Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಸಿಎಂ ಶಿವಕುಮಾರ್ ಸದನದಲ್ಲಿ ವಡ್ಡ ಪದ ಬಳಕೆ, ಭೋವಿಶ್ರೀಗಳ ಖಂಡನೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸದನದಲ್ಲಿ ವಡ್ಡ ಎಂಬ ಪದ ಬಳಕೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಭೋವಿ ಗುರಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಚಿತ್ರದುರ್ಗ ನಗರದ ಭೋವಿ ಗುರುಪೀಠದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಡಿ.ಕೆ.ಶಿವಕುಮಾರ್ ರವರು ಸದನದಲ್ಲಿ ಇತ್ತಿಚೆಗೆ ಮೃತರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ನಿಧನದ ಹಿನ್ನಲೆಯಲ್ಲಿ ಅವರ ಬಗ್ಗೆ ಸಂತಾಪ ಸೂಚಿಸುವ ಸಮಯದಲ್ಲಿ ಅವರ ಆಡಿದ ಮಾತು ನಮ್ಮ ಸಮುದಾಯಕ್ಕೆ ಧಕ್ಕೆಯನ್ನುಂಟು ಮಾಡಿದೆ.

ಇದು ಖಂಡನೀಯ ಈ ಕೂಡಲೇ ಅವರು ಕ್ಷಮೆ ಕೇಳಬೇಕು. ಅವರು ಆಡಿದ ಮಾತು ವಾಪಸ್ ಪಡೆಯಬೇಕು ಆದೇ ರೀತಿ ಸದನದ ಕಡತದಲ್ಲಿ ನಮೂದಾಗಿರುವ ಆ ಪದ ತೆಗೆಯಬೇಕೆಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಆಗ್ರಹಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಮ್ಮ ಮಠಕ್ಕೂ ನಮ್ಮ ಸಮುದಾಯಕ್ಕೂ ಬಹಳ ಸಂಬಂಧ ಹೊಂದಿದ್ದಾರೆ. ಅವರಿಗೆ ಹಲವಾರು ಕೆಲಸಗಳನ್ನು ಹೇಳಿದ್ದೇವು ಅದನ್ನು ಅವರು ಚಾಚು ತಪ್ಪದೆ ಮಾಡಿದ್ದಾರೆ. ಇದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಮ್ಮ ಸಮುದಾಯಕ್ಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಮಂತ್ರಿಗಳಾಗಲು ಸಹಾ ಅವರು ನೆರವಾಗಿದ್ದಾರೆ. ಇದಲ್ಲದೆ ಚುನಾವಣೆಯ ಸಮಯದಲ್ಲಿ ಚಿತ್ರದುರ್ಗ ಹಾಗೂ ಬಾಗಲಕೋಟೆಯ ಮಠಗಳಿಗೆ ಭೇಟಿ ನೀಡಿ ನಮ್ಮ ಆರ್ಶೀವಾದ ಪಡೆದಿದ್ದಾರೆ. ತಮ್ಮ ಮಗಳ ಮದುವೆಗೂ  ನಮ್ಮನ್ನು ಆಹ್ವಾನ ಮಾಡಿದ್ದರು ಎಂದು ಸ್ವಾಮೀಜಿಗಳು ನೆನೆದರು.

ಸದನದಲ್ಲಿ ಅವರು ನಾನು ಚಿಕ್ಕವನಾಗಿದ್ದಾಗ ವಡ್ಡ ವಡ್ಡನಾಗಿದ್ದೇ ಎಂದು ಮಾತನಾಡಿದ್ದಾರೆ. ಅವರು ಮಾಡಿದ ಪದದ ಬಳಕೆಯಿಂದ ಅದು ಕಡತದಲ್ಲಿ ಸೇರಿ ಹೋಗುತ್ತದೆ. ಇದರಿಂದ ಅದು ಬೈಗುಳಾಗಿ ಉಳಿಯುತ್ತದೆ. ಮುಂದಿನ ದಿನದಲ್ಲಿ ಇದನ್ನು ಯಾರೂ ಬೇಕಾದರೂ ಬಳಕೆ ಮಾಡಬಹುದಾಗುತ್ತದೆ.

ಸಂವಿಧಾನಿಕ ಹುದ್ದೆಯಲ್ಲಿರುವರು ಈ ರೀತಿ ಮಾತುಗಳನ್ನು ಆಡುವಾಗ ಎಚ್ಚರ ವಹಿಸಬೇಕಿತ್ತು. ಈ ಮಾತುಗಳಿಂದ ನಮ್ಮ ಶಿಷ್ಯ ಸಮುದಾಯ ತುಂಬಾ ಆಂತಕಗೊಂಡಿದೆ. ಇವರ ಮೇಲೆ ದೂರು ದಾಖಲಿಸುವಂತೆ ನಮ್ಮ ಮೇಲೆ ಒತ್ತಡ ತರಲಾಗುತ್ತಿದೆ. ಆದರೆ ನಾವು ಶಾಂತಿಯಿಂದ ಇರುವಂತೆ ತಿಳಿಸಿದ್ದೇವೆ. ಈ ಮುಂಚೆ ಶಿವಕುಮಾರ್ ರವರಿಗೆ ಸಮಯ ನೀಡಿ ತದ ನಂತರ ಏನು ಆಗದಿದ್ದಾಗ ಮುಂದುವರೆಯಲಾಗುವುದೆಂದು ತಿಳಿಸಲಾಗಿದೆ ಎಂದು ಶ್ರೀಗಳು ಹೇಳಿದರು. ಡಿ.ಕೆ.ಶಿವಕುಮಾರ್ ರವರ ಮೇಲೆ ಸಮುದಾಯ ಅಪಾರವಾದ ಪ್ರೀತಿ ವಿಶ್ವಾಸ ಹೊಂದಿದೆ.

ಅವರು ನಮ್ಮ ಸಮುದಾಯದ ಮೇಲೆ ವಿಶ್ವಾಸ ಹೊಂದಿದ್ದಾರೆ. ನಮ್ಮಲ್ಲಿ ಯಾವುದೇ ದ್ವೇಷ ಇಲ್ಲ, ಆದರೆ ಸಮುದಾಯ ಎಂದು ಬಂದಾಗ ಮಾತ್ರ ನಾವು ಭಕ್ತರ ಪರವಾಗಿ ಇರಬೇಕಿದೆ. ಶಿವಕುಮಾರ್ ಆಡಿದ ಮಾತಿಗೆ ಕ್ಷಮೆ ಕೇಳಬೇಕು ಸದನದ ಕಡತದಿಂದ ಆಡಿದ ಮಾತು ವಾಪಸ್ ಪಡೆಯಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಭೋವಿ ಸಮಾಜದ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಇದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ