Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೆಲುವೆರುದ್ರಸ್ವಾಮಿ ಮಠದ ಅಭಿವೃದ್ದಿಗೆ ಸಹಕಾರ- ಶಾಸಕ ರಘುಮೂರ್ತಿ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಅತಿದೊಡ್ಡ ಜಾತ್ರೆಯಲ್ಲಿ ಒಂದಾದ ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಗೊಂಡನಹಳ್ಳಿ ಚೆಲುಮೆರುದ್ರಸ್ವಾಮಿ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದಿದ್ದು
, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಯಲುಸೀಮೆಯ ಈ ಭಾಗದ ಆರಾಧ್ಯದೈವವಾದ ಚೆಲುಮೆರುದ್ರಸ್ವಾಮಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ನೆಲೆಸಿ ಸಾವಿರಾರು ಭಕ್ತರಿಗೆ ಆಶೀರ್ವಾದಿಸಿದ್ದಾರೆ. ಚೆಲುಮೆರುದ್ರಸ್ವಾಮಿದಯದಿಂದ ಈ ಭಾಗದ ಜನರಲ್ಲಿ ಸುಖನೆಮ್ಮದಿ ನೆಲೆಸಿದೆ. ಪ್ರತಿವರ್ಷವೂ ಭಕ್ತರು ಶ್ರದ್ದೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ಧಾರೆ. ಚಿತ್ರದುರ್ಗ ಬೃಹನಮಠದ ಮುರುಘಾರಾಜೇಂದ್ರ ಶರಣರ ಆಡಳಿತದಲ್ಲಿ ಇನ್ನೂ ಅಭಿವೃದ್ದಿಹೊಂದಲಿ ಎಂದು ಆಶಿಸುವುದಾಗಿ ತಿಳಿಸಿದರು.

ಆಡಳಿತ ಮಂಡಳಿಯ ಡಾ.ಬಸವಕುಮಾರಸ್ವಾಮಿ ಮಾತನಾಡಿ, ಎಷ್ಟೇ ಕಾರ್ಯಒತ್ತಡ ಇರಲಿ ಶಾಸಕ ಟಿ.ರಘುಮೂರ್ತಿ ಚೆಲುವೆರುದ್ರಸ್ವಾಮಿ ಸನ್ನಿಧಿಗೆ ಬಂದು ಪೂಜಾಕಾರ್ಯದಲ್ಲಿ ಪಾಲ್ಗೊಂಡು ಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆಯೂ ಸಹ ಸಹಕಾರ ನೀಡುತ್ತಾ ಬಂದಿದ್ಧಾರೆ. ಈ ಸ್ವಾಮಿಯ ಧಯೆಯಿಂದ ಶಾಸಕರು ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿಯ ಅಧ್ಯಕ್ಷರಾಗಿದ್ಧಾರೆ. ಮುಂದಿನ ದಿನಗಳಲ್ಲಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವಂತಾಗಲಿ ಎಂದು ಸ್ವಾಮಿಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.

ಸ್ವಾಮಿಯ ಐತಿಹ್ಯ:- ಪವಾಡ ಪುರುಷರಾದ ಚಲುಮೆರುದ್ರಸ್ವಾಮಿ ನಾಗಗೊಂಡನಹಳ್ಳಿ ಬಳಿ ಹರಿಯುವ ವೇದಾವತಿ ನದಿಯ ದಂಡೆಯ ಮೇಲೆ ಇರುವ ಈಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದರು. ಇಲ್ಲಿನ ಸುತ್ತ ಮುತ್ತಲಿನ ಜನರು ನದಿ ಬಳಿ ದನಗಳನ್ನು ಮೇಯಿಸಲು ಬರುತ್ತಿದ್ದರಂತೆ.

ಆ ಸಮಯದಲ್ಲಿ ಸ್ವಾಮಿಗೆ ಹುಡುಗರು ಹಾಲನ್ನು ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಸ್ವಾಮಿ ತಮ್ಮ ಬೆತ್ತದಿಂದ ಮರಳನ್ನು ಮುಟ್ಟಿ ಪ್ರಸಾದವನ್ನಾಗಿ ಪವಾಡ ಮಾಡುತ್ತಿದ್ದರು. ಅದನ್ನು ದನ ಕಾಯುವ ಹುಡುಗರು ಸೇವಿಸುತ್ತಿದರು ಎನ್ನುವ ಪ್ರತೀತಿ ಇದೆ. ಹೀಗೆ ಪವಾಡ ಮಾಡುತ್ತಿದ್ದ ಚೆಲುಮೆಸ್ವಾಮಿಯನ್ನು ಈ ಭಾಗದ ಸುತ್ತು ಮುತ್ತಲಿನ ಹಳ್ಳಿಯ ಜನರು ವಿಶೇಷ ಪೂಜೆ ಸಲ್ಲಿಸಿಸುತ್ತಾರೆ.

ಜೊತೆಗೆ ಪ್ರತಿ ಮನೆಯಲ್ಲೂ ಚಲ್ಮೇಶ್, ಚಲುಮಪ್ಪ, ಚಲುಮೇರುದ್ರ, ಚಲುಮಕ್ಕ ಹೀಗೆ ಸ್ವಾಮಿಯ ಹೆಸರುಗಳು ಇಟ್ಟಿರುವ ನಿದರ್ಶನಗಳು ಇಂದಿಗೂ ಕಾಣಸಿಗುತ್ತವೆ. ಸ್ವಾಮಿಗೆ ಬೇಸಿದ ಅನ್ನದ ಬದಲಿ, ಈ ಮೊಳಕೆಕಟ್ಟಿದಕಾಳು, ಹಸಿಕಡಲೆ, ಬೆಲ್ಲ, ತೆಂಗಿನಕಾಯಿ, ನೆನೆಸಿದ ಅಕ್ಕಿಯಲ್ಲಿ ಪ್ರಸಾದ ಮಾಡಿ ಜಾತ್ರೆ, ರಥೋತ್ಸವ ಸಂದರ್ಭದಲ್ಲಿ ಭಾಗವಹಿಸುವ ಭಕ್ತರಿಗೆ ವಿತರಿಸುವುದು ಇಂದಿಗೂ ನಡೆದುಬಂದಿದೆ ಎನ್ನುತ್ತಾರೆ ಹಿರಿಯರು.



 ಬೃಹನ್ಮಮಠಖಾಸಮಠ ಗುರುಮಠಕಲ್‌ನ ಶಾಂತವೀರಗುರು ಮುರುಘರಾಜೇಂದ್ರಮಹಾಸ್ವಾಮಿ, ಸಾದರಹಳ್ಳಿ ಸಿದ್ದಲಿಂಗಸ್ವಾಮಿ, ರೈತ ಮುಖಂಡ ಕೆ.ಪಿ.ಭೂತಯ್ಯ, ಓಬಣ್ಣ, ಅಶೋಕ್, ಸಂತೋಷ್, ಮಂಜುನಾಥ್, ರಾಜೇಶ್, ರಾಜಣ್ಣ, ಲೋಕಣ್ಣ, ತಿರುಮಲೇಶ್, ಮಂಜುನಾಥ್, ರಂಜನ್, ಸಂಪತ್‌ಕುಮಾರ್, ಸಣ್ಣೀರನಾಯಕ, ಜೆ.ಎನ್. ಶ್ರೀನಿವಾಸ್, ಹನುಮಂತರಾಯ, ನರಸಿಂಹಪ್ಪ, ರವಿಚಂದ್ರ, ದಳಪತಿ, ಚೆಲುಮಪ್ಪ, ತಿಪ್ಪೇಸ್ವಾಮಿ, ಕೆಂಪೇಗೌಡ, ನಾಗಭೂಷಣ ಮುಂತಾದವರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ