Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಚಾಮುಂಡಿ ಬೆಟ್ಟದ ಆಸ್ತಿ ಸರ್ಕಾರದ ಆಸ್ತಿ, ಎಲ್ಲರ ಆಸ್ತಿ-ಡಿಸಿಎಂ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಾಮುಂಡಿ ಬೆಟ್ಟದ ಆಸ್ತಿ ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಜವಂಶಸ್ಥರು, ಸರ್ಕಾರ ಇಬ್ಬರೂ ಚಾಮುಂಡಿಯನ್ನು ನಾಡದೇವತೆ ಅಂತ ಕರೆಯುತ್ತೇವೆ.

ಇದು ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ. ಹಿಂದೂಗಳು ಮಾತ್ರ ಬರಬೇಕು ಅಂತ ಇಲ್ಲ. ಎಲ್ಲಾ ಧರ್ಮದವರನ್ನೂ ಆಶೀರ್ವದಿಸುವ ದೇವತೆ. ನಾಡಹಬ್ಬಕ್ಕೆ ವಿದೇಶಿಗರೂ ಬರ್ತಾರೆ. ಬೇರೆ ಧರ್ಮದವರೂ ಬರ್ತಾರೆ ಎಂದು ಶಿವಕುಮಾರ್ ತಿಳಿಸಿದರು.
ಚಾಮುಂಡಿಬೆಟ್ಟ ಸರ್ಕಾರದ ಆಸ್ತಿ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಛರಿಸಿದರು.


ಮಾಧ್ಯಮಗಳೊಂದಿಗೆ ಮಾತಾಡಿದ ಅವರು ದಸರಾ ಹಬ್ಬವನ್ನು ನಾಡಹಬ್ಬವೆಂದು ಆಚರಿಸುತ್ತೇವೆ, ಹಿಂದಿನ ಮಹಾರಾಜರು ಮತ್ತು ಸರ್ಕಾರ ಜೊತೆಗೂಡಿ ತೆಗೆದುಕೊಂಡ ನಿರ್ಣಯ ಅದು, ಚಾಮುಂಡಿ ತಾಯಿ ನಾಡಿನ ಎಲ್ಲ ಜನರನ್ನು ಆಶೀರ್ವದಿಸುತ್ತಾಳೆ, ದಸರಾ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು, ಧಾರ್ಮಿಕ ಆಚರಣೆಗಳು ಅವರವರ ನಂಬಿಕೆ, ಶ್ರದ್ಧೆಗಳಿಗೆ ಬಿಟ್ಟ ವಿಚಾರ ಎಂದು ಶಿವಕುಮಾರ್ ಹೇಳಿದರು.


ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವಿದೇಶಿಯರು ಕೂಡ ಬರುತ್ತಾರೆ, ಅವರೆಲ್ಲ ಯಾವ ಧರ್ಮದವರು? ಎಂದು ಶಿವಕುಮಾರ್ ಪ್ರಶ್ನಿಸುತ್ತಾರೆ.


ಮಹಾರಾಜರು ನಾಡಹಬ್ಬಕ್ಕೆ ವಿದೇಶಿಯರನ್ನು ಆಹ್ವಾನಿಸುತ್ತಿದ್ದರು. ಅವರೆಲ್ಲ ಯಾವ ಸಮುದಾಯಕ್ಕೆ ಸೇರಿದವರು? ಎಂದು ಪ್ರಶ್ನಿಸಿದ ಡಿಸಿಎಂ, ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು ಅಂದ್ರೆ ಹೇಗೆ? ಎಂದು ಶಿವಕುಮಾರ್ ತೀಕ್ಷ್ಣವಾಗಿ ಪ್ರಶ್ನಿಸಿದರು.


ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ನರ​ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವೇ?. ಗೊಮ್ಮಟಗಿರಿಗೆ ನಮ್ಮನ್ನು ಬಿಡುವುದಿಲ್ವೇ?. ಅವರು ನಮ್ಮನ್ನು ಬರಬಾರದು ಅಂತ ಹೇಳ್ತಾರಾ ಎಂದು ಡಿಸಿಎಂ ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.

ಇತಿಹಾಸ ಮರೆತ ಯದುವೀರ್:
ಸಂಸದ ಯದುವೀರ್ ಅವರು ಇತಿಹಾಸ ಮರೆತಿದ್ದಾರೆ. ಈಗ ಅವರು ಬಿಜೆಪಿ ಸೇರಿದ್ದಾರೆ. ನಾವು ಗೃಹಲಕ್ಷ್ಮಿ‌ಹಣ ಚಾಮುಂಡಿ ಮುಂದಿಟ್ಟು ಪೂಜಿಸಿದ್ವಿ. ಎಲ್ಲಾ ಧರ್ಮದವರಿಗೆ ಗ್ಯಾರಂಟಿ ಕೊಡ್ತಿದ್ದೇವೆ. ಹೀಗಾಗಿ ಜಾತಿ ಧರ್ಮದ ಬಣ್ಣ ಕಟ್ಟಬಾರದು ಎಂದು ತಿಳಿಸಿದರು.


ನಾವು ಹಿಂದುತ್ವದವರು:
ನಮಗಿಂತ ಬ್ಯಾರಿಗಳು ಕನ್ನಡ ಚೆನ್ನಾಗಿ ಮಾತಾಡ್ತಾರೆ. ಅವರನ್ನು ತಳ್ಳುವುದಕ್ಕೆ ಆಗುತ್ತಾ
?. ನಮ್ಮನ್ನು ನೀವು ಬರಬೇಡಿ ಅಂತಾರಾ?. ಬಿಜೆಪಿಗಿಂತ ನಾವು ಹೆಚ್ಚು ಹಿಂದುತ್ವದವರು. ದೇಶದಲ್ಲಿ ಇರೋರನ್ನು ಓಡಿಸೋಕೆ‌ಆಗುತ್ತಾ ಎಂದು ಉಪಮುಖ್ಯಮಂತ್ರಿ ಪ್ರಶ್ನಿಸಿದರು.

ಜೆಡಿಎಸ್​ ಲೀಡರ್​​ಗೆ ಹೆದರಲ್ಲ:
ಜೆಡಿಎಸ್ ಎಕ್ಸ್ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್
, ಜೆಡಿಎಸ್ ಯಾವಾಗಲೂ ಫೇಕ್. ಬೇಕಿದ್ದರೆ ಅವರು ಟೀಕೆ ಮಾಡಲಿ. ಅವರ ದೊಡ್ಡ ಲೀಡರ್​​ಗೆ ನಾನು ಹೆದರಲ್ಲ. ಆದರೆ ಈ ರೀತಿ ಮಾಡೋದು ಸರಿಯಲ್ಲ ಎಂದು ಟೀಕಿಸಿದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು