ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಗರ ಪೋಲಿಸ್ ಠಾಣೆಯಲ್ಲಿ ದೂರುದಾರರ ಸಭೆ ಏರ್ಪಡಿಸಲಾಗಿತ್ತುಸಭೆ ಕುರಿತು ಮಾತನಾಡಿದ ಠಾಣಾ ಎ.ಎಸ್.ಐ ನಾರಾಯಣಸ್ವಾಮಿ ಪ್ರತಿ ತಿಂಗಳು ನಡೆಯುವ ಈ ದೂರುದಾರರ ಸಭೆಯಲ್ಲಿ ನೊಂದ ದೂರುದಾರರ ಅಹವಾಲುಗಳನ್ನು ಆಲಿಸಿ ನ್ಯಾಯ ಕೊಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ರೌಡಿ ಪೆರೇಡ್ ಸೇರಿದಂತೆ ಡ್ರಗ್ಸ್ ಬಗ್ಗೆ ತಾಲೋಕಿನಾದ್ಯಂತ ಜಾಗೃತಿ ಸಭೆಗಳನ್ನು ಇಲಾಖೆ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಎ.ಎಸ್. ಐ ನಾರಾಯಣಸ್ವಾಮಿ,ಸಿಬ್ಬಂದಿಗಳಾದ ಅನಂತ ಕುಮಾರ್ ಎಚ್.ಸಿ.ರಘು.ಸಿ ಸೇರಿದಂತೆ ಸಾರ್ವಜನಿಕರು ಬಾಗವಹಿಸಿದ್ದರು.



