Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲಾಗಿದ್ದು
, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ‌ಕಾಮಗಾರಿ ಒಳಗೊಂಡಿದ್ದು ಆ ಮೂಲಕ ಜೆ.ಪಿ.ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್​​ಸಿಎಲ್ ಸಿಹಿ ಸುದ್ದಿ ನೀಡಿದೆ.


ಮುಂದಿನ ತಿಂಗಳ ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್ ನಲ್ಲಿ ಬಿಎಂಆರ್ ಸಿಎಲ್ ಸಿವಿಲ್​​ ಟೆಂಡರ್​​ ಕರೆದಿದೆ. ಮೂರು ಪ್ಯಾಜೇಜ್​​ಗಳಿಗೂ ಪ್ರತ್ಯೇಕ ಬಜೆಟ್​​ ನೀಡಲಾಗಿದೆ.


ಪ್ಯಾಕೇಜ್-1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್‌ತೆರವು‌ಒಳಗೊಂಡು ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ.


ಈ ಗುತ್ತಿಗೆಯಲ್ಲಿನ ಪ್ಯಾಕೇಜ್ ಮೊತ್ತ 1,375 ಕೋಟಿ ರೂ.ಗಳು. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಡಬಲ್ ಡೆಕ್ಕರ್​​ನ ಪ್ಯಾಕೇಜ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್​​ ಹೊಸಕೆರಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಸೇರಿವೆ.


ಪ್ಯಾಕೇಜ್-3ರಲ್ಲಿ ಕಾರಿಡಾರ್ 1 ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣಗಳು ಸೇರಿವೆ. ಪ್ಯಾಕೇಜ್-3ರ ಕಾರಿಡಾರ್-2ರಲ್ಲಿ ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು ಟೆಂಡೆರ್ ಗೆ ಇಟ್ಟ ಒಟ್ಟು ಮೊತ್ತ 1415 ಕೋಟಿ ರೂ.ಗಳಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಇನ್ನೂ ಆರಂಭವಾಗಿಲ್ಲ. ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು 2024ರ ಆಗಸ್ಟ್‌16ರಂದು ಅನುಮೋದನೆ ನೀಡಿತ್ತು.

ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಇನ್ನೂ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ ಎಂಬ ಬೇಸರ ಸಿಲಿಕಾನ್​​ ಸಿಟಿ ಮಂದಿಯನ್ನು ಕಾಡಿತ್ತು. ಈಗ ಬಿಎಂಆರ್ ಸಿಎಲ್ ಸಂಸ್ಥೆ ಟೆಂಡರ್ ಕರೆಯುವ ಮೂಲಕ ಬೆಂಗಳೂರು ಮಂದಿಗೆ ಶುಭ ಸುದ್ದಿ ನೀಡಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ