Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 "ಉಪಗ್ರಹ (ಸ್ಯಾಟಲೈಟ್) ಮೂಲಕ ನೋಡಿದರೆ ಎಲ್ಲವೂ ಹಸಿರಾಗಿ ಕಾಣುತ್ತೆ ಅಂದ ಮಾತ್ರಕ್ಕೆ ಅದನ್ನೆಲ್ಲ ಅರಣ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರು ಸ್ಯಾಟಲೈಟ್ ಮೂಲಕ ನಡೆಸಿರುವ ಮ್ಯಾಪಿಂಗ್ ಸಮೀಕ್ಷೆಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಕೇರಳ ಮಾದರಿಯಲ್ಲಿ ನಮ್ಮದೇ ಆದ ತಜ್ಞರ ಸಮಿತಿಯನ್ನು ರಚಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಸೂಕ್ತ" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ವರದಿ ಆಧರಿಸಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಎ) ನಿಗದಿಪಡಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಕುರಿತು ಕರೆದಿದ್ದ ವಿಶೇಷ ವಿಧಾನಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಅವರು, ವರದಿಯಿಂದ ಮಲೆನಾಡಿನ ಜನರಲ್ಲಿ ಮೂಡಿರುವ ಆತಂಕಗಳು ಹಾಗೂ ಆಗಬಹುದಾದ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Advertisement

ವರದಿಯಿಂದ ಕರ್ನಾಟಕದ ಯಾವ ಜಿಲ್ಲೆಗಳಿಗೆ ತೊಂದರೆ?:
ಪಶ್ಚಿಮಘಟ್ಟದ ವಿಚಾರವು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದೆ, ಗುಜರಾತ್‌ನಿಂದ ಕೇರಳದವರೆಗೆ ಆರು ರಾಜ್ಯಗಳಿಗೆ ಸಂಬಂಧಿಸಿದೆ. ರಾಜ್ಯದಲ್ಲಿ ಬೆಳಗಾವಿ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಸ್ತೂರಿ ರಂಗನ್ ವರದಿಯ ಬಿಸಿ ತಟ್ಟಲಿದೆ. ರಾಜ್ಯದ ಒಟ್ಟು 1,576 ಗ್ರಾಮ ವ್ಯಾಪ್ತಿಯ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಈ ಕೆಳಗಿನಂತೆ ಗ್ರಾಮಗಳು ವಲಯದ ವ್ಯಾಪ್ತಿಗೆ ಸೇರಲಿವೆ.

ಉತ್ತರ ಕನ್ನಡ: 566 ಗ್ರಾಮಗಳು, ಶಿವಮೊಗ್ಗ: 446 ಗ್ರಾಮಗಳು, ಚಿಕ್ಕಮಗಳೂರು: 137 ಗ್ರಾಮಗಳು, ಬೆಳಗಾವಿ: 62 ಗ್ರಾಮಗಳು, ಕೊಡಗು: 53 ಗ್ರಾಮಗಳು, ಮೈಸೂರು: 48 ಗ್ರಾಮಗಳು, ದಕ್ಷಿಣ ಕನ್ನಡ: 43 ಗ್ರಾಮಗಳು, ಉಡುಪಿ: 34 ಗ್ರಾಮಗಳು, ಹಾಸನ: 30 ಗ್ರಾಮಗಳು, ಚಾಮರಾಜನಗರ: 20 ಗ್ರಾಮಗಳು.

ಪ್ರಮುಖ ಆತಂಕಗಳು ಮತ್ತು ಸವಾಲುಗಳು: ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳ ಜಾರಿಯಿಂದ ಸ್ಥಳೀಯರಿಗೆ ಎದುರಾಗಲಿರುವ ಪ್ರಮುಖ ಸಮಸ್ಯೆಗಳನ್ನು ಅವರು ಪಟ್ಟಿ ಮಾಡಿದರು.

ಗಡಿ ಗುರುತಿಸುವಿಕೆ ಕೊರತೆ: ಹಳೆಯ ಗ್ರಾಮಗಳ ವಿವರ ಹಾಗೂ ಸರ್ವೇ ನಂಬರ್ ಆಧಾರಿತ ನಿಖರವಾದ ಗಡಿಗಳ ಕೊರತೆಯಿದೆ.
ಭೂ ವರ್ಗೀಕರಣ ಗೊಂದಲ: ವಸತಿ ಪ್ರದೇಶಗಳು ಮತ್ತು ಅರಣ್ಯ ಕೃಷಿ ಪ್ರದೇಶಗಳನ್ನು ಒಂದೇ ವರ್ಗದಲ್ಲಿ ಸೇರಿಸಲಾಗಿದೆ.

ಆರ್ಥಿಕ ಹೊಡೆತ: ಭೂಮಿಯ ಮೌಲ್ಯ ಕುಸಿತಗೊಳ್ಳುವುದು ಹಾಗೂ ಬ್ಯಾಂಕ್ ಸಾಲ ಪಡೆಯುವ ಮೇಲಿನ ವ್ಯತಿರಿಕ್ತ ಪರಿಣಾಮ.
ಮೂಲಸೌಕರ್ಯ ನಿರ್ಬಂಧ: ರಸ್ತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಮೇಲಿನ ಕಠಿಣ ನಿಯಂತ್ರಣಗಳು ಮತ್ತು ಜೀವನೋಪಾಯಕ್ಕೆ ಸಂಚಕಾರ.

ಪ್ರಮುಖ ಸಲಹೆಗಳು ಮತ್ತು ಆಗ್ರಹಗಳು:
ಕೇರಳ ಮಾದರಿ ಅನುಸರಣೆ: ಬಡ ರೈತರು, ಅರಣ್ಯವಾಸಿಗಳು ಮತ್ತು ಕೃಷಿಕರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರವು ಕೇರಳದ ಮಾದರಿಯಲ್ಲಿ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಿ, ವಾಸ್ತವಿಕ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು.

ಪುನರ್ವಸತಿ ಖಾತರಿ: ಶರಾವತಿ ಸಂತ್ರಸ್ತರು 60 ವರ್ಷ ಕಳೆದರೂ ಇನ್ನೂ ಸರಿಯಾದ ಪುನರ್ವಸತಿ ಕಾಣದೆ ಸಂಕಷ್ಟದಲ್ಲಿದ್ದಾರೆ. ಅರಣ್ಯ ಸೂಕ್ಷ್ಮ ಪ್ರದೇಶದ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸಿದರೆ ಸೂಕ್ತ ಪುನರ್ವಸತಿ ಸಿಗುವುದಕ್ಕೆ ಏನು ಖಾತರಿ ಎಂದು ಪ್ರಶ್ನಿಸಿದರು.

ಸಮತೋಲಿತ ಅಭಿವೃದ್ಧಿ: ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಸ್ವಾಗತಿಸಿದ ಅವರು, ಪ್ರವಾಸೋದ್ಯಮ ಮತ್ತು ಹೋಂ-ಸ್ಟೇಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ ಎಂಬುದನ್ನು ಮರೆಯಬಾರದು ಎಂದರು. ನರ್ಮದಾ, ಕೃಷ್ಣಾ, ಕಾವೇರಿ ನದಿಗಳು ಹುಟ್ಟುವ ಪಶ್ಚಿಮಘಟ್ಟದ ನೆಲ, ಜಲ, ಅರಣ್ಯವನ್ನು ರಕ್ಷಿಸುವಾಗ ರೈತರು ಹಾಗೂ ಸ್ಥಳೀಯರ ಬದುಕಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿಬರ ಪರಿಹಾರದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಬಿ. ವೈ. ವಿಜಯೇಂದ್ರ