ಸಹಜ ಸೋತವರು ಯಾವುದೇ ಕಾರಣಕ್ಕೂ ಹತಾಶರಾಗದೆ ಮುಂದಿನ ಪ್ರಯತ್ನಕ್ಕೆ ಹ ಣಿಯಾಗಬೇಕೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

 ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಯವರನ್ನು ಹಾಗೂ ಧಾನಿಗಳನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭೀಮೇಶ್ವರ ಬಾಲ ವಿಕಾಸ ಶಾಲೆಯ ಶಿಕ್ಷಕ ರಾಮ ಮಾತನಾಡಿದರು. ಮತ್ತೊಬ್ಬ ಶಿಕ್ಷಣ ಸಂಯೋಜಕರಾದ ಅಂಜಿ ನಪ್ಪ ಸಿ ಆರ್ ಪಿ ಚಂದ್ರಪ್ಪ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯೋಪಾಧ್ಯಾಯರು,ಶಿಕ್ಷಕರು ಹಾಜರಿದ್ದರು  ಆಂಜನೇಯ ಪ್ರೌಢಶಾಲೆಯ ಶಿಕ್ಷಕ ಮಂಜಣ್ಣ ಸ್ವಾಗತಿಸಿ ವಸತಿ ಶಾಲೆಯ ಶಿಕ್ಷಕಿ ಕವಿತಾ ಎಂ ಜೆ ನಿರೂಪಿಸಿ ಶಿಕ್ಷಕ ಪ್ರಕಾಶ್ ಬಿ ವಂದಿಸಿದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಪುರ ಭಾಗದ 14 ಕೆರೆಗಳನ್ನು ತುಂಬಿಸುವ 35 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆಚಿತ್ರದುರ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ: ನವೆಂಬರ್ 08ರಿಂದ ಹೊಸ ದರ ಜಾರಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿಮುಖ್ಯವಾಹಿನಿಯಿಂದ ದೂರ ಉಳಿದ ಅಲೆಮಾರಿ ‘ಸುಡುಗಾಡು ಸಿದ್ಧ’ರ ಮಕ್ಕಳು!ಮನೆಗಳ್ಳತನ ಮಾಡಿದ ಕಳ್ಳನನ್ನು ಚೇಸ್ ಮಾಡಿ ಹಿಡಿದ ಗ್ರಾಮಸ್ಥರುಟಿವಿಎಸ್ ಹೊಸ 'ರೇಡಿಯಾನ್' ಬೈಕ್ ಲೋಕಾರ್ಪಣೆ: ನೂರಾರು ಗ್ರಾಹಕರಿಗೆ ಉದ್ಯೋಗ ನೀಡಿರುವ ಚಿತ್ರದುರ್ಗದ ಅರುಣ್ ಸಾಧನೆಗೆ ಮೆಚ್ಚುಗೆಪೋತ್ಸಾಹ ಧನ ಹಾಗೂ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ  ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಧಿಕಾರಿಗಳ ಮನವಿಹಿರಿಯೂರು ತಾಲೂಕಿನಲ್ಲಿ ಒಬ್ಬರೂ ಒಕ್ಕಲಿಗರಿಲ್ಲ, ಎಲ್ಲರೂ ಕುಂಚಿಟಿಗರು: ಎಂ.ಆರ್.ಜೋಗೇಶ್ ನೇರ ವಾಗ್ದಾಳಿಬಸ್ ದರ ಏರಿಕೆ ಖಂಡಿಸಿ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಭಿಕ್ಷಾಟನೆ ಪ್ರತಿಭಟನೆ: ಆರ್. ಅಶೋಕ್