Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬದಲಾವಣೆ.........ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು.......ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು......

ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು.....

ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........

ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು....... ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು.....

ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು......

ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು.......

ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು.........

ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು......

ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು.....

ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು......

ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು......

ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು.......

ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು.......

ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ ವೇಗ ಮತ್ತು ಸ್ಪರ್ಧೆಯ ಆಧುನಿಕ ತಂತ್ರಜ್ಞಾನ.....

ಕೆಲವು ಜನರ ಬದುಕಿನ ನಾಶಕ್ಕೆ ಕಾರಣವಾಗುತ್ತಿರುವ ಆನ್ಲೈನ್ ಗೇಮ್ ಗಳು.....

ಸಾವಿನ ವ್ಯಾಪಾರಿಗಳಾಗುತ್ತಿರುವ ಮಾದಕದ್ರವ್ಯ ಮಾರಾಟಗಾರರು.....

ಸುಳ್ಳುಗಳ ಸೃಷ್ಟಿಕರ್ತರಾಗುತ್ತಿರುವ ಸ್ವಯಂ ಘೋಷಿತ ದೇವಮಾನವರು.....

ಹೀಗೆ ಸಮಾಜ ತನ್ನ ಮೂಲ ಆಶಯದಿಂದ ನಿಧಾನವಾಗಿ ಈ ರೀತಿಯ ಬದಲಾವಣೆಯತ್ತ ಸಾಗುತ್ತಿದೆ‌. ಈ ಬದಲಾವಣೆಗಳು ಮೂಲ ಆಶಯದ ವಿರುದ್ಧ ದಿಕ್ಕಿನಲ್ಲಿ ವಿನಾಶದತ್ತ ಚಲಿಸುತ್ತಿವೆ‌. ಮನುಷ್ಯ ತನ್ನ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಈ ವ್ಯವಸ್ಥೆಗಳು ಈಗ ಅವನ ನಾಶಕ್ಕೆ ಬಳಕೆಯಾಗುತ್ತಿರುವುದು ಮಾನವ ಸಮಾಜದ ದುರಂತ‌.

ಈ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಮೂಲಕ ಈ ದುರಂತಗಳನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಪ್ರಕೃತಿಯೇ ಮುಂದೊಂದು ದಿನ ಪಾಠ ಕಲಿಸುವವರೆಗೂ ಮನುಷ್ಯನ ದುರಂತಗಳ ಸರಮಾಲೆ ನಡೆಯುತ್ತಲೇ ಇರುತ್ತದೆ.........

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ.....
ಲೇಖನ:ವಿವೇಕಾನಂದ. ಎಚ್. ಕೆ.
9663750451
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ