Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಿಳಾ ಸಾಧಕಿಯರಿಂದ ಸಾಮೂಹಿಕ ಸೂರ್ಯ ನಮಸ್ಕಾರ ಸಮರ್ಪಣೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವಾದ ಮಂಗಳವಾರ ಹಿಂದೂ ಧರ್ಮಿಯರ   ಪವಿತ್ರ ಹಬ್ಬವಾದ ರಥಸಪ್ತಮಿಯ ಅಂಗವಾಗಿ ಸೂರ್ಯ ದೇವರ ಪೂಜೆಯನ್ನು ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರು ಸಾಮೂಹಿಕವಾಗಿ 108 ಸೂರ್ಯನಮಸ್ಕಾರ, ಅಗ್ನಿಹೋತ್ರ ಹೋಮ ಮಾಡಿ ಸೂರ್ಯದೇವರಿಗೆ ಅರ್ಘ್ಯವನ್ನು ಸಮರ್ಪಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಕೆ ಅಂಬೇಕರ್ ಮಾತನಾಡಿ ರಥಸಪ್ತಮಿಯು ಸೂರ್ಯ ದೇವರಿಗೆ  ಸಮರ್ಪಿತವಾದ ಹಬ್ಬವಾಗಿದೆ ಈ ಪವಿತ್ರ ದಿನದಂದು ಸೂರ್ಯದೇವರಿಗೆ 108 ಸೂರ್ಯ ನಮಸ್ಕಾರ ದೊಂದಿಗೆ ಪೂಜೆ ಸಲ್ಲಿಸುವುದು ಪುಣ್ಯಕರ ಎಂದು ನಂಬಲಾಗಿದೆ 108 ಸಂಖ್ಯೆಯು ಹಿಂದೂ ಧರ್ಮದಲ್ಲಿ ಪವಿತ್ರವಾದ ಸಂಖ್ಯೆ ಎಂದು ಪರಿಗಣಿಸಲಾಗಿದೆ ಈ ಸಂಖ್ಯೆಯು ಬ್ರಹ್ಮಾಂಡದ ಮತ್ತು ಮಾನವ ದೇಹದೊಂದಿಗೆ ಸಂಬಂಧ ಹೊಂದಿದೆ 108 ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ಆಧ್ಯಾತ್ಮಿಕ ಮತ್ತು ದೈಹಿಕ ಲಾಭಗಳು ಸಿಗುತ್ತವೆ.

 ರಥಸಪ್ತಮಿಯಂದು ಅಗ್ನಿಹೋತ್ರದ ಮಹತ್ವ ಮಹತ್ವ : ಬೆಳಕು ಶಕ್ತಿ ಮತ್ತು ಜೀವದ ಮೂಲವಾಗಿದ್ದು ಅಗ್ನಿಹೋತ್ರವು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಒಂದು ಮಾರ್ಗವಾಗಿದೆ ಅಗ್ನಿಹೋತ್ರ ಮಾಡುವುದರಿಂದ ಪರಿಸರ ಶುದ್ಧೀಕರಣ ಆರೋಗ್ಯ ಮತ್ತು ಸಮೃದ್ಧಿ ಜನ್ಮಾಂತರಗಳ ಪಾಪಗಳನ್ನು ಕಳೆಯುವುದರ ಜೊತೆಗೆ ಫುಡ್ ನೇಮ್ ಅನ್ನು ಹೆಚ್ಚಿಸುತ್ತದೆ ಮತ್ತು ಮೋಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅದೇ ರೀತಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಅನುಗ್ರಹವನ್ನು ಪಡೆಯಬಹುದು ಹಾಗೂ ಇದು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುವ ಒಂದು ಮಾರ್ಗವಾಗಿದೆ ಎಂದು ನಂಬಲಾಗಿದೆ ಎಂದು ತಿಳಿಸಿದರು.

 ಬೆಳಗಿನ ಜಾವದ ಐದು ಗಂಟೆಗೆ ಸೂರ್ಯದೇವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ 20 ರಿಂದ 70 ವಯಸ್ಸಿನ ಎಲ್ಲಾ ಯೋಗ ಸಾಧಕರು ಸ್ವಲ್ಪವೂ ಆಯಾಸವಿಲ್ಲದೆ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸೂರ್ಯದೇವನಿಗೆ ಅಗ್ನಿಹೋತ್ರ ಕುಂಡಕ್ಕೆ ಸಮೀದ (ಕಟ್ಟಿಗೆ/ಬೆರಣಿ  ) ಅರ್ಪಿಸಿ, ಕೆಂಪು ಹೂವುಗಳು, ರಕ್ತ ಚಂದನ ಅಕ್ಷತೆಗಳಿಂದ ಕೂಡಿದ ಕೆಂಪು ನೀರಿನ ಅರ್ಗ್ಯವನ್ನು ಪವಿತ್ರ ಶ್ಲೋಕದೊಂದಿಗೆ ಸೂರ್ಯನಿಗೆ ಸಮರ್ಪಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ