Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯವಂತ ಜೀವನ ಶೈಲಿಗೆ ಸ್ವಚ್ಛತೆ ಅಡಿಪಾಯ ಹಾಕಲಿದೆ-ವಾಸೀಂ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಸ್ವಚ್ಛತೆಗೆ ಸಾರ್ವಜನಿಕರು ಪೌರಕಾರ್ಮಿಕರ ಜೊತೆ ಕೈಜೋಡಿಸಿ ಪರಿಸರ ಕಾಪಾಡಿಕೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಸಾಕಷ್ಟು ಬಾರಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಹೇಳಿದರು. ಮುಂಜಾನೆ ನಗರದ ಸ್ವಚ್ಛತೆಯ ಸಂದರ್ಭದಲ್ಲಿ ಪ್ರಧಾನ ರಸ್ತೆಯ ಟಿ ಎಸ್ ಟಿ ಕಾಂಪ್ಲೆಕ್ಸ್ ಮುಂಬಾಗ ಕಿರಾಣಿ ಅಂಗಡಿ ಒಬ್ಬರು ಕಸದ ರಾಶಿಯನ್ನೇ ರಸ್ತೆ ಬದಿಯಲ್ಲಿ ಹಾಕಿರುವುದನ್ನು ನೋಡಿದ ನಗರ ಸಭೆಯ ಪೌರಾಯುಕ್ತ


ಎ ವಾಸೀಂ ಹಾಗೂ ಅರೋಗ್ಯ ನಿರೀಕ್ಷಕರಾದ ಸಂಧ್ಯಾ, ಅಶೋಕ್, ಮಹಾಲಿಂಗಪ್ಪ ರಸ್ತೆಯಲ್ಲಿ ಹಾಕಿರುವ ಕಸದ ರಾಶಿಯನ್ನು ಮತ್ತೆ ಆ ಕಸವನ್ನು ಅದೇ ಅಂಗಡಿಯ ಮುಂದೆ ಪೌರಕಾರ್ಮಿಕರು ಕಸವನ್ನು ಹಾಕಿ ಎಚ್ಚರಿಸಿದರು.

ಪೌರಾಯುಕ್ತರಾದ ಎ ವಾಸೀಂ ರವರು ಸ್ವಚ್ಛತೆಗೆ ಗಮನ ನೀಡದ ಕಿರಾಣಿ ಅಂಗಡಿ ಮಾಲೀಕರಿಗೆ ದಂಡ ಹಾಕುವಂತೆ ಆರೋಗ್ಯ ನಿರೀಕ್ಷಕರಿಗೆ ಹೇಳಿದರು. ಮತ್ತೆ ಇದೇ ರೀತಿ ನಡೆದುಕೊಂಡರೆ ಸಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ನಿರೀಕ್ಷಕರು ಹೇಳಿದರು.


ನಗರದ ಎಲ್ಲಾ ಅಂಗಡಿ ಮಾಲೀಕರಿಗೆ  ಕಿರಣಿ ಅಂಗಡಿ ಹಾಗೂ ಬಟ್ಟೆ ಅಂಗಡಿ ಚಿಕನ್ ಮಟನ್ ತರಕಾರಿ ಹಣ್ಣು ಹೂವು ಇತರೆ ಮಾರಾಟ ಮಾಡುವರು  ಘನತ್ಯಾಜ್ಯ ವಸ್ತುಗಳನ್ನು ಎಲ್ಲಂದರೆ ಅಲ್ಲೇ ಹಾಕಿದರೆ ನಗರಸಭೆ ವತಿಯಿಂದ ದಂಡ ಹಾಕಲಾಗುವುದು ಕಸವನ್ನು ಸಹ ನೀವೇ ತೆಗೆದು ಹಾಕಬೇಕಾಗುತ್ತದೆ ನಿಗದಿ ಮಾಡಿದ ಸ್ಥಳದಲ್ಲಿ ಕಸವನ್ನ ಹಾಕಿ ಅಥವಾ ಕಸವನ್ನು ಸಂಗ್ರಹಿಸಿಕೊಂಡು ನಗರಸಭೆಯ ಟ್ಯಾಕ್ಟರ್ ಬಂದಾಗ ಹಾಕಬೇಕು ನಗರದ ಸ್ವಚ್ಛತೆ ನಿಮ್ಮೆಲ್ಲರ ಆದ್ಯತೆ ಮುಂದಿನ ಯುವ ಪೀಳಿಗೆಗೂ ದಾರಿದೀಪವಾಗಲಿ ಎಂದು ವಾಸೀಂ ಹೇಳಿದರು.

ನಗರದ ಪ್ರಧಾನ ರಸ್ತೆಯ ಹಾಗೂ ಎಲ್ಲಾ ವಾರ್ಡಿನ ಸಾರ್ವಜನಿಕರು ರಸ್ತೆ ಬದಿಯಲ್ಲಿ ಬಿಸಾಕುವುದರಿಂದ ಹಂದಿಗಳ  ಹಾಗೂ ನಾಯಿಗಳ ಹಾವಳಿ ಹೆಚ್ಚಾಗುವುದರಿಂದ ಪರಿಸರ ಹಾಳಾಗುತ್ತದೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

ಸಾರ್ವಜನಿಕರು ಪೌರಕಾರ್ಮಿಕರ ಜೊತೆ ಕೈಜೋಡಿಸಿ ನಗರದ ಸ್ವಚ್ಛತೆಗೆ ಸಹಕರಿಸಿ ಸಾರ್ವಜನಿಕರು ಕಸ ಹಾಕಿದ್ದು ಕಂಡು ಬಂದಲ್ಲಿ ನಗರಸಭೆ ವತಿಯಿಂದ ದಂಡ ವಿಧಿಸುವುದರ ಜೊತೆಗೆ ಕಸವನ್ನು ಮತ್ತೆ ಹಾಕಿದವರ ಮನೆಯ ಅಥವಾ ಅಂಗಡಿಯ ಮುಂದೆ ಹಾಕಲಾಗುವುದು ಸ್ವಚ್ಛತೆಯನ್ನು ಸಾರ್ವಜನಿಕರೇ ಕಾಪಾಡದಿದ್ದರೆ ನಗರಸಭೆಯವರು ಎಷ್ಟು ಸ್ವಚ್ಛತೆ ಮಾಡಲು ಸಾಧ್ಯ ಘನ ತ್ಯಾಜ್ಯ ವಸ್ತುಗಳನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ನಗರಸಭೆಯ ಟ್ಯಾಕ್ಟರ್ ಬಂದಾಗ ಕಸವನ್ನು ಅದರೊಳಗೆ ಹಾಕಿ ಬೇಕಾಬಿಟ್ಟಿ ರಸ್ತೆಯಲ್ಲಿ ಬಿಸಾಕುವುದು ಚರಂಡಿಗೆ ಹಾಕುವುದು ಕಂಡು ಬಂದಲ್ಲಿ ಕಸವನ್ನು  ನೀವೇ ತೆಗೆದು ಹಾಕಬೇಕಾಗುತ್ತದೆ ಎಂದು ನಗರ ಸಭೆಯ ವತಿಯಿಂದ ಮುನ್ನೆಚ್ಚರಿಕೆ ನೀಡಲಾಯಿತು.

ಘನ ತ್ಯಾಜ್ಯ ನಿರ್ವಹಣೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. 'ನನ್ನ ಕಸ, ನನ್ನ ಜವಾಬ್ದಾರಿ' ಎಂಬ ಮನೋಭಾವನೆಯೊಂದಿಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡರೆ, ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡಬಹುದು.
ಎ.ವಾಸೀಂ, ಪೌರಾಯುಕ್ತರು, ನಗರ ಸಭೆ, ಹಿರಿಯೂರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ