ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ ಮಹಾರಾಜರು ಆಳಿದ ಐತಿಹಾಸಿಕ ಚಿತ್ರದುರ್ಗದಲ್ಲಿ ಪ್ರತಿ ವರ್ಷವೂ ದುರ್ಗೋತ್ಸವ ಆಚರಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಏಕಾಂಗಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಪ್ರತಿ ವರ್ಷವೂ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ, ಮುರುಘಾಮಠ, ಆಡುಮಲ್ಲೇಶ್ವರ, ಹಿರಿಯೂರಿನ ವಾಣಿವಿಲಾಸಸಾಗರ, ಚಳ್ಳಕೆರೆಯ ಪುಣ್ಯಕ್ಷೇತ್ರ ನಾಯಕನಹಟ್ಟಿ ಸೇರಿದಂತೆ ವೀಕ್ಷಣೆಗೆ ಅನೇಕ ಪ್ರವಾಸಿ ತಾಣಗಳಿವೆ.
ಹೆಚ್.ಆಂಜನೇಯರವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ದುರ್ಗೋತ್ಸವ ಆಚರಿಸಿದ್ದನ್ನು ಬಿಟ್ಟರೆ ಮತ್ತೆ ದುರ್ಗೋತ್ಸವವಾಗಿಲ್ಲ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ದುರ್ಗೋತ್ಸವ ಆಚರಿಸಿ ಪ್ರವಾಸಿಗರನ್ನು ಆಕರ್ಷಿಸಲಿ ಎಂದು ಗಣೇಶ್ ಒತ್ತಾಯಿಸಿದರು.



