Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ದಿನ, ವಾರ, ತಿಂಗಳು, ವಾರ್ಷಿಕ ರಾಶಿ ಭವಿಷ್ಯ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಶಿ ಭವಿಷ್ಯ..........

ಮೇಷ ರಾಶಿ-
ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ.....
ವೃಷಭ ರಾಶಿ-
ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ.........

 ಮಿಥುನ ರಾಶಿ-
ನಿಮ್ಮ ಮನೆಯ ಹಿರಿಯರಿಗೆ ಆಗಾಗ ಅನಾರೋಗ್ಯ ಕಾಡುತ್ತದೆ. ಕಾಳಜಿ ವಹಿಸದಿದ್ದರೆ ಅನಾಹುತ ನಿಶ್ಚಿತ......... ಕರ್ಕಾಟಕ ರಾಶಿ-
ವಾಹನ ಪ್ರಯಾಣ ಮಾಡುವಾಗ ಅಪಘಾತವಾಗುವ ಸಾಧ್ಯತೆ ಇದೆ. ಪ್ರಯಾಣ ಮುಂದೂಡುವುದು ಉತ್ತಮ.......

 ಸಿಂಹ ರಾಶಿ-
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು ಮತ್ತು ಉದ್ಯೋಗ ಹೋಗುವ ಸಾಧ್ಯತೆಯೂ ಇದೆ. ಸ್ವಲ್ಪ ಹುಷಾರು......
ಕನ್ಯಾ ರಾಶಿ-
ಅನಿರೀಕ್ಷಿತ ಸುದ್ದಿ ಬರುತ್ತದೆ.  ಕೆಟ್ಟ ವಿಷಯಗಳು ಕೇಳಬೇಕಾಗಬಹುದು. ಮಾನಸಿಕವಾಗಿ ಸಿದ್ದರಾಗಿ......

 ತುಲಾ ರಾಶಿ-
ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಬಹುದು.........
ವೃಶ್ಚಿಕ ರಾಶಿ-
ಮಗ - ಮಗಳ ದಾಂಪತ್ಯದಲ್ಲಿ ಬಿರುಕು ಮೂಡಬಹುದು. ವಿಚ್ಛೇದನದ ಸಾಧ್ಯತೆ ಇದೆ........

 ಧನು ರಾಶಿ-
ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹೊಂದಿ ಕೆಟ್ಟ ದಾರಿ ಹಿಡಿಯಬಹುದು. ಎಚ್ಚರಿಕೆಯಿಂದ ಇರಿ.
ಮಕರ ರಾಶಿ-
ಮನೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ. ಅನಿರೀಕ್ಷಿತ ಘಟನೆಗಳು ನಡೆದು ಬಹಳ ನಷ್ಟ ಅನುಭವಿಸುವಿರಿ.......

 ಕುಂಭ ರಾಶಿ-
ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಕದಡುತ್ತದೆ. ಶಾಂತಿ ಇಲ್ಲವಾಗುತ್ತದೆ.
ಮೀನ ರಾಶಿ-
ಅನಿರೀಕ್ಷಿತ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಳೆದುಕೊಂಡಿರುವುದನ್ನು ಮತ್ತೆ ಪಡೆಯುವಿರಿ.....

ಇದು, ದಿನ, ವಾರ, ತಿಂಗಳು, ವಾರ್ಷಿಕ ಅಥವಾ ಜೀವನಪರ್ಯಂತ ಘಟಿಸಲಿರುವ ನಿಮ್ಮ ಭವಿಷ್ಯ. ದಿನನಿತ್ಯ ಟಿವಿ, ಪತ್ರಿಕೆ ಮುಂತಾದ ಎಲ್ಲಾ ಕಡೆಗಳಲ್ಲಿ ನಿಮ್ಮ ಹೆಸರಿನ ಮೇಲೆಯೋ, ಜನ್ಮ ನಕ್ಷತ್ರದ ಮೇಲೆಯೋ, ನಿಮ್ಮ ಹಸ್ತ ರೇಖೆಗಳ ಮೇಲೆಯೋ, ಕವಡೆ, ಗಿಣಿ ಮುಂತಾದವುಗಳ ಮೇಲೆಯೋ ಒಟ್ಟಿನಲ್ಲಿ ಆಯಾ ವಿಷಯದ ಪಂಡಿತರು ಈ ಭವಿಷ್ಯ ಹೇಳುತ್ತಾರೆ. ಇದರಲ್ಲಿಯೂ ಹಲವಾರು ವಿಧಾನಗಳು ಇವೆ.

 ಹಾಗೆಯೇ ದಿಕ್ಕು, ಬಣ್ಣ, ಸಂಖ್ಯೆ, ಜನ್ಮ ಜಾತಕ, ಇತ್ಯಾದಿ ಅಂಶಗಳ ಮೇಲೆಯೂ ಭವಿಷ್ಯ ನುಡಿಯಲಾಗುತ್ತದೆ. ಕೆಲವರು ಇದೊಂದು ವೈಜ್ಞಾನಿಕ ವಿದ್ಯೆ. ಗ್ರಹಗಳು, ನಕ್ಷತ್ರಗಳ ಚಲನವಲನಗಳನ್ನು ಅಭ್ಯಸಿಸಿ ಮನುಷ್ಯ ಇತಿಹಾಸದ ಅನುಭವಗಳ ಆಧಾರದ ಮೇಲೆ ಆತನ ಗುಣ ಸ್ವಭಾವಗಳನ್ನು ಗುರುತಿಸುವ ವಿಜ್ಞಾನವಿದು. ಖಚಿತ ಭವಿಷ್ಯ ಹೇಳುವುದು ಸಾಧ್ಯವಿಲ್ಲವಾದರು ಕೆಲವು ನಡೆಗಳನ್ನು ಗುರುತಿಸಬಹುದು.

ಈಗಿನ ಅನೇಕ ನಕಲಿ ಜ್ಯೋತಿಷಿಗಳ ವ್ಯಾಪಾರಿ ಮನೋಭಾವದಿಂದ ಇದು ಕಲುಷಿತಗೊಂಡಿದ್ದು ನಿಜವಾದ ಜ್ಯೋತಿಷ್ಯ ಶಾಸ್ತ್ರ ವೈಚಾರಿಕವಾದದ್ದು ಎಂದು ಸಮರ್ಥಿಸಿಕೊಳ್ಳುತ್ತಾರೆ....

 ಹೌದು,
ಕೆಲವೊಮ್ಮೆ ಅದರಲ್ಲೂ ನಮ್ಮ ಸಂಕಷ್ಟದ ಸಮಯದಲ್ಲಿ ಯಾರೋ ಜ್ಯೋತಿಷಿಗಳು ಮೇಲೆ ತಿಳಿಸಿದ ಅಂಶಗಳ ಆಧಾರದಲ್ಲಿ ಕೆಲವು ಊಹಾತ್ಮಕ ಅಥವಾ ಅವರು ಕಲಿತ ವಿದ್ಯೆಯ ನೆರವಿನಿಂದ ಕೆಲವು ಸಲಹೆ ಸೂಚನೆಗಳನ್ನು ನೀಡಬಹುದು. ಅದು‌ ಹಲವು ಬಾರಿ ನಿಜವೂ ಆಗಬಹುದು. ಅದು ಜ್ಯೋತಿಷ್ಯದ ಮೇಲೆ ನಂಬಿಕೆ ಹೆಚ್ಚಿಸುತ್ತದೆ. ಹಾಗಾದರೆ ಜ್ಯೋತಿಷ್ಯ ನಿಜವೇ ? 

ಒಣ ವೈಚಾರಿಕ ಪ್ರಜ್ಞೆಯೂ ಬೇಡ ಅಥವಾ ಹಿರಿಯರು ತೋರಿದ ಧರ್ಮ, ಸಂಪ್ರದಾಯದ ನಂಬಿಕೆಯ ದಾರಿಯೂ ಬೇಡ. ನಮ್ಮ ಇಂದಿನ ಅರಿವು ಅನುಭವದ ಮಿತಿಯಲ್ಲಿ ಇದನ್ನು ಯೋಚಿಸೋಣ......... 

ಇದು ಸಾರ್ವತ್ರಿಕ ಸತ್ಯವೇ ?
ವಿಶ್ವದ ಈಗಿನ ಸುಮಾರು 750 ಕೋಟಿ ಜನಸಂಖ್ಯೆಗೂ ಇದು ಅನ್ವಯವಾಗುತ್ತದೆಯೇ ಸೃಷ್ಟಿಯ ಎಲ್ಲಾ ಭೂ ಪ್ರದೇಶದಲ್ಲಿಯೂ  ಏಕ ಪ್ರಕಾರವಾಗಿ ಪರಿಣಾಮ ಬೀರುತ್ತದೆಯೇ ಮನುಷ್ಯರಿಗೆ ಮಾತ್ರವೇ ಅಥವಾ ಸಕಲ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆಯೇ ಬಣ್ಣ, ದಿಕ್ಕು, ಸಂಖ್ಯೆಗಳು ಮನುಷ್ಯನ ವ್ಯಾವಹಾರಿಕ ಅನುಕೂಲಕ್ಕಾಗಿ ಗುರುತಿಸುವಿಕೆಯ ಕಾರಣಕ್ಕಾಗಿ ನೀಡಿದ ಹೆಸರುಗಳಲ್ಲವೇ ?

ಸಾರ್ವಜನಿಕವಾಗಿ  ಪ್ರಾಕೃತಿಕ ವಿಕೋಪಗಳನ್ನು, ವೈಯಕ್ತಿಕವಾಗಿ ಮನುಷ್ಯನ ಏಳು ಬೀಳುಗಳನ್ಮು, ಯಶಸ್ಸು ವೈಫಲ್ಯಗಳನ್ನು, ಹುಟ್ಟು ಸಾವುಗಳನ್ನು ಖಚಿತವಾಗಿ ಮೊದಲೇ ಮಾಹಿತಿ ನೀಡಲು ಸಾಧ್ಯವೇ ? ಪ್ರಕೃತಿಯ ಎಲ್ಲಾ ಅಂಶಗಳನ್ನು ಜ್ಯೋತಿಷ್ಯ ಶಾಸ್ತ್ರ ಭೇದಿಸಿದೆಯೇ ? 

ಆರೋಗ್ಯವೇ ಇರಲಿ, ಆರ್ಥಿಕ ಪರಿಸ್ಥಿತಿಯೇ ಇರಲಿ, ತಂತ್ರಜ್ಞಾನವೇ ಇರಲಿ, ಮಾನಸಿಕ ಸಮತೋಲನವೇ ಇರಲಿ ಅಥವಾ ವ್ಯವಸ್ಥೆಯ ಯಾವುದೇ ವಿಷಯದಲ್ಲಿ ವಿಜ್ಞಾನ ಮತ್ತು ಜ್ಯೋತಿಷ್ಯದ ಮುಖಾಮುಖಿಯಲ್ಲಿ ಜ್ಯೋತಿಷ್ಯ ಹೆಚ್ಚು ಖಚಿತವಾದದ್ದು ಮತ್ತು ಸಾರ್ವತ್ರಿಕ ಸತ್ಯ ಎಂದು ನಿಮಗನಿಸುತ್ತದೆಯೇ ?

ಯಾವುದೋ ನಮ್ಮ ವೈಯಕ್ತಿಕ ನೆಲೆಯಲ್ಲಿ ಕೆಲವು ಘಟನೆಗಳು ಕಾಕತಾಳೀಯ ಅಥವಾ ಸಹಜ ಸ್ವಾಭಾವಿಕವಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾದಲ್ಲಿ ಅದನೇ ಸಂಪೂರ್ಣ ಸತ್ಯ ಎಂದು ಭಾವಿಸಬೇಕೆ ?

 ಈ ಕ್ಷಣದ ಆಧುನಿಕ ಸಮಾಜವನ್ನು ಗಮನಿಸಿದಾಗ ಇಡೀ ವಿಶ್ವದ ದಿನನಿತ್ಯದ ಆಗುಹೋಗುಗಳನ್ನು ಮುನ್ನಡೆಸುತ್ತಿರುವುದು ವಿಜ್ಞಾನವೇ ಅಥವಾ ಜ್ಯೋತಿಷ್ಯವೇ ?

 ಸಾವಿನ ಭಯ ಪಡದೆ, ಸೋಲಿನ ಆತಂಕಕ್ಕೆ ಒಳಗಾಗದೆ, ನಿಷ್ಕಲ್ಮಶ ಮನಸ್ಸಿನಿಂದ, ವಿಶಾಲ ಮನೋಭಾವದಿಂದ, ದೀರ್ಘಕಾಲದ ಮೌನದಲ್ಲಿ ಇದರ ಬಗ್ಗೆ ನೀವು ಯೋಚಿಸಿದರೆ ಬಹುಶಃ ವಾಸ್ತವಿಕ ಸತ್ಯ ನಿಮಗೆ ಅರ್ಥವಾಗಬಹುದು.

 ಬದುಕು ತುಂಬಾ ಸರಳವಾಗಿದ್ದಾಗ, ಮನುಷ್ಯ ಪ್ರಕೃತಿಯೊಂದಿಗೆ ಜೀವಿಸುತ್ತಿದ್ದಾಗ,‌ ಆತನ ಬೇಡಿಕೆಗಳು ಅನ್ನ ಆಹಾರಕ್ಕೆ ಸೀಮಿತವಾಗಿದ್ದಾಗ, ಅಕ್ಷರ ಜ್ಞಾನವಿಲ್ಲದ ಸಮಯದಲ್ಲಿ, ವಿಜ್ಞಾನ ಇನ್ನೂ ಅಸ್ತಿತ್ವವಿಲ್ಲದ ಕಾಲದಲ್ಲಿ ಜ್ಯೋತಿಷ್ಯ ಒಂದು ಸಲಹಾ ರೂಪದ ಮಾರ್ಗದರ್ಶನವಾಗಿ ಇದ್ದಿರಬಹುದು....

 ಆದರೆ ಇಂದಿನ ಸಂಕೀರ್ಣ ಆಧುನಿಕ ಸಮಾಜದಲ್ಲಿ ವಿಜ್ಞಾನವನ್ನು ತಿರಸ್ಕರಿಸಿ, ಜ್ಯೋತಿಷ್ಯವನ್ನು ಪುರಸ್ಕರಿಸಿ ನಮ್ಮ ದೇಶದ ಅಭಿವೃದ್ಧಿ ಸಾಧ್ಯವೇ ? ವೈಯಕ್ತಿಕ ಬದುಕಿನ ಯಶಸ್ಸು ನೆಮ್ಮದಿ ಸಾಧ್ಯವೇ ತಾಖತ್ತಿದ್ದರೆ ಹೇಳಿ ನಿಮ್ಮ  ಭವಿಷ್ಯ ಜೈಲಿನಲ್ಲಿರುವ ಖೈದಿಗಳಿಗೆ,.....

 ಧೈರ್ಯವಿದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ಆಸ್ಪತ್ರೆಯಲ್ಲಿ ಮಲಗಿರುವ ರೋಗಿಗಳಿಗೆ,...ಗೊತ್ತಿದ್ದರೆ ಹೇಳಿ ನಿಮ್ಮ ರಾಶಿಗಳ ಚಲನೆ ಭಿಕ್ಷುಕರಿಗೆ,....ತಿಳಿದಿದ್ದರೆ ಹೇಳಿ ನಿಮ್ಮ ಮುನ್ಸೂಚನೆ ಹೊಟ್ಟೆಪಾಡಿನ ವೇಶ್ಯೆಯರಿಗೆ,....ಅರಿತಿದ್ದರೆ ಹೇಳಿ ನಿಮ್ಮ ರಾಹುಕೇತುಗಳ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ,.....ಅರ್ಥವಾದರೆ ಹೇಳಿ ನಿಮ್ಮ ಭವಿಷ್ಯ ಅನಾಥಾಶ್ರಮದ ಮಕ್ಕಳಿಗೆ,..... 

ಬುದ್ದಿ ಇದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ವೃದ್ಧಾಶ್ರಮದ ಹಿರಿಯ ಜೀವಗಳಿಗೆ,....ಕುರಿ, ಕೋಳಿ, ನಾಯಿ, ಹಂದಿ, ಹಸುಗಳಿಗೆ ಹೇಳಿ ಅದರ ಆಯುಷ್ಯದ ಭವಿಷ್ಯ,.....ಗಾಳಿ, ನೀರು, ಬೆಳಕು, ಅರಣ್ಯಗಳಿಗೆ ಹೇಳಿ ನಿಮ್ಮ ಜ್ಯೋತಿಷ್ಯ,.... 

ಹಸು ಶ್ರೇಷ್ಠ -  ಹಂದಿ ಕನಿಷ್ಠ, ಗಂಡು ಶ್ರೇಷ್ಠ -  ಹೆಣ್ಣು ಕನಿಷ್ಠಬಿಳಿ ಶ್ರೇಷ್ಠ -  ಕಪ್ಪು ಕನಿಷ್ಠಪೂರ್ವ ಶ್ರೇಷ್ಠ - ಪಶ್ಚಿಮ ಕನಿಷ್ಠ9 ಶ್ರೇಷ್ಠ  - 7 ಅನಿಷ್ಠಶಾಸ್ತ್ರೀಯ ಸಂಗೀತ/ ನೃತ್ಯ ಶ್ರೇಷ್ಠಜಾನಪದ ಸಂಗೀತ/ನೃತ್ಯ ಕನಿಷ್ಠ, ಕಾಲ್ಪನಿಕ ದೇವರು ಶ್ರೇಷ್ಠ‌ - ವಾಸ್ತವ ಮನುಷ್ಯ ಕನಿಷ್ಠ, ಬಿಡಿ ಈ ಮೌಢ್ಯದ ತಾರತಮ್ಯವನ್ನು, ಬದುಕಿ ಸರಳವಾಗಿ - ಸಹಜವಾಗಿ, ಸೃಷ್ಟಿಗೆ ನಿಯತ್ತಾಗಿ......

 ಯೋಚಿಸಿ ನಿರ್ಧರಿಸುವ, ಮೇಲಿನ ಪ್ರಶ್ನೆಗಳಿಗೆ  ಉತ್ತರ ಹುಡುಕಿಕೊಳ್ಳುವ, ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯ ನಿಮಗಿದೆ.
ಲೇಖನ-ವಿವೇಕಾನಂದ. ಎಚ್. ಕೆ. 9844013068.........

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು