Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರ ಒಕ್ಕಲೆಬ್ಬಿಸಿ ಅಂತ ಅಜ್ಜಯ್ಯ ಹೇಳಿದ್ದಾರಾ?: ಕುಮಾರಸ್ವಾಮಿ ತೀಕ್ಷ್ಣ ಪ್ರಶ್ನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆಯ ಬಿಡದಿ ಟೌನ್​ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ಬಿಗ್ ಫೈಟ್ ಶುರುವಾಗಿದೆ.

ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿರುವ ಹೆಚ್‌ಡಿಕೆ, "ಇದು ಟೌನ್​ಶಿಪ್ ಅಲ್ಲ, ಬದಲಾಗಿ ಲೂಟಿ ಮಾಡಲು ಹೂಡಿರುವ ಸ್ಕೀಮ್" ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ವಿರುದ್ಧ ಜೆಡಿಎಸ್‌ನಿಂದ ಉಗ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದು ನನ್ನ ಕನಸಿನ ಕೂಸು, ಇವರದ್ದಲ್ಲ!:
ಬಿಡದಿ ಟೌನ್​ಶಿಪ್ ಕಾಂಗ್ರೆಸ್ ನಾಯಕರ ಕಲ್ಪನೆಯಲ್ಲ ಎಂದು ನೆನಪಿಸಿದ ಕುಮಾರಸ್ವಾಮಿ, "ಬಿಡದಿ ಟೌನ್​ಶಿಪ್ ಅವರ ಕನಸಿನ ಕೂಸಲ್ಲ, ಅದು ನನ್ನ ಕನಸಿನ ಕೂಸು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್​ಶಿಪ್ ವಿಚಾರದಲ್ಲಿ ಇಟ್ಟುಕೊಂಡಿದ್ದ ಉದ್ದೇಶವೇ ಬೇರೆ, ಆದರೆ ಇವತ್ತು ಇವರು ಮಾಡುತ್ತಿರುವ ಉದ್ದೇಶವೇ ಬೇರೆಯಾಗಿದೆ. ರೈತರ ಭೂಮಿ ಲೂಟಿ ಹೊಡೆಯಲು ಈ ಪ್ಲಾನ್ ಮಾಡಲಾಗಿದೆ" ಎಂದು ಕಿಡಿಕಾರಿದರು.

ಅಜ್ಜಯ್ಯ ಹೇಳಿದ್ದಾರಾ ರೈತರ ಒಕ್ಕಲೆಬ್ಬಿಸಿ ಅಂತ?:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪರೋಕ್ಷವಾಗಿ ಚುಚ್ಚಿದ ಹೆಚ್‌ಡಿಕೆ, ದೈವಭಕ್ತಿಯನ್ನು ಮುಂದಿಟ್ಟುಕೊಂಡು ತೀಕ್ಷ್ಣ ಪ್ರಶ್ನೆ ಎಸೆದರು. "ಯಾವ ಪ್ರಮುಖ ನಿರ್ಧಾರಕ್ಕೂ ಮುನ್ನ ನೀವು ಅಜ್ಜಯ್ಯನ (ದೊಡ್ಡಾಲದಹಳ್ಳಿ ಅಜ್ಜಯ್ಯ) ಬಳಿ ಹೋಗ್ತೀರಲ್ಲ, ರೈತರ ಒಕ್ಕಲೆಬ್ಬಿಸಿ ಈ ರೀತಿ ಟೌನ್​ಶಿಪ್ ಮಾಡಿ ಅಂತ ಅಜ್ಜಯ್ಯ ನಿಮಗೆ ಹೇಳಿದ್ದಾರಾ?" ಎಂದು ಪ್ರಶ್ನಿಸಿದರು.

ರೈತರ ಪರ ಹೋರಾಟಕ್ಕೆ ಹೆಚ್‌ಡಿಕೆ ಸಿದ್ಧ:
ಕಳೆದ 450 ದಿನಗಳಿಂದ ಭೂಸ್ವಾಧೀನದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ರೈತರ ಧ್ವನಿಯಾಗುತ್ತೇವೆ: ಈಗಾಗಲೇ 450ಕ್ಕೂ ಹೆಚ್ಚು ದಿನಗಳಿಂದ ಹೋರಾಟ ಮಾಡುತ್ತಿರುವ ರೈತರ ಪರವಾಗಿ ನಾವು ನಿಲ್ಲಲಿದ್ದೇವೆ.

ಬಂಧನಕ್ಕೆ ಆಕ್ರೋಶ: ಪ್ರತಿಭಟನೆ ಹತ್ತಿಕ್ಕಲು ರೈತ ಮುಖಂಡರನ್ನು ಬಂಧಿಸುವ ಕೆಲಸವಾಗುತ್ತಿರುವುದು ಖಂಡನೀಯ.
ಖುದ್ದಾಗಿ ಕಣಕ್ಕೆ: ರೈತರ ಜಮೀನು ಉಳಿಸಲು ಅಗತ್ಯ ಬಿದ್ದರೆ ನಾನೇ ಖುದ್ದಾಗಿ ಹೋರಾಟದ ಕಣಕ್ಕೆ ಇಳಿಯಲಿದ್ದೇನೆ.

ರಾಜಕೀಯ ಸಂಘರ್ಷ ತೀವ್ರ:
ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್ ಶಿಪ್ ಹೆಸರಿನಲ್ಲಿ ರೈತರ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಈಗ ರಾಮನಗರ ಹಾಗೂ ಬೆಂಗಳೂರು ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಹೆಚ್.ಡಿ. ಕುಮಾರಸ್ವಾಮಿ ಅವರ ಈ ಆಕ್ರೋಶದ ನುಡಿಗಳು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಗರಾಭಿವೃದ್ಧಿ ಇಲಾಖೆ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ನಡುವೆ ದೊಡ್ಡ ಮಟ್ಟದ ಬೀದಿ ಹೋರಾಟಕ್ಕೆ ಸಾಕ್ಷಿಯಾಗುವ ಮುನ್ಸೂಚನೆ ನೀಡಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ನುಣುಚಿಕೊಳ್ಳುವಿಕೆ: ಹೂಡಿಕೆ ಕುಸಿತ ಪ್ರೊ. ಚಂದ್ರಶೇಖರ್ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆಸ್ಥಳೀಯ ಮುಖಂಡರೇ ಮಾಜಿ ಸಚಿವ ದಿ. ಸುಧಾಕರ್ ನುಡಿನಮನ ಮಾಡಲಿ:ಕಂದಿಕೆರೆ ಜಗದೀಶ್ಜೀವನದಲ್ಲಿ ಆಧ್ಯಾತ್ಮಿಕ ಶ್ರದ್ಧೆಯ ಪಾತ್ರ ಹಿರಿದು: ಮಾತಾಜೀ ತ್ಯಾಗಮಯೀಕಸದಲ್ಲೂ ಕಮಿಷನ್ ಲೂಟಿ: ಸಿಬಿಐಗೆ ಪ್ರಕರಣ ಒಪ್ಪಿಸಲು ಆರ್. ಅಶೋಕ್ ಸವಾಲು!ರೈತರ ಜಮೀನಿನ ಮೇಲೆ ಬುಲ್ಡೋಜರ್: ಕಾಂಗ್ರೆಸ್ ಸರ್ಕಾರಕ್ಕೆ ಆರ್. ಅಶೋಕ್ ಎಚ್ಚರಿಕೆಕೇಂದ್ರ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ ಆರ್. ಅಶೋಕ್ಹೊಸಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸಂಸದ ವಿ. ಸೋಮಣ್ಣ ಚಾಲನೆಕೆಆರ್ ಎಸ್ ನೀರಿನ ಮಟ್ಟ 81 ಅಡಿಗೆ ಕುಸಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್: ಶೀಘ್ರ ಪರಿಹಾರದ ಭರವಸೆ