ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎನ್ ಜೆ ಎಸ್ ಮೂವೀ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಚಂದ್ರಿ” ಕನ್ನಡ ಚಲನಚಿತ್ರದ ಚಿತ್ರೀಕರಣವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ.
ಡಾ. ಪ್ರವೀಣ್ ಚೌಟಿ ಅವರ 'ಬಯಲು' ಕಥಾ ಸಂಕಲನದ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನ ಉದಯೋನ್ಮುಖ ಪ್ರತಿಭೆ ಎಸ್. ವೆಂಕಟೇಶ್ ಕೊಟ್ಟೂರು ಅವರ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ.
ಚಿತ್ರದ ಕಥಾಹಂದರ: ಪ್ರಿಯಕರನ ಮೋಸಕ್ಕೆ ಬಲಿಯಾಗಿ ಅಸಹಾಯಕಳಾದ ಗ್ರಾಮೀಣ ಹೆಣ್ಣುಮಗಳು ಸಾವಿನ ಅಂಚಿನಲ್ಲಿರುವಾಗ, ಸೈದಪ್ಪ ಆಕೆಗೆ ಹೊಸ ಬದುಕನ್ನು ಕಟ್ಟಿಕೊಡುತ್ತಾನೆ. ಹೊಟ್ಟೆಯ ಪಾಡಿಗಾಗಿ ಹೋರಾಡುವ ಎರಡು ಜೀವಗಳ ಜೀವನ ಸಂಗ್ರಾಮವೇ ಈ ಚಿತ್ರದ ಮುಖ್ಯ ಕಥಾವಸ್ತು.
ಚಿತ್ರೀಕರಣ ಮತ್ತು ತಾಂತ್ರಿಕ ವಿಶೇಷತೆ: ರಾಯಚೂರು ನಗರ, ಶಕ್ತಿನಗರ, ಕೊಟ್ಟೂರು, ಹೂವಿನ ಹಡಗಲಿ, ಮದಲಘಟ್ಟ ಹಾಗೂ ಮರಳವಾಡಿಯ ಸುತ್ತಮುತ್ತ ಸುಮಾರು 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಮುಖ್ಯ ವಿಶೇಷತೆಯೆಂದರೆ ಇಡೀ ಚಿತ್ರೀಕರಣವನ್ನು 'ಸಿಂಕ್ ಸೌಂಡ್' ಮೂಲಕ ನಡೆಸಲಾಗಿದೆ.
ಕಲಾವಿದರು ಮತ್ತು ತಾಂತ್ರಿಕ ವರ್ಗ: ಪ್ರಮುಖ ಪಾತ್ರಗಳು: ಕೆಜಿಎಫ್, ಪೈಲ್ವಾನ್, ಐರಾವತ, ರುಸ್ತುಂ, ಜಗ್ಗು ದಾದಾ, ಭಗೀರ, ಭೈರತಿ ರಣಗಲ್ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದ ರಾಮರಾವ್. ಜಿ ಅವರು 'ಸೈದಪ್ಪ'ನ ಪಾತ್ರದಲ್ಲಿ ಹಾಗೂ 'ಚಂದ್ರಿ'ಯಾಗಿ ವ್ಯೋಮಿ ಸಾಕೇಲ್ ನಟಿಸಿದ್ದಾರೆ.
ಇತರ ತಾರಾಗಣ: ಪ್ರಗತಿ ಪ್ರಭು, ಚಕ್ರವರ್ತಿ ದಾವಣಗೆರೆ, ಶಿವಮೊಗ್ಗ ರಾಮಣ್ಣ, ಉಗ್ರಂ ಸುರೇಶ್, ಶಶಿಧರ್, ಡಾ. ಪ್ರವೀಣ್ ಚೌಟಿ, ಎಸ್.ಕೆ. ಬಾಬು ಬೆಳಗೊಳ, ಸುರೇಶ್ ದೇವರಮನೆ, ಶಾರದಾ ಕಲ್ಲೂರ್, ಮಂಜೇಶ್ ಸೇರಿದಂತೆ ದೊಡ್ಡ ತಾರಾಗಣವಿದೆ.

ತಾಂತ್ರಿಕ ಬಳಗ: ಚಿತ್ರಕಥೆ ಹಾಗೂ ನಿರ್ದೇಶನ: ಎಸ್. ವೆಂಕಟೇಶ್ ಕೊಟ್ಟೂರು. ನಿರ್ಮಾಪಕರು: ಶ್ರೀಮತಿ ಅನುಷಾ ಸುಪ್ರೀತ್, ಛಾಯಾಗ್ರಹಣ: ಸುನಿಲ್ ಕೆ.ಆರ್.ಎಸ್, ಸಂಭಾಷಣೆ: ಮಹಾಂತೇಶ್ ನವಲಕಾರ್, ಸಂಗೀತ & ಸಾಹಿತ್ಯ: ಎಸ್.ಕೆ. ಸಹಿಶ್ಯಾಮ್ (ಸಂಗೀತ), ಎಸ್. ವೆಂಕಟೇಶ್ ಕೊಟ್ಟೂರು (ಸಾಹಿತ್ಯ - 2 ಹಾಡುಗಳು), ಸಂಕಲನ: ಮುತ್ತುರಾಜ್ ಟಿ., ಸಿಂಕ್ ಸೌಂಡ್: ಮೋಹನ್ - ಅಜಿತ್ ಯಳಿವಾಳ, 5.1 ಮಿಕ್ಸಿಂಗ್: ರಾಜ್ ಭಾಸ್ಕರ್ | ಡಿ.ಐ: ವರುಣ್ ಗೌಡ | ಕಲೆ: ಬಸವರಾಜ್ ಆಚಾರ್, ಕಾರ್ಯಕಾರಿ ನಿರ್ಮಾಪಕರು: ಹೆಚ್. ಶಶಿಧರ್ – ಆರ್ಮುಗಂ, ಪಿ.ಆರ್.ಒ: ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ.




