Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಟಿ ರವಿಗೆ ಫೇಕ್ ಎನ್ ​ಕೌಂಟರ್ ಮಾಡಲು ಪೊಲೀಸರು ಮುಂದಾಗಿದ್ರಾ?

Advertisement
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಸಿ.ಟಿ.ರವಿ‌ವಿರುದ್ಧ ತರಾತುರಿಯಲ್ಲಿ ಎಫ್​ಐಆರ್ ಮಾಡಲಾಗಿದೆ. ಬೆಳಗಾವಿ ಕಮಿಷನರ್​ಗೆ ಕಾಮನ್ ಸೆನ್ಸ್ ಬೇಡ್ವಾ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ‌ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು
, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಜೊತೆಗೆ ಖಾನಾಪುರದಲ್ಲಿ ಕಮಿಷನರ್ ಯಾಕೆ ಮಾತನಾಡಿಲ್ಲ.

ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಸಹ ಖಾನಾಪುರ ಠಾಣೆಗೆ ಬಿಟ್ಟಿಲ್ಲ. ಛಲವಾದಿ ನಾರಾಯಣಸ್ವಾಮಿ ಹರಿಜನ ಅಂತ ಅವರ ಜೊತೆಗೆ ಕಮಿಷನರ್ ಹಾಗೇ ನಡೆದುಕೊಂಡ್ರಾ? ನಾವು ಯಾವತ್ತೂ ಅಸ್ಪೃಶ್ಯತೆ ಬೆಂಬಲಿಸಿಲ್ಲ. ಆದರೆ ಬೆಳಗಾವಿ ಪೊಲೀಸರು ಛಲವಾದಿ ನಾರಾಯಣಸ್ವಾಮಿ ಆ ಜನಾಂಗದವರೆಂದು ಆ ರೀತಿ ನಡೆದುಕೊಂಡಿರಬಹುದು ಎಂದು ಜೋಶಿ ಗಂಭೀರ ಆರೋಪ ಮಾಡಿದರು.

ಸಿ.ಟಿ.ರವಿಗೆ ಪೊಲೀಸರು ಫೇಕ್ ಎನ್​ಕೌಂಟರ್ ಮಾಡಲು ಮುಂದಾಗಿದ್ರಾ? ಕಬ್ಬಿನ ಗದ್ದಗೆ, ಕಂಕರ್ ಮಶಿನ್​ಗೆ, ಅರಣ್ಯಕ್ಕೆ ಯಾಕೆ ರವಿ ಅವರನ್ನು ಕರೆದುಕೊಂಡು ಹೋಗಿದ್ದರು. ಮಾಧ್ಯಮವರು ಸಾಹಸ ಮಾಡಿ ಅವರನ್ನು ಬೆನ್ನುಹತ್ತಿದ್ದಕ್ಕೆ ಸಿ.ಟಿ. ರವಿ ಜೀವ ಉಳಿಸಿದ್ದಾರೆ ಎಂದು ಜೋಶಿ ಆರೋಪಿಸಿದರು. ಇದು ರಾಜಕೀಯ ದ್ವೇಷ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಹಾಗಿದ್ದರೆ ಅವರ ಉದ್ದೇಶವೇನು? ನೀವು ಬಳ್ಳಾರಿಗೆ ಹೋಗಿ ತೊಡೆ ತಟ್ಟಿದಾಗ ನಮ್ಮ ಸರ್ಕಾರ ಇತ್ತು. ಆಗ ಪೊಲೀಸರಿಂದ ರಕ್ಷಣೆ ನೀಡಿತ್ತಲ್ವಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವಾಗ ಕಾಂಗ್ರೆಸ್ ಅವರಿಗೆ ಯಾವ ನಾಯಿ ಕಡಿದಿತ್ತು? ಎಂದು ಜೋಶಿ ಅವರು ಖಾರವಾಗಿ ಪ್ರಶ್ನಿಸಿದರು.

ಸಿ.ಟಿ.ರವಿ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಏನು ಗೊತ್ತಿಲ್ಲ ಅಂದ್ರೆ ಹೇಗೆ? ಕಾಂಗ್ರೆಸ್​ನವರು ನಾಯಿ ಕಡಿದವರಂತೆ ವರ್ತನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸತತ ಸೋಲಿನಿಂದ ಹತಾಶೆಗೊಂಡಿದೆ. ಹರಿಯಾಣ, ಮಹಾರಾಷ್ಟ್ರದಲ್ಲಿ ಹೀನಾಯವಾಗಿ ಸೋತಿದೆ. ವಿರೋಧ ಪಕ್ಷವೂ ಸಹ ಕಾಂಗ್ರೆಸ್ ಆಗಿಲ್ಲ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಬಿಜೆಪಿ ಸಂಸದನನ್ನು ಮೊಣಕೈಯಿಂದ ತಳ್ಳಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗೆದ್ದ ನಂತರ ಇಡೀ ಜಗತ್ತೇ ಗೆದ್ದಂತೆ ಕಾಂಗ್ರೆಸ್​ ವರ್ತಿಸುತ್ತಿದೆ. ರಾಹುಲ್ ಗಾಂಧಿ ತಮ್ಮ ಸೋಲನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್ ‌ಜೋಶಿ‌ಹರಿಹಾಯ್ದರು.

ನೆಹರು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅತ್ಯಂತ ಘೋರ ಅಪಮಾನ ಮಾಡಿದ್ದರು. ಅಂಬೇಡ್ಕರ್ ರಾಜೀನಾಮೆಯಿಂದ ಏನು ವ್ಯತ್ಯಾಸ ಬೀಳಲ್ಲ ಅಂತ ಪತ್ರ ಬರೆದಿದ್ದಾರೆ. ನೆಹರು ಭಾರತ ರತ್ನ, ಇಂದಿರಾಗಾಂಧಿ ಭಾರತ ರತ್ನ, ರಾಜೀವ ಗಾಂಧಿ ಭಾರತರತ್ನ ತಮಗೆ ತಾವೇ ಕೊಟ್ಟುಕೊಂಡರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಬಿಜೆಪಿ ಬೆಂಬಲಿತ ಕಾಂಗ್ರೆಸ್ ಅಲ್ಲದ ಪಕ್ಷ ಬರಬೇಕಾಯಿತು ಎಂದು ಪ್ರಲ್ಹಾದ್ ‌ಜೋಶಿ‌ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಾರೆ. ನೆಹರು ಅವರು ಮೀಸಲಾತಿ ಬಗ್ಗೆ ಕ್ವಾಲಿಟಿ ಬಗ್ಗೆ ಮಾತನಾಡಿದ್ದು ರೆಕಾರ್ಡ್ ಇದೆ. ಈ ವಿಚಾರವಾಗಿ ಕರ್ನಾಟಕದಲ್ಲಿ ಸದನದಲ್ಲಿ ಗಲಾಟೆ ಮಾಡಿ ಸಿ. ಟಿ. ರವಿ ಅವರನ್ನು ಹತ್ತಿಕ್ಕಲು ಪ್ರಯತ್ನ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಮಾತು, ಸರ್ಕಾರಗಳು ಬದಲಾಗುತ್ತವೆ. ವಾಟ್ ಬ್ಲಡಿ ಡಿಡ್ ಮಿಸ್ಟರ್ ಕಮಿಷನರ್. ಬಾಲಿಶ ಹೇಳಿಕೆ ನೀಡತ್ತೀರಿ. ಅಧಿಕಾರಿಗಳು ಕಾನೂನು ಬಾಹಿರ ಅಧಿಕಾರ ಬಳಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಸಿ. ಟಿ. ರವಿಗೆ ನಮ್ಮ ಪಕ್ಷ ಎಲ್ಲ ಸಹಾಯ ಮಾಡುತ್ತದೆ. ಅಧಿಕಾರಿಗಳ ವರ್ತನೆಯನ್ನು ತೀವ್ರವಾಗಿ‌ಖಂಡನೆ ಮಾಡುತ್ತೇನೆ ಎಂದು ಪ್ರಲ್ಹಾದ್ ‌ಜೋಶಿ‌ಹೇಳಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ