ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನ ಗ್ರಾಮಸ್ಥರು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಚಿನ್ನಭರಣ ಕಳವು ಮಾಡಿ ಪರಾರಿಯಾಗಲು ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಮುನಿರಾಜು ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ ಎನ್ನಲಾಗಿದ್ದು ಆರೋಪಿಯನ್ನು ವಿಚಾರಣೆ ಮಾಡಿದ್ದಾಗ ಸರ್ಜಾಪುರ ಮೂಲದ ಸಂತೋಷ ಎಂದು ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮುನಿರಾಜು ಕುಟುಂಬಸ್ಥರು ಮಾತನಾಡಿ ಎಂದಿನಂತೆ ನಮ್ಮ ಮನೆಗೆ ಬೀಗ ಹಾಕಿ ಮನೆಯ ಮೆಲ್ಬಾಗದಲ್ಲಿ ಇಟ್ಟು ಹೊರಗಡೆ ಹೋದ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು ಅದೇ ಸಮಯಕ್ಕೆ ಸದಸ್ಯರು ಮನೆಗೆ ಬಂದಿದ್ದರಿಂದ ಆರೋಪಿ ನಾನು ಡೆಲಿವರಿ ಬಾಯ್ ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಸ್ಥಳೀಯರಿಗೆ ಅನುಮಾನ ಬಂದ ಕಾರಣ ಕೂಡಲೇ ಆರೋಪಿ ಇಡಿದು ವಿಚಾರಿಸಿದಾಗ ಕಳ್ಳತನಕ್ಕೆ ಬಂದಿದ್ದಾನೆಂದು ತಿಳಿದು ಬಂದಿದು ಕೂಡಲೇ ಪೊಲೀಸ್ ಗೆ ಮಾಹಿತಿ ನೀಡಿದೇವು ಎಂದು ತಿಳಿಸಿದರು.
ಸದ್ಯ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ಪಡೆದಿದ್ದು ತನಿಖೆ ನಂತರ ಸತ್ಯ ಸತ್ಯತೆ ಹೊರಬೀಳಲಿದೆ.




