LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ತಾಲ್ಲೂಕನ್ನು 'ಬರಪೀಡಿತ ಪ್ರದೇಶ'ವೆಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡಿ: ಬಿಎಸ್ಪಿ ಒತ್ತಾಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸೂಕ್ತ ಮುಂಗಾರು ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು
, ತಾಲ್ಲೂಕಿನಲ್ಲಿ ತೀವ್ರ ಕೃಷಿ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕನ್ನು ಕೂಡಲೇ 'ಬರಪೀಡಿತ ಪ್ರದೇಶ' ಎಂದು ಘೋಷಿಸಬೇಕು ಹಾಗೂ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಸಮಿತಿಯು ತಹಶೀಲ್ದಾರ್ ಮುಖೇನ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಸಾಲದ ಸುಳಿಯಲ್ಲಿ ರೈತರು:
ಮನವಿ ಸಲ್ಲಿಸಿ ಮಾತನಾಡಿದ ಪಕ್ಷದ ನಾಯಕರು
, "ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ತಾವು ಬೆಳೆದ ತೋಟಗಾರಿಕೆ ಹಾಗೂ ಅಲ್ಪಾವಧಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಿತ್ಯವೂ ನೂರಾರು ಕೊಳವೆಬಾವಿಗಳನ್ನು ಕೊರೆಸುತ್ತಿದ್ದು, ನೀರು ಬೀಳದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಮಳೆಯೂ ಇಲ್ಲದೆ, ಅಂತರ್ಜಲವೂ ಸಿಗದೆ ಬೆಳೆಗಳೆಲ್ಲವೂ ಮಣ್ಣು ಪಾಲಾಗುತ್ತಿದ್ದು, ರೈತರು ತೀವ್ರ ಸಾಲದ ಸುಳಿಗೆ ಸಿಲುಕಿದ್ದಾರೆ," ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಹಿರಿಯೂರು ತಾಲ್ಲೂಕಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.

ಈ ನಿಯೋಗದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಯೋಜಕ ಕೆ.ಪಿ. ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಪ್ಪ ಉಪ್ಪಳಗೆರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ಜಗದೀಶ್, ತಾಲ್ಲೂಕು ಸಂಯೋಜಕ ನರಸಿಂಹಮೂರ್ತಿ, ಕಾರ್ಯದರ್ಶಿಗಳಾದ ರಂಗಸ್ವಾಮಿ ಕಳವಿಬಾಗಿ, ಮಹೇಶ್ ಕಾಟನಾಯಕನಹಳ್ಳಿ, ಕದುರಪ್ಪ ಶಿಡ್ಲಯನಕೋಟೆ, ಮೈಗಣ್ಣ ಇಕ್ಕನೂರು, ಲಕ್ಷ್ಮಿಕಾಂತ್, ಖಜಾಂಚಿ ರಂಗಸ್ವಾಮಿ ಹುಚ್ಚವ್ವನಹಳ್ಳಿ, ಯುವ ಘಟಕದ ಅಧ್ಯಕ್ಷ ದೊರೇಶ್ ಈಶ್ವರಗೆರೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜವಳಿ ಉತ್ಪನ್ನ ರಫ್ತುಗೆ ಸರ್ಕಾರ ಉತ್ತೇಜನ:ಆಯುಕ್ತ ಎ.ಬಿ. ಬಸವರಾಜು ಎಂಪಿಆರ್ ಎಸಿಎಸ್ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಭಾರತಕ್ಕೆ 39 ಪದಕ: ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಕಾವೇರಿ ವಿಚಾರದಲ್ಲಿ ಸರ್ಕಾರದ ವಿಫಲತೆ: ಮಳೆಯಿಂದಷ್ಟೇ ರೈತರಿಗೆ ಆಸರೆ—ವಿಪಕ್ಷ ನಾಯಕ ಆರ್‌‌. ಅಶೋಕ್ ವಾಗ್ದಾಳಿನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವೈಫಲ್ಯ: ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಸಂಪುಟ ವಿಸ್ತರಣೆ ಹೈ ಡ್ರಾಮಾ: ಕೊನೆ ಕ್ಷಣದಲ್ಲಿ ಮಂಕಾಳಗೆ ಕೊಕ್, ಎಸ್.ಎಸ್.ಎಂಗೆ ಒಲಿದ ಸಚಿವ ಸ್ಥಾನ!ಕೈ ಸಂಪುಟ ಪುನಾರಚನೆ ಬಿರುಗಾಳಿ: ಸಿದ್ದರಾಮಯ್ಯ ಆಪ್ತರಾಗಿದ್ದ 12 ಹಿರಿಯ ನಾಯಕರಿಗೆ ಕೊಕ್!ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ಬಿಸಿ: ಜಯಚಂದ್ರ ಬೆಂಬಲಿಗರು, ಕುಂಚಿಟಿಗ ಸಮಾಜ ಆಕ್ರೋಶ – ರಾಜೀನಾಮೆಗೆ ಜಯಚಂದ್ರ ಸಿದ್ಧ?ಕೈ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಟೀಲ್ ವೇದಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿದ ಸನಾತನ ಧರ್ಮದ ಪ್ರಸಾರಕ ವೇದವ್ಯಾಸರು: ಎಚ್ ಲಕ್ಷ್ಮೀದೇವಮ್ಮ