Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮ ಮತ್ತು ದಾನ ಇವೆರಡರ ಸಮ್ಮಿಲನವೇ ಧರ್ಮಸ್ಥಳ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಪಿ.ಮಹದೇವಪುರ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.


ರೈತ ಮುಖಂಡ ನಾಗರಾಜ್ ಎ ಪರಶುರಾಂಪುರ ಮಾತನಾಡಿ, ಧರ್ಮ ಮತ್ತು ದಾನ ಇವೆರಡರ ಸಮ್ಮಿಲನವೇ ಧರ್ಮಸ್ಥಳ. ಹಾಗಾಗಿ ಧರ್ಮಸ್ಥಳದಲ್ಲಿ ದಾನಕ್ಕೆ ಮತ್ತು ಧರ್ಮಕ್ಕೆ ಕೊರತೆ ಇಲ್ಲ. ಧರ್ಮಸ್ಥಳ ಸಂಘವು ಮನೆಗೊಂದು ಶೌಚಾಲಯ, ಕೃಷಿ, ಚಟುವಟಿಕೆಗೆ, ಆರೋಗ್ಯ, ಕಾಳಜಿ ಮತ್ತು ಮಹಿಳೆಯರ ಸಬಲೀಕರಣಕ್ಕೋಸ್ಕರ ಮತ್ತು ಬಸವ ಬುದ್ಧ ಅಂಬೇಡ್ಕರರ ಆಶಯಗಳಂತೆ ಸಮ ಸಮಾಜದ ನಿರ್ಮಾಣದ ಕನಸನ್ನು ಹೊತ್ತು ಪ್ರತಿ ಹಳ್ಳಿಗಳಲ್ಲೂ ಒಂದಲ್ಲ ಒಂದು ರೀತಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಯು,

ಮೇರು ಪರ್ವತವಾಗಿ ನಿಂತಿರುವುದು ತುಂಬಾ ಸಂತೋಷದ ವಿಚಾರ, ವೀರೇಂದ್ರ ಹೆಗ್ಗಡೆಯವರು ಜಾತಿಯಲ್ಲಿ ಜೈನರಾದರೂ ಕೂಡ, 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳವನ್ನು ಹಿಂದೂಗಳ ಸಂಪ್ರದಾಯದಂತೆ ಧಾರ್ಮಿಕ ಸಂಪ್ರದಾಯಕ್ಕೆ ಧಕ್ಕೆ ಬರದಂತೆ ದೇಶದಾದ್ಯಂತ ಭಕ್ತರ ಮನಸುಗಳನ್ನ ಬೆಸೆದುಕೊಂಡಿರುವುದು ಈ ಪುಣ್ಯಕ್ಷೇತ್ರದ ಪವಾಡವೇ ಸರಿ ಎಂದು ನಾಗರಾಜ್ ಹೇಳಿದರು.


ನಾವು ಚಿಕ್ಕ ಮಕ್ಕಳಿದ್ದ ಕಾಲದಲ್ಲಿ ನನ್ನ ತಂದೆ ತಾಯಿ ಗುರು ಹಿರಿಯರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯವನ್ನ ರೂಪಿಸುವಂತೆ ಹರಕೆ ಕಟ್ಟಿಕೊಂಡು ವರ್ಷಕ್ಕೆ ಒಂದು ಬಾರಿ ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿಕೊಂಡು ಬರುತ್ತಿದ್ದು ಈಗಲೂ ಕೂಡ ನಮ್ಮ ಕಣ್ಮುಂದೆ ಕಾಣಸಿಗುತ್ತದೆ.

ಈ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಕುಟುಂಬಗಳಿಗೆ ಆರೋಗ್ಯ ಐಶ್ವರ್ಯಗಳನ್ನು ಕೊಟ್ಟು ಕರುಣಿಸಲಿ ಹಾಗೆ ಈ ಭಾಗದ ರೈತರ ಕನಸು ಭದ್ರಾ ಮೇಲ್ದಂಡೆಯ ಕೆರೆಗೆ ನೀರು ಬಿಡುವ ಕಾಮಗಾರಿ ಶೀಘ್ರ ಮುಗಿದು ಎಲ್ಲಾ ಕೆರೆಗಳಿಗೆ ನೀರು ತುಂಬುವಂತಾಗಲಿ ಎಂದು ಮಂಜುನಾಥನಲ್ಲಿ  ಪ್ರಾರ್ಥಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಲಯ ಮೇಲ್ವಿಚಾರಕಿ ಗೀತಾ  ಕಾರ್ಯಕ್ರಮಕ್ಕೆ ರಾತ್ರಿ ಹಗಲು ಕೆಲಸ ಮಾಡಿದ ಕೆಲವರನ್ನು ವೇದಿಕೆಯಲ್ಲಿ ಸ್ಮರಿಸಿಕೊಳ್ಳುತ್ತಾ, ಶ್ರೀ ಮಂಜುನಾಥ ಸ್ವಸಹಾಯ ಸಂಘವು ಧಾರ್ಮಿಕವಾಗಿ ಮುನ್ನಡೆಯುತ್ತಾ ಮಾನ್ಯ ವೀರೇಂದ್ರ ಹೆಗ್ಗಡೆ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ಷಮಿಸಬೇಕಾಗಿದೆ ಎಂದು ತಿಳಿಸಿದರು.


ಮಹದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರೇಶ್ ಮಾತನಾಡಿ ಇಂಥ ಪುಣ್ಯದ ಕೆಲಸಗಳನ್ನು ಮಾಡುವುದರ ಮುಖಾಂತರ ಗ್ರಾಮಗಳಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿರುವುದು ತುಂಬಾ ಸಂತೋಷದಾಯಕ ಎಂದು ತಿಳಿಸಿದರು.


ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಗೋವರ್ಧನ್, ಗೋಸಿಕೆರೆ ನಾಗೇಂದ್ರಪ್ಪ, ಒಕ್ಕೂಟದ ಮೇಲ್ವಿಚಾರಕ ಪ್ರವೀಣ್, ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಅನಿಲ್ ಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತ್ಯಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಓಬಳೇಶ್, ಸಮಿತಿಯ ಸದಸ್ಯರುಗಳು ಊರಿನ ಧರ್ಮ ಅಧಿಕಾರಿಗಳು ಸಾರ್ವಜನಿಕರು ಮಹಿಳೆಯರು ಭಾಗವಹಿಸಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ