Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಪುರಾತನ ಶಿಲಾ ಶಾಸನದ ಸುತ್ತ ನಿರ್ಮಿಸಿರುವ ಅಕ್ರಮ ಕಟ್ಟಡ ತೆರವುಗೊಳಿಸಿ

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಐತಿಹಾಸಿಕ ಪುರಾತನ ಇತಿಹಾಸ ಪ್ರಸಿದ್ಧ ಚಿತ್ರದುರ್ಗ ನಗರದಲ್ಲಿ ಶಿಲಾ ಶಾಸನದ ಸುತ್ತ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ನಗರಸಭೆಗೆ ದೂರು ನೀಡಿದರೂ ಇದುವರೆವಿಗೂ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ ಎಂದು ಆರೋಪಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಕೋಟೆಯನ್ನು ಅನೇಕ ರಾಜವಂಶರುಗಳ ಆಳ್ವಿಕೆಗೆ ಒಳಪಟ್ಟತಂತಹ ಅತ್ಯಂತ ಪುರಾತನ ಇತಿಹಾಸದ ನಗರವಾಗಿದೆ. ಆದರೆ ಇದನ್ನು ಹಾಳು ಮಾಡುವ ದುಷ್ಟ ಶಕ್ತಿಗಳು ಇತಿಹಾಸದ ಶಿಲಾ ಶಾಸನವನ್ನು ನಾಶ ಮಾಡುತ್ತಿದ್ದಾರೆ.

ಚಿತ್ರದುರ್ಗ ನಗರದ ನಗರಸಭೆ ವ್ಯಾಪ್ತಿಗೆ ಒಳಪಡುವ ಚೇಳುಗುಡ್ಡ ಸಮೀಪದಲ್ಲಿರುವ ಅಗಸನಕಲ್ಲು ರಸ್ತೆಯ ಪಕ್ಕದಲ್ಲಿರುವ ಬಂಡೆಯ ಮೇಲೆ ಏಕನಾಥೇಶ್ವರಿಯ ಶಿಲಾ ಶಾಸನವಿದ್ದು ಇದು ಇತಿಹಾಸದಲ್ಲಿ ಉಲ್ಲೇಖವಿದೆ.



ಆಗೀನ ಕಾಲದಲ್ಲಿ ವಿಜಯ ನಗರದ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ವಿಜಯನಗರದ ವಿಜಯರಾಯರಿಂದ ಒಳಿತಾಗಲಿ ಎಂದು ವಿರುಪಣ್ಣನವರು ತಮ್ಮ ತೋಟದ ಜಾಗವನ್ನು ಚಿತ್ರದುರ್ಗದ ಆದಿದೇವತ ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ದಾನ ಕೊಟ್ಟ ಘಟನೆಯು ಪುಸ್ತಕದಲ್ಲಿ ವಿವರಿಸಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಶಿಲಾ ಶಾಸನವಿದೆ.

ಇದನ್ನು ಹಾಳು ಮಾಡಲು ಶಾಸನವಿರುವ ಜಾಗವನ್ನು ಒತ್ತುವರಿ ಮಾಡಿ ನಗರಸಭೆಯಿಂದ ಯಾವ ಅನುಮತಿ ಪಡೆಯದೆ ಇತಿಹಾಸದ ಶಿಲಾ ಶಾಸನಕ್ಕೆ ಅಡ್ಡಲಾಗಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷದ್‌ನಿಂದ ಇತ್ತೀಚೆಗೆ ಚಿತ್ರದುರ್ಗ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು.

ದೂರು ನೀಡಿದ ನಂತರ ಇದರ ಕಾಮಗಾರಿ ಅರ್ಧಕ್ಕೆ ಸ್ಥಗೀತಗೊಳಿಸಲಾಗಿತ್ತು. ಶಿಲಾ ಶಾಸನಕ್ಕೆ ಅರ್ಧಕ್ಕೆ ನಿಂತ ಕಟ್ಟಡವು ಶಾಸನಕ್ಕೆ ಅಡ್ಡಲಾಗಿದೆ ಎಂದು ಮರುದೂರನ್ನು ತೆರವುಗೊಳಿಸುವಂತೆ ಮನವಿ ನೀಡಲಾಗಿತ್ತು. ಆದರೆ ನಗರಸಭೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

        ಆದ್ದರಿಂದ ಅಕ್ರಮ ಕಟ್ಟಡ ತೆರವು ಮಾಡಿ ಶಿಲಾ ಶಾಸನ ಉಳಿಸಿ ಇತಿಹಾಸ ರಕ್ಷಿಸಬೇಕೆಂದು ವಿನಂತಿ ಮಾಡಿದ್ದಾರೆ. ಇಲ್ಲವಾದಲ್ಲಿ ಭಕ್ತಾಧಿಗಳು ಹಾಗೂ ಹಿಂದೂ ಸಂಘಟನೆಗಳು ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


ಈ ಸಂದರ್ಭದಲ್ಲಿ ಪಿ. ರುದ್ರೇಶ್ ವಿಶ್ವ ಹಿಂದೂ ಪರಿಷದ್ ಮುಖಂಡರು, ಏಕನಾಥೇಶ್ವರಿ ಸಮಿತಿಯ ಹನುಮಂತ, ಶ್ರೀನಿವಾಸ್, ಲೀಲಾದರ್ ಠಾಕೂರ್, ಶಿವಶಕ್ತಿ ಬಾಲಾಜಿ, ಮಂಜು, ಗುರುರಾಜ, ಮಲ್ಲೇಶ್ಕಿರಣ್ ಕುಮಾರ್, ದಿಲೀಪ್ ಇತರರು ಇದ್ದರು.

 

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು